ಗೌಹಾಟಿ : ಟೋಕಿಯೋ ಒಲಿಂಪಿಕ್ಸ್ನಲ್ಲಿ ಬಾಕ್ಸಿಂಗ್ನಲ್ಲಿ ಕಂಚಿನ ಪದಕ ಗಳಿಸಿ ಭಾರತಕ್ಕೆ ಕೀರ್ತಿ ತಂದ ಲವ್ಲೀನಾ ಬೊರ್ಗೊಹೈನ್ರನ್ನು ಪೊಲೀಸ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಹುದ್ದೆಯನ್ನು ನೀಡುವುದಾಗಿ ಅಸ್ಸಾಂ ಸಿಎಂ ಬಿಸ್ವಂತ ಸರ್ಮ ಘೋಷಿಸಿದ್ದಾರೆ.
ಜೊತೆಗೆ, ರಾಜ್ಯದ ಗೌಹಾಟಿಯಲ್ಲಿ ಒಂದು ರಸ್ತೆಗೆ ಲವ್ಲೀನಾ ಹೆಸರನ್ನು ಇಡಲಾಗುವುದು. ಲವ್ಲೀನಾ ಹುಟ್ಟೂರಾದ ಗೋಲಾಘತ್ ಪಟ್ಟಣದಲ್ಲಿ ಆಕೆಯ ಹೆಸರಲ್ಲಿ ಒಂದು ದೊಡ್ಡ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು. ಇಲ್ಲಿ ವಿವಿಧ ಕ್ರೀಡೆಗಳಿಗೆ ಭರಪೂರ ಪ್ರೋತ್ಸಾಹ ನೀಡಲಾಗುವುದು. ಲವ್ಲೀನಾಗೆ ತರಬೇತಿ ನೀಡಿದ ತರಬೇತಿದಾರರಿಗೆ 10 ಲಕ್ಷ ರೂ.ಗಳ ನಗದು ಪುರಸ್ಕಾರ ನೀಡಲಾಗುವುದು ಎಂದು ಸಿಎಂ ಸರ್ಮ ಹೇಳಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಆರು ದಿನಗಳಲ್ಲಿ ಮುನ್ನೂರು ಮಕ್ಕಳಿಗೆ ಕರೊನಾ!
VIDEO | ಬಿಜೆಪಿ ನಾಯಕರ ‘ದೋಸ್ತಿ’ ಹಾಡು ನೋಡಿ!