More

    ಡಿ.12ರಂದು ಅಮ್ಮತ್ತಿಯಲ್ಲಿ ವಾಲಗತಾಟ್ ನಮ್ಮೆ

    ಸಿದ್ದಾಪುರ: ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ವತಿಯಿಂದ ಎರಡನೇ ವರ್ಷದ ರಾಜ್ಯ ಮಟ್ಟದ ಕೊಡವ ವಾಲಗತ್ತಾಟ್ ನಮ್ಮೆಯನ್ನು ಅಮ್ಮತಿ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಮುಲ್ಲೇಂಗಡ ಮಧೋಶ್ ಪೂವಯ್ಯ ತಿಳಿಸಿದ್ದಾರೆ.

    ಅಮ್ಮತಿ ಕೊಡವ ಸಮಾಜದ ಸಹಕಾರದಲ್ಲಿ ಎರಡನೇ ವರ್ಷದ ಕೊಡವ ವಾಲತ್ತಾಟ್ ನಮ್ಮೆಯನ್ನು ಆಯೋಜಿಸಲಾಗಿದ್ದು ಸ್ಪರ್ಧಿಗಳು ಡಿ.2ರ ಒಳಗೆ ತಮ್ಮ ಹೆಸರನ್ನು ವಿರಾಜಪೇಟೆಯ ಮೂರ್ನಾಡು ರಸ್ತೆಯಲ್ಲಿರುವ ತೂಕ್ ಬೊಳಕ್ ಕೊಡವ ವಾರಪತ್ರಿಕೆಯ ಕಚೇರಿಯಲ್ಲಿ ಅಥವಾ ಫೋನ್ ಮೂಲಕ ನೋಂದಾಯಿಸಲು ಪ್ರಕಟಣೆಯಲ್ಲಿ ಕೋರಿದ್ದಾರೆ.

    ಡಿ.12ರಂದು ಅಮ್ಮತ್ತಿ ಕೊಡವ ಸಮಾಜದ ಅವರಣದಲ್ಲಿ ಕೊಡವ ವಾಲಗತ್ತಾಟ್ ನಮ್ಮೆಯನ್ನು ಆಯೋಜಿಸಲಾಗಿದ್ದು ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ತಲಾ ಐದು ವಿಭಾಗದಲ್ಲಿ ಸ್ಪರ್ಧೆ ನಡೆಯಲ್ಲಿದ್ದು ಪ್ರಾಥಮಿಕ ವಿಭಾಗ ಎಂದು 1ರಿಂದ 7ನೇ ತರಗತಿಯವರೆಗೆ, 8ನೇ ತರಗತಿಯಿಂದ 10ನೇ ತರಗತಿಯವರೆಗೆ ಹೈಸ್ಕೂಲ್ ವಿಭಾಗ, ಒಂದನೇ ಪಿಯುಸಿಯಿಂದ 3ನೇ ಪದವಿಯವರೆಗೆ ಕಾಲೇಜು ವಿಭಾಗ, ಕಾಲೇಜಿನ ನಂತರ 60 ವಯಸ್ಸಿನವರೆಗೆ ಮತ್ತೊಂದು ವಿಭಾಗ, 60 ವಯಸ್ಸಿನ ಮೇಲ್ಪಟ್ಟು ಹಿರಿಯ ನಾಗರಿಕರ ವಿಭಾಗ ಹೀಗೆ ಐದು ವಿಭಾಗಗಳಲ್ಲಿ ಪುರುಷರು ಮಹಿಳೆಯರು ಎಂದು ತಲಾ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಮಧೋಶ್ ಪೂವಯ್ಯ ತಿಳಿಸಿದ್ದಾರೆ.

    ಕಳೆದ ವರ್ಷ ಮೊದಲ ಬಾರಿಗೆ ವಿರಾಜಪೇಟೆ ಕೊಡವ ಸಮಾಜದಲ್ಲಿ ಯಶಸ್ವಿ ಕೊಡವ ವಾಲಗತ್ತಾಟ್ ನಮ್ಮೆಯನ್ನು ಆಯೋಜಿಸಲಾಗಿದ್ದು ಜನಮನ್ನಣೆ ಪಡೆದಿತ್ತು. ಈ ಬಾರಿ ಅಮ್ಮತ್ತಿ ಕೊಡವ ಸಮಾಜದ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಪರ್ಧಿಗಳು ಮಾತ್ರವಲ್ಲದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts