28ರಂದು ರಾಷ್ಟ್ರ ಮಟ್ಟದ ಸಂಶೋಧನಾ ಸಮ್ಮೇಳನ

ರಾಮದುರ್ಗ: ಬಹುವಿಧದ ವಿಷಯಗಳಲ್ಲಿ ಸಂಶೋಧನೆಗಳು ಮತ್ತು ಹೊಸ ಆಯಾಮಗಳು ಎಂಬ ವಿಷಯ ಕುರಿತು ರಾಷ್ಟ್ರಮಟ್ಟದ ಒಂದು ದಿನದ ಸಮ್ಮೇಳನ ಹಾಗೂ ಕಾರ್ಯಾಗಾರವನ್ನು ಪಟ್ಟಣದ ಸಿ.ಎಸ್ ಬೆಂಬಳಗಿ ಮಹಾವಿದ್ಯಾಲಯದಲ್ಲಿ ಮಾ.28ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯ ಎಸ್.ಎಸ್.ಕೊಡತೆ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಲಿಕೆಯ ಜತೆಗೆ ವಿದ್ಯಾರ್ಥಿಗಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸುವ ನಿಟ್ಟಿನಲ್ಲಿ, ಭಾರತೀಯ ಶಿಕ್ಷಣ ವ್ಯವಸ್ಥೆಗೆ ಜಾಗತಿಕ ಮಟ್ಟದಲ್ಲಿ ಉನ್ನತೀಕರಿಸಲು, ಕೇವಲ ವಿಜ್ಞಾನ ಮತ್ತು ವೈದ್ಯಕೀಯ ವಿಷಯಗಳಿಗೆ ಮಾತ್ರ ಸಂಶೋಧನೆ ಸಿಮೀತವಲ್ಲ. ಬೇರೆ ವಿಷಯಗಳಲ್ಲೂ ಸಂಶೋಧನೆ ಮಾಡಿ, ಹೊಸದನ್ನು ಕಂಡು ಹಿಡಿಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೇರೆಪಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹಾಗೂ ಯುಜಿಸಿ ಪ್ರಾಯೋಜಕತ್ವದಲ್ಲಿ ಪದವಿ ಮಹಾವಿದ್ಯಾಲಯಗಳಲ್ಲಿ ರಾಷ್ಟ್ರ ಮಟ್ಟದ ಸಮ್ಮೇಳನಗಳನ್ನು ಮೇಲಿಂದ ಮೇಲೆ ಏರ್ಪಡಿಸಲಾಗುತ್ತಿದೆ ಎಂದರು.

ಕಾರ್ಯಾಗಾರದಲ್ಲಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಂದ 100-20 ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪ್ರಬಂಧ ಮಂಡನೆ ಮಾಡುವ ನಿರೀಕ್ಷೆ ಇದೆ. ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಪಿ.ಎಂ.ಜಗತಾಪ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮ್ಮೇಳನವನ್ನು ಕೊಲ್ಲಾಪುರ ಶಿವಾಜಿ ವಿಶ್ವದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪಿ.ಎಸ್.ಕಾಂಬಳೆ ಉದ್ಘಾಟಿಸಲಿದ್ದಾರೆ. ಪ್ರಾಚಾರ್ಯ ಎಸ್.ಎಸ್.ಕೊಡತೆ, ಎಸ್.ಪಿ.ಮುರಾರಿ, ವಿದ್ಯಾ ಪ್ರಸಾರಕ ಸಮಿತಿ ಉಪಾಧ್ಯಕ್ಷ ಎಸ್.ಬಿ.ಪಾಟೀಲ, ಮಹಾವಿದ್ಯಾಲಯದ ಗೌರ್ನಿಂಗ್ ಕಮಿಟಿ ಅಧ್ಯಕ್ಷ ವಿ.ಎಸ್.ಸೊಬರದ, ವಿವಿಧ ವಿಶ್ವವಿದ್ಯಾಲಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪ್ರಬಂಧ ಮಂಡನೆ ಮಾಡಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಪ್ರೊ.ಎಸ್.ಎಂ.ಸಕ್ರಿ, ಪ್ರೊ.ಪಿ.ಬಿ.ತೆಗ್ಗಿಹಳ್ಳಿ ಇತರರು ಇದ್ದರು.