ನವದೆಹಲಿ: ಐಪಿಎಲ್ ವೇಳಾಪಟ್ಟಿಯಿಂದ ಡಬಲ್ ಹೆಡರ್ಗಳನ್ನು (ದಿನಕ್ಕೆ 2 ಪಂದ್ಯ) ಕೈಬಿಟ್ಟು, ಒಂದು ದಿನಕ್ಕೆ ಒಂದೇ ಪಂದ್ಯ ಆಯೋಜಿಸಬೇಕೆಂದು ಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ಬೇಡಿಕೆ ಇಟ್ಟಿದ್ದು, ಬಿಸಿಸಿಐ ಇದಕ್ಕೆ ಸಮ್ಮತಿಸುವ ನಿರೀಕ್ಷೆ ಇದೆ. ಆದರೆ ಪಂದ್ಯಗಳನ್ನು ರಾತ್ರಿ 8ರ ಬದಲಾಗಿ 7 ಅಥವಾ 7.30ಕ್ಕೆ ಆರಂಭಿಸುವ ಬೇಡಿಕೆಗೆ ಫ್ರಾಂಚೈಸಿಗಳಿಂದ ವಿರೋಧ ವ್ಯಕ್ತವಾಗಿದೆ.
ಐಪಿಎಲ್ನಲ್ಲಿ ಸಾಮಾನ್ಯವಾಗಿ ವಾರಾಂತ್ಯದ ದಿನಗಳಲ್ಲಿ 2 ಪಂದ್ಯಗಳು ನಡೆಯುತ್ತವೆ. ಇದರಿಂದ ಮೊದಲ ಪಂದ್ಯ ಸಂಜೆ 4 ಗಂಟೆಯಿಂದಲೇ ಆರಂಭವಾಗುತ್ತವೆ. ಈ ಪಂದ್ಯಗಳಿಗೆ ಕಡಿಮೆ ಟಿಆರ್ಪಿ ಸಿಗುತ್ತಿವೆ ಎಂದು ದೂರಿರುವ ಸ್ಟಾರ್ ಸ್ಪೋರ್ಟ್ಸ್, ಒಂದು ದಿನಕ್ಕೆ ಒಂದೇ ಪಂದ್ಯ ಆಯೋಜಿಸಬೇಕೆಂದು ಬಿಸಿಸಿಐಗೆ ಮನವಿ ಸಲ್ಲಿಸಿದೆ. ದಿನಕ್ಕೆ ಒಂದೇ ಪಂದ್ಯ ನಡೆಸುವುದಾದರೆ ಏಪ್ರಿಲ್ವರೆಗೆ ಕಾಯದೆ ಮಾರ್ಚ್ 29ರಿಂದಲೇ ಐಪಿಎಲ್ ಟೂರ್ನಿಗೆ ಚಾಲನೆ ನೀಡಬೇಕಾಗುತ್ತದೆ.