ಒಮಿಕ್ರೋನ್​ ರೂಪಾಂತರಿ: ಅಂತಾರಾಷ್ಟ್ರೀಯ ಪ್ರಯಾಣದ ಬಗ್ಗೆ ಮತ್ತೆ ಪರಾಮರ್ಶಿಸಿ ಎಂದ ಮೋದಿ

ನವದೆಹಲಿ: ಹೊಸ ಕರೊನಾ ರೂಪಾಂತರಿ ಒಮಿಕ್ರೋನ್​ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂದು(ನ.27) ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಎರಡು ಗಂಟೆಗಳ ಕಾಲ ಉನ್ನತ ಅಧಿಕಾರಿಗಳ ಸಭೆ ನಡೆಯಿತು. ಹೊಸ ಸವಾಲನ್ನು ಎದುರಿಸಲು ಭಾರತ ಕ್ರಿಯಾಶೀಲವಾಗಿರಬೇಕು ಎಂದ ಮೋದಿ, ಈ ರೂಪಾಂತರಿಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧಗಳನ್ನು ಸಡಿಲೀಕರಿಸಿರುವ ನಿರ್ಧಾರವನ್ನು ಪುನರ್​ಪರಿಶೀಲಿಸಬೇಕು ಎಂದಿದ್ದಾರೆ. ನಿನ್ನೆಯಷ್ಟೇ ಕರೊನಾ ಕಾರಣದಿಂದಾಗಿ 20 ತಿಂಗಳುಗಳಿಂದ ಸ್ಥಗಿತಗೊಳಿಸಲಾಗಿದ್ದ ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ಡಿಸೆಂಬರ್​ 15 ರಿಂದ ಪುನರಾರಂಭಿಸಲಾಗುವುದು ಎಂದು ಭಾರತ ಸರ್ಕಾರ ಘೋಷಿಸಿತ್ತು. ನಿನ್ನೆಯೇ ದಕ್ಷಿಣ … Continue reading ಒಮಿಕ್ರೋನ್​ ರೂಪಾಂತರಿ: ಅಂತಾರಾಷ್ಟ್ರೀಯ ಪ್ರಯಾಣದ ಬಗ್ಗೆ ಮತ್ತೆ ಪರಾಮರ್ಶಿಸಿ ಎಂದ ಮೋದಿ