ಮಾನವೀಯತೆ, ಸಮಾನತೆ ಸಾರುವ ಹಬ್ಬ ಓಣಂ

blank
blank

ಎನ್.ಆರ್.ಪುರ: ಮಾನವೀಯತೆ ಮತ್ತು ಸಮಾನತೆಯನ್ನು ಸಾರುವ ಹಬ್ಬ ಓಣಂ ಎಂದು ರೋಮನ್ ಕ್ಯಾಥೋಲಿಕ್ ಚರ್ಚ್ ವಿಗಾರ್ ಜನರಲ್ ಾದರ್ ಟಿನೋ ಹೇಳಿದರು. ಯಂಗ್‌ಮೆನ್ಸ್ ಕ್ರಿಶ್ಚಿಯನ್ಸ್ ಅಸೋಷಿಯೇಷನ್‌ನಿಂದ ಲಿಟ್ಟಲ್ ್ಲವರ್ ಸಮುದಾಯ ಭವನದಲ್ಲಿ 15 ಚರ್ಚ್ ನವರು ಒಟ್ಟಾಗಿ ಆಚರಿಸಿದ ಓಣಂ ಹಬ್ಬದ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕದಲ್ಲಿ ದಸರಾ ನಾಡ ಹಬ್ಬವಾಗಿರುವ ರೀತಿ, ಕೇರಳದಲ್ಲಿ ಓಣಂ ನಾಡಹಬ್ಬವಾಗಿದೆ ಎಂದರು.
ಓಣಂ ಪ್ರಯುಕ್ತ ಬಿಡಿಸುವ ಪೂಕಳಂ(ಹೂಗಳ ರಂಗೂಲಿ)ಪ್ರಕೃತಿಯ ಆರಾಧನೆ ಮತ್ತು ಎಲ್ಲರನ್ನೂ ಒಂದು ಗೂಡಿಸುವ ಸಂಕೇತವಾಗಿದೆ. ಎಲ್ಲರನ್ನೂ ಪ್ರೀತಿಸಬೇಕು.ಮಹಾಬಲಿಯ ರಾಜನ ರೀತಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಎಲ್ಲಾ ಕ್ರಿಶ್ಚಿಯನ್ ಪಂಗಡದವರನ್ನು ಒಗ್ಗೂಡಿಸಿ ಓಣಂ ಆಚರಿಸುತ್ತಿರುವುದು ಸಂತಸದ ವಿಷಯ ಎಂದರು.
ಓಣಂ ಹಬ್ಬ ಆಚರಣಾ ಸಮಿತಿಯ ಖಜಾಂಚಿ ಪಿ.ಜೆ.ಅಂಟೋಣಿ ಮಾತನಾಡಿ, ಕೇರಳದಲ್ಲಿ ನಾಡ ಹಬ್ಬವಾಗಿರುವ ಓಣಂ ಅನ್ನು ಯಾವುದೇ ಭೇದವಿಲ್ಲದೆ ಸಂಭ್ರಮದಿಂದ ಆಚರಿಸುತ್ತಾರೆ. ಇದು ವಿಶಿಷ್ಟ ಆಹಾರ ಪದ್ಧತಿ ಹಾಗೂ ಸಂಸ್ಕೃತಿ ಬಿಂಬಿಸುವ, ಹಬ್ಬವಾಗಿದೆ. ಪ್ರಪಂಚದಾದ್ಯಂತ ಕ್ರಿಶ್ಚಿಯನ್ ಸಮುದಾಯದಲ್ಲಿ ಐದು ಸಾವಿರಕ್ಕೂ ಹೆಚ್ಚು ಬೇರೆ, ಬೇರೆ ಪಂಗಡಗಳಿವೆ. ತಾಲೂಕಿನ ವ್ಯಾಪ್ತಿಯಲ್ಲಿರುವ 15 ಪಂಗಡಗಳನ್ನು ಒಗ್ಗೂಡಿಸುವುದ ಕಷ್ಟವಾಗಿದೆ. ಹಿಂದು ಐತಿಹ್ಯ ಹೊಂದಿರುವ ಓಣಂನ್ನು ಕ್ರಿಶ್ಚಿಯನ್ ಸಮುದಾಯದವರು ಆಚರಿಸುವುದು ವಿಶೇಷ. ಕೇರಳಿಗರಿಗೆ ಮಲಯಾಳಂ ಮಾತೃ ಭಾಷೆಯಾಗಿದ್ದರೆ, ಕನ್ನಡ ಅನ್ನದ ಭಾಷೆಯಾಗಿದೆ. ಎಲ್ಲ ಧರ್ಮಿಯರು ಸೇರಿ ಆಚರಿಸುವ ಹಬ್ಬವಾಗಿದೆ.
ವೈ.ಎಂ.ಸಿ.ಎ ಅಧ್ಯಕ್ಷ ಎಂ.ಪಿ.ಸನ್ನಿ, ಸೇಂಟ್‌ಮೇರಿಸ್ ಚರ್ಚ್‌ನ ಾ.ಬೆನ್ನಿಮ್ಯಾಥ್ಯೂ,ಮುತ್ತಿನಕೊಪ್ಪ ಚರ್ಚ್‌ನ ಪಾ.ಎಲ್ದೋಸ್, ವರ್ಕಾಟೆ ಚರ್ಚ್‌ನ ಾ.ಸಿನೋಜ್, ಸೇಂಟ್‌ಜಾನ್ ಚರ್ಚ್‌ನ ಾ.ಜೋನ್ಸನ್, ಸೇಂಟ್‌ಜಾರ್ಜ್ ಚರ್ಚ್‌ನ ಶೇವೆಲಿಯಾರ್ ಟಿ.ವಿ.ವಿಜಯನ್, ನಿರ್ದೇಶಕ ಈ.ಸಿ.ಜೋಯಿ, ಸಿಜ್ಜು ಇದ್ದರು.

Share This Article

ಪುಷ್ಯ ನಕ್ಷತ್ರಕ್ಕೆ ಸೂರ್ಯನ ಎಂಟ್ರಿ! ಈ ತಿಂಗಳು 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Astrology

Astrology : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಜನಿಸಿದ ರಾಶಿಚಕ್ರ ಚಿಹ್ನೆ ಮತ್ತು ನಕ್ಷತ್ರವು ಅವರ…

ಮುಖದ ಸೌಂದರ್ಯಕ್ಕೆ ಐಸ್​​ಕ್ಯೂಬ್.. ಕೂಲ್.. ಕೂಲ್! ಐಸ್‌ಕ್ಯೂಬ್‌ನಿಂದ ಸೌಂದರ್ಯದ ಆರೈಕೆ.. Ice Facial Benefits

Ice Facial Benefits:  ಮಹಿಳಯರು ಸೌಂದರ್ಯಪ್ರಿಯರು. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಾಗೂ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು  ಮಾರುಕಟ್ಟೆಯಲ್ಲಿ…

ಮೇಕೆ ಹಾಲು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳೇನು ಗೊತ್ತಾ?Goat Milk Health Benefits

Goat Milk Health Benefits :  ಸಾಮಾನ್ಯವಾಗಿ ನಾವು ಹಸುವಿನ ಹಾಲು ಅಥವಾ ಎಮ್ಮೆ ಹಾಲು…