ತುಂಗೆಯಲ್ಲಿ ಓಂ ಗಣಪತಿ ಜಲಸ್ತಂಭನ

om ganapati rajabeedi ustava

ಶಿವಮೊಗ್ಗ: ಹಿಂದು ಮಹಾಸಭಾ ಗಣಪತಿ ವಿಸರ್ಜನೆ ಮಾಡಿದ ಎರಡು ದಿನದ ಅಂತರದಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಓಂ ಗಣಪತಿಯನ್ನು ಗುರುವಾರ ತಡರಾತ್ರಿ ಸಾವಿರಾರು ಭಕ್ತರ ಹರ್ಷೋದ್ಗಾರದೊಂದಿಗೆ ಜಲಸ್ತಂಭನ ಮಾಡಲಾಯಿತು.

ಅಶೋಕ ರಸ್ತೆಯಿಂದ ಮಧ್ಯಾಹ್ನ ಹೊರಟ ರಾಜಬೀದಿ ಉತ್ಸವವು ತುಂಗಾ ನದಿಯ ಕೋರ್ಪಲಯ್ಯನ ಛತ್ರದ ಬಳಿ ಭೀಮನ ಮಡುವು ಸೇರಿತು.
ನಗರದ ಅಶೋಕ ರಸ್ತೆಯ ಅಶೋಕ ಯುವಕರ ಸೇವಾ ಸಂಘದಿಂದ ಪ್ರತಿಷ್ಠಾಪಿಸಿದ್ದ ಓಂ ಗಣೇಶ ಮೂರ್ತಿಯ ವಿಸರ್ಜನಾ ಪೂರ್ವ ಮೆರವಣಿಗೆಯು ನಗರದ ವಿವಿಧೆಡೆ ಅದ್ದೂರಿಯಾಗಿ ನೆರವೇರಿತು. ಬಿಗಿ ಪೊಲೀಸ್ ಭದ್ರತೆ ನಡುವೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಾಂಸ್ಕೃತಿಕ ಕಲಾ ವೈಭವಗಳೊಂದಿಗೆ ವಿಘ್ನ ನಿವಾರಕನ ಉತ್ಸವ ನಡೆಯಿತು.
ತಹಸೀಲ್ದಾರ್ ಬಿ.ಎನ್.ಗಿರೀಶ್ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಅಶೋಕ ರಸ್ತೆಯಿಂದ ಆರಂಭಗೊಂಡ ರಾಜಬೀದಿ ಉತ್ಸವ ಎಸ್‌ಪಿಎಂ ರಸ್ತೆ, ಗಾಂಧಿಬಜಾರ್, ಶಿವಪ್ಪನಾಯಕ ವೃತ್ತ, ಬಿ.ಎಚ್.ರಸ್ತೆ, ಕೋಟೆ ರಸ್ತೆ ಮೂಲಕ ಶಾಂತಿಯುತ ಹಾಗೂ ವೈಭವಯುತವಾಗಿ ಸಾಗಿತು. ಬಳಿಕ ತಡರಾತ್ರಿ ಕೋರ್ಪಲಯ್ಯನ ಛತ್ರದ ಬಳಿ ತುಂಗಾ ನದಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.

ಕಲಾ ಮೇಳದ ಮೆರುಗು: ರಾಜಬೀದಿ ಉತ್ಸವದಲ್ಲಿ ಡೊಳ್ಳು ಕುಣಿತ, ಕರಡಿ ಮಜಲು, ಚಂಡೆ, ತಟ್ಟಿರಾಯ, ವೀರಗಾಸೆ, ಕೀಲು ಕುದುರೆ, ಭಜನಾ ತಂಡಗಳು ಭಾಗವಹಿಸಿದ್ದವು. ಜಾನಪದ ಪ್ರಕಾರಗಳು ರಾಜಬೀದಿ ಉತ್ಸವದ ಮೆರುಗು ಹೆಚ್ಚಿಸಿದವು. ವೀರಗಾಸೆ, ಡೊಳ್ಳು ಕುಣಿತ, ಚಂಡೆ ನಾದಕ್ಕೆ ಮಹಿಳೆಯರು, ಮಕ್ಕಳಾದಿಯಾಗಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮೆರವಣಿಗೆ ಸಾಗಿದ ಮಾರ್ಗದಲ್ಲಿ ಮಹಿಳೆಯರು ರಂಗೋಲಿ ಹಾಕಿ ವಿಘ್ನ ನಿವಾರಕನನ್ನು ಸ್ವಾಗತಿಸಿದರು.

ಪೊಲೀಸ್ ಸರ್ಪಗಾವಲು: ಓಂ ಗಣೇಶನ ರಾಜಬೀದಿ ಉತ್ಸವ ಪೊಲೀಸ್ ಸರ್ಪಗಾವಲಿನಲ್ಲಿ ನಡೆಯಿತು. ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್‌ಪಿಗಳಾದ ಅನಿಲ್‌ಕುಮಾರ್ ಭೂಮರಡ್ಡಿ, ಸಿ.ಎ.ಕಾರಿಯಪ್ಪ ನೇತೃತ್ವದಲ್ಲಿ ಸಾವಿರಾರು ಪೊಲೀಸರು ರಾಜಬೀದಿ ಉತ್ಸವದಲ್ಲಿ ಪಾಲ್ಗೊಂಡು ನಿಗಾ ವಹಿಸಿದರು. ಮುಖ್ಯವಾಗಿ ಗಾಂಧಿಬಜಾರ್ ಮಸೀದಿ ಮತ್ತು ಅಮೀರ್ ಅಹಮ್ಮದ್ ವೃತ್ತದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಉತ್ಸವ ಸಾಗಿದ ಮಾರ್ಗದುದ್ದಕ್ಕೂ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ವಿಡಿಯೋ ಕ್ಯಾಮರಾ ಮತ್ತು ಡ್ರೋನ್ ಕ್ಯಾಮರಾ ಮೂಲಕ ಕಣ್ಗಾವಲಿರಿಸಲಾಗಿತ್ತು.

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…