ಒಮಿಕ್ರಾನ್ ಉಪತಳಿ ಹೆಚ್ಚು ಅಪಾಯಕಾರಿ; ಪಟನಾದಲ್ಲಿ ಬಿಎ.12 ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕರೊನಾ ಸಾಂಕ್ರಾಮಿಕತೆ ನಾಲ್ಕನೇ ಅಲೆಯ ಭೀತಿ ಎದುರಾಗಿರುವ ಬೆನ್ನಲ್ಲೇ ಬಿಹಾರ ರಾಜಧಾನಿ ಪಟನಾದಲ್ಲಿ ಗುರುವಾರ ಒಮಿಕ್ರಾನ್ ರೂಪಾಂತರಿಯ ಹೊಸ ಪ್ರಭೇದದ ಒಂದು ಪ್ರಕರಣ ಪತ್ತೆಯಾಗಿದೆ. ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಐಜಿಐಎಂಎಸ್) ಪತ್ತೆಯಾಗಿರುವ ಬಿಎ.12 ಪ್ರಭೇದವು ಮೂರನೇ ಅಲೆ ವೇಳೆ ಪತ್ತೆಯಾದ ಬಿಎ.2 ಉಪ-ತಳಿಗಿಂತ 10 ಪಟ್ಟು ಹೆಚ್ಚು ಅಪಾಯಕಾರಿ ಎಂದು ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯಲ್ಲಿ ಬಿಎ.12 ಪ್ರಭೇದದ ಮೂರು ಪ್ರಕರಣಗಳು ಪತ್ತೆಯಾಗಿದ್ದು ಈಗ ಪಟನಾದಲ್ಲೂ ಕಂಡು ಬಂದಿರುವುದು … Continue reading ಒಮಿಕ್ರಾನ್ ಉಪತಳಿ ಹೆಚ್ಚು ಅಪಾಯಕಾರಿ; ಪಟನಾದಲ್ಲಿ ಬಿಎ.12 ಸೋಂಕು ಪತ್ತೆ