20 ವರ್ಷದ ಯುವಕನೊಂದಿಗೆ ಓಡಿಹೋಗಿದ್ದ ಅಪ್ರಾಪ್ತೆಗೆ ಗ್ರಾಮದ ಹಿರಿಯರು ಕೊಟ್ಟ ಶಿಕ್ಷೆ ಕ್ಯಾಮರಾದಲ್ಲಿ ಸೆರೆ!

ಹೈದರಾಬಾದ್‌: ಹಲವಾರು ಜನರ ಸಮ್ಮುಖದಲ್ಲಿಯೇ ಗ್ರಾಮದ ಹಿರಿಯರು ಅಪ್ರಾಪ್ತೆಗೆ ಚೆನ್ನಾಗಿ ಥಳಿಸಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕೆ ಪಿ ದೊಡ್ಡಿ ಗ್ರಾಮದಲ್ಲಿ ನಡೆದಿದ್ದು, ವಿಡಿಯೋ ವೈರಲ್‌ ಆಗಿದೆ.

ಸಂತ್ರಸ್ತೆಯನ್ನು ಅಪ್ರಾಪ್ತೆ ಎನ್ನಲಾಗಿದ್ದು, ತನ್ನ 20 ವರ್ಷದ ಸಂಬಂಧಿಯೊಂದಿಗೆ ಓಡಿ ಹೋಗಿದ್ದಳು. ಬಳಿಕ ಗ್ರಾಮಕ್ಕೆ ದಂಪತಿಯನ್ನು ಕರೆತಂದು ಗ್ರಾಮದ ಹಿರಿಯರೆದುರು ನಿಲ್ಲಿಸಲಾಗಿತ್ತು. ಈ ವೇಳೆ ಹಿರಿಯರು ತಮ್ಮ ಸಂಬಂಧವನ್ನು ಮುಂದುವರಿಸದಂತೆ ದಂಪತಿಗೆ ಎಚ್ಚರಿಕೆ ನೀಡಿದ್ದಾರೆ.

ವಿಡಿಯೋದಲ್ಲಿ 20 ವರ್ಷದ ಯುವಕ ಮೈದಾನವೊಂದರಲ್ಲಿ ನೆಲವನ್ನು ನೋಡುತ್ತಾ ಕುಳಿತಿದ್ದಾನೆ ಮತ್ತು ಗ್ರಾಮದ ಹಿರಿಯರು ಆತನೆದುರೇ ಬಾಲಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಕೆ ನೀಡಿದ ಉತ್ತರಕ್ಕೆ ಸಮಾಧಾನಗೊಳ್ಳದ ಹಿರಿಯ ಮೊದಲಿಗೆ ಕೈಯಲ್ಲೇ ಹೊಡೆದು ಬಳಿಕ ಕೋಲಿನಿಂದ ಚೆನ್ನಾಗಿ ಥಳಿಸಿದ್ದಾನೆ.

ಘಟನೆ ಕುರಿತಂತೆ ಬಾಲಕಿಯ ಪಾಲಕರು ಸೇರಿದಂತೆ ಇದುವರೆಗೂ ಯಾರೊಬ್ಬರು ದೂರು ನೀಡಲು ಮುಂದೆ ಬಂದಿಲ್ಲ. ನಮ್ಮ ಪರವಾಗಿಯೇ ಗ್ರಾಮದ ಹಿರಿಯರು ಮಧ್ಯೆ ಪ್ರವೇಶಿಸಿದ್ದಾರೆ ಎಂದು ತಿಳಿಸಿರುವ ಪಾಲಕರು ದೂರು ನೀಡಲು ನಿರಾಕರಿಸಿದ್ದಾರೆ ಎಂದು ಅನಂತಪುರ ಜಿಲ್ಲೆಯ ಪೊಲೀಸ್‌ ಮುಖ್ಯಸ್ಥ ಬಿ ಯೆಸುಬಾಬು ತಿಳಿಸಿದ್ದಾರೆ.

ಬಾಲಕಿಯೊಂದಿಗೆ ಯುವಕ ದೈಹಿಕ ಸಂಬಂಧ ಹೊಂದಿದ್ದಾಗಿ ಆಕೆ ತಿಳಿಸಿದರೆ ಆತನ ವಿರುದ್ಧವೂ ಪೊಕ್ಸೊ ಕಾಯಿದೆಯಡಿ ದೂರು ದಾಖಲಿಸಿಕೊಳ್ಳುವುದಾಗಿ ತಿಳಸಿರುವ ಪೊಲೀಸರು, ಯಾವುದೇ ದೂರು ದಾಖಲಾಗದಿದ್ದರೆ ಪೊಲೀಸರೆ ಎಸ್‌ಟಿ, ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *