ಒನ್ ಡೇ ಖಾತಾ ದಂಧೆ; ದಸ್ತಾವೇಜು ನೋಂದಣಿ ಬಳಿಕ ಡಿಲೀಟ್​

Sub Register

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯದಲ್ಲಿನ ಸೈಟ್, ವಿಲ್ಲಾ, ಕಟ್ಟಡ ಸೇರಿದಂತೆ ಸ್ಥಿರಾಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿರುವ ಬೆನ್ನಲ್ಲೇ ‘ಒನ್ ಡೇ ಡಿಜಿಟಲ್ ಖಾತಾ’ ದಂಧೆ ಶುರುವಾಗಿದೆ. ಸ್ಥಿರಾಸ್ತಿ ನೋಂದಣಿಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಆದರೆ, ಜನರು ಇ-ಖಾತಾ ಇಲ್ಲದೆ ಪರದಾಡುತ್ತಿದ್ದಾರೆ. ಇವರನ್ನೇ ಟಾರ್ಗೆಟ್ ಮಾಡಿ ಸ್ಥಳೀಯ ಸಂಸ್ಥೆಗಳ ಅಧಿಕಾರಿ, ಸಿಬ್ಬಂದಿ ಜತೆಗೆ ಕೆಲ ದಲ್ಲಾಳಿಗಳು ಒನ್ ಡೇ ಇ-ಖಾತಾ ನೀಡುವ ದಂಧೆ ಶುರು ಮಾಡಿದ್ದಾರೆ. ಕೆಲ ಅಧಿಕಾರಿಗಳು ತುರ್ತು ಅಗತ್ಯ ಇರುವ ಆಸ್ತಿ ಮಾಲೀಕರಿಂದ ಡಿಜಿಟಲ್ ಖಾತಾ ಹಣ ಸುಲಿಗೆಗೆ ಇಳಿದಿದ್ದು, ಅಸಲಿ ಖಾತಾವನ್ನು ಕೊಡುತ್ತಿಲ್ಲ. ಕೇವಲ ರಿಜಿಸ್ಟ್ರೇಷನ್​ಗೆ ಅನುಕೂಲ ಮಾಡಿಕೊಟ್ಟು ಆನಂತರ ಕೈಕೊಡುವ ಕೆಲಸ ಮಾಡುತ್ತಿದ್ದಾರೆ. ಕಂದಾಯ ಇಲಾಖೆಯ ಇ-ಖಾತಾ ಯೋಜನೆಗೆ ಕೆಲ ಅಧಿಕಾರಿ ವರ್ಗ ಮತ್ತು ಏಜೆಂಟ್​ಗಳೇ ತಿಲಾಂಜಲಿ ಇಟ್ಟಾಗಿದೆ.

ಏನಿದು ಹೊಸ ದಂಧೆ..?: ಕಾವೇರಿ 2.0 ಸಾಫ್ಟ್​ವೇರ್ ಜತೆಗೆ ಇ-ಸ್ವತ್ತು, ಇ-ಆಸ್ತಿ ಮತ್ತು ಯುಎಲ್​ಎಂಎಸ್ ತಂತ್ರಾಂಶ ಲಿಂಕ್ ಮಾಡಲಾಗಿದೆ. ಸಬ್ ರಿಜಿಸ್ಟ್ರಾರ್​ಗಳು ಕಾವೇರಿ ಸಾಫ್ಟ್​ವೇರ್​ನಲ್ಲಿ ಸಿಗುವ ಡಿಜಿಟಲ್ ದಾಖಲೆ ಪತ್ರ ರಿಜಿಸ್ಟ್ರೇಷನ್ ಮಾಡಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಇ-ಆಸ್ತಿ ತಂತ್ರಾಂಶದಲ್ಲಿ ಇ-ಖಾತಾ ವಿತರಿಸದೇ ಇದ್ದರೂ ಅಥವಾ ದಾಖಲೆ ಅಪೂರ್ಣ ಇದ್ದರೂ ಅಂತಹ ಆಸ್ತಿಗಳಿಗೆ ಪಿಐಡಿ (ಸ್ವತ್ತಿನ ಗುರುತಿನ ಸಂಖ್ಯೆ) ಸೃಷ್ಟಿಸಿ ಕಾವೇರಿ 2.0 ತಂತ್ರಾಂಶಕ್ಕೆ ಲಿಂಕ್ ಮಾಡುತ್ತಾರೆ. ಉಪ ನೋಂದಣಿ ಕಚೇರಿಯಲ್ಲಿ ರಿಜಿಸ್ಟ್ರೇಷನ್ ಮುಗಿದ ಮೇಲೆ ಸಾಫ್ಟ್ ವೇರ್​ನಲ್ಲಿ ಇ-ಖಾತಾ ಡಿಲೀಟ್ ಮಾಡುತ್ತಾರೆ. ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಇದು ಶುರುವಾಗಿದ್ದು, ಇದಕ್ಕೆ ಕನಿಷ್ಠ 50 ಸಾವಿರ ರೂ. ವರೆಗೂ ಲಂಚ ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ.

ಇದ್ದರೂ ಇಲ್ಲದಂತೆ ಮಾಡುವುದು: ಬಿಡಿಎ ಅಭಿವೃದ್ಧಿಪಡಿಸಿರುವ ಬಡಾವಣೆ ಮತ್ತು ವಸತಿ ಯೋಜನೆ ಆಸ್ತಿಗಳಿಗೆ ಯುನಿಫೈಡ್ ಲ್ಯಾಂಡ್ ಮ್ಯಾನೇಜ್ಮೆಂಟ್ ಸಿಸ್ಟಂನಲ್ಲಿ (ಯುಎಲ್​ಎಂಎಸ್) 2016ರಿಂದ ಇ-ಖಾತಾ ವಿತರಿಸಿದೆ. ಜತೆಗೆ ಕಾವೇರಿ 2.0 ಸಾಫ್ಟ್​ವೇರ್​ಗೆ ಲಿಂಕ್ ಮಾಡಿದೆ. ಇದೀಗ ಇ-ಖಾತಾ ಕಡ್ಡಾಯ ಆಗಿರುವ ಕಾರಣ ಬಿಡಿಎ ಕೆಲ ಅಧಿಕಾರಿಗಳು, ಉದ್ದೇಶಪೂರ್ವಕವಾಗಿ ಕಾವೇರಿ 2.0ಗೆ ಲಿಂಕ್ ಮಾಡಿರುವ ಇ-ಖಾತಾ ಇರುವ ಆಸ್ತಿಗಳ ವಿವರವನ್ನು ಡಿಲೀಟ್ ಮಾಡುವುದು ಅಥವಾ ಸರ್ವರ್ ಡೌನ್ ಮಾಡುವುದು ಮಾಡುತ್ತಾರೆ. ನೋಂದಣಿ ಪ್ರಕ್ರಿಯೆಗೆ ತುರ್ತು ಅಗತ್ಯ ಇದ್ದವರು ಬಿಡಿಎಗೆ ಹೋದರೆ ಲಂಚ ಪಡೆದು ಮತ್ತೆ ಲಿಂಕ್ ಮಾಡಿ ಕೊಡುವ ಹೊಸ ದಂಧೆ ಶುರುವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಸಂಕಷ್ಟದಲ್ಲಿ ಸಬ್ ರಿಜಿಸ್ಟ್ರಾರ್​ಗಳು: ಭೌತಿಕ ಅಥವಾ ಕೈಬರಹ ಖಾತಾ ಪರಿಗಣಿಸದೆ ಕಾವೇರಿ 2.0ರಲ್ಲಿ ಸಿಗುವ ಇ-ಖಾತಾ ಸ್ವೀಕರಿಸಿಯೇ ರಿಜಿಸ್ಟ್ರೇಷನ್ ಮಾಡಬೇಕೆಂದು ಸಬ್ ರಿಜಿಸ್ಟ್ರಾರ್​ಗಳಿಗೆ ಸೂಚಿಸಲಾಗಿದೆ. ಇ-ಆಸ್ತಿ ಮತ್ತು ಇ-ಸ್ವತ್ತು ಸಾಫ್ಟ್​ವೇರ್​ನಲ್ಲಿಯೇ ಅಕ್ರಮ ಎಸಗಿ ಕಾವೇರಿ 2.0ಕ್ಕೆ ಲಿಂಕ್ ಮಾಡಿದರೆ ಯಾವ ರೀತಿ ಪತ್ತೆ ಹಚ್ಚುವುದು ಎಂಬುದು ಯಕ್ಷಪ್ರಶ್ನೆಯಾಗಿದೆ. ಈಗಾಗಲೇ ಗ್ರಾಮ ಪಂಚಾಯಿತಿಯ ಇ-ಸ್ವತ್ತು ಸಾಫ್ಟ್​ವೇರ್​ನಲ್ಲಿ ನಕಲಿ ದಾಖಲೆ ಮೇಲೆ ಇ-ಖಾತಾ ವಿತರಿಸುವ ಹಗರಣ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ಇದೆ ಮಾದರಿ ಇ-ಆಸ್ತಿಯಲ್ಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾವಿರಾರು ಬಿ-ಖಾತಾ ಬದಲಿಗೆ ಎ-ಖಾತಾ ವಿತರಿಸಿರುವ ಅಕ್ರಮ ನಡೆದಿದೆ. ಇದೀಗ ಮತ್ತೆ ನಕಲಿ ದಾಖಲೆ ಮೇಲೆ ಇ-ಖಾತಾ ವಿತರಿಸಿ ಕಾವೇರಿ 2.0 ಸಾಫ್ಟ್ ವೇರ್​ಗೆ ಸಂಯೋಜನೆ ಮಾಡಿದರೆ ಸಬ್ ರಿಜಿಸ್ಟ್ರಾರ್​ಗಳ ಕೊರಳಿಗೆ ಸುತ್ತಿಕೊಳ್ಳಲಿದೆ. ಮತ್ತೊಂದೆಡೆ ಕೇಂದ್ರ ನೋಂದಣಿ ಕಾಯ್ದೆ 1908ರ 22-ಬಿ, ಕಾಯ್ದೆ-81ಎಗೆ ತಿದ್ದುಪಡಿ ತಂದಿರುವ ಪರಿಣಾಮ ಸಬ್ ರಿಜಿಸ್ಟ್ರಾರ್​ಗಳಿಗೆ ಹೊಸ ಸಂಕಷ್ಟ ಎದುರಾಗಿದೆ.

ಪಾಕ್​ಗೆ ತೆರಳಲು ಅನುಮತಿ ನೀಡದ ಕೇಂದ್ರ ಸರ್ಕಾರ; ಹೈಬ್ರಿಡ್​ ಮಾದರಿಯಲ್ಲಿ Champions Trophy?

ಉಸಿರಿರುವವರೆಗೂ Darshan ನನ್ನ ಮಗ, ಅದು ಎಂದಿಗೂ ಬದಲಾಗಲ್ಲ: ಸುಮಲತಾ ಅಂಬರೀಷ್​

Share This Article

Acohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Acohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…

ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಪ್ರಯೋಜನಕಾರಿ; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಸೀಬೆಹಣ್ಣು ತಿನ್ನುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ತಲೆಯಿಂದ ಕಾಲ್ಬೆರಳು ಉಗುರುಗಳವರೆಗೆ ಆರೋಗ್ಯಕರವಾಗಿರಲು ಇದು ಕಿತ್ತಳೆಗಿಂತ ಹೆಚ್ಚು…

ಕಾಂತಿಯುತ ತ್ವಚೆ ನಿಮ್ಮದಾಗಬೇಕೇ?; ಮಲಗುವ ಮುನ್ನ ಈ ಟಿಪ್ಸ್​ ಫಾಲೋ ಮಾಡಿ | Health Tips

ಸುಂದರ, ಆಕರ್ಷಣಿಯ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಹಗಲಿನಲ್ಲಿ ಮಾತ್ರವಲ್ಲ ರಾತ್ರಿ ವೇಳೆಯು ಚರ್ಮದ ಕಾಳಜಿ…