ಆಲಿವ್ ಎಣ್ಣೆಯ ಗುಣಗಳು

ಆಲಿವ್ ಎಣ್ಣೆಯ ಆರೋಗ್ಯ ಸಹಕಾರಿ ಗುಣಗಳನ್ನು ಅರಿತು ವಿದೇಶಗಳಲ್ಲಿ ಇದರ ಬಳಕೆಯನ್ನು ಹೆಚ್ಚು ಹೆಚ್ಚು ರೂಢಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾತ್ರ ನಮ್ಮ ಭಾರತದಲ್ಲಿ ಆಲಿವ್ ಆಯಿಲ್​ನ ಬಳಕೆಯ ಬಗೆಗೆ ಅರಿವು ಬರುತ್ತಿದೆ. ಆದರೆ ಸರಿಯಾಗಿ ಅರಿವಿರದ ನಾವು ಆಲಿವ್ ಆಯಿಲ್ ಆರೋಗ್ಯಕ್ಕೆ ಉತ್ತಮ ಎಂಬ ಕಾರಣಕ್ಕಾಗಿ ಕರಿದ ಆಹಾರ ಪದಾರ್ಥಗಳ ತಯಾರಿಕೆಯಲ್ಲಿಯೂ (ಪದಾರ್ಥಗಳನ್ನು ಕರಿಯಲು) ಬಳಸುವುದನ್ನು ಕಾಣುತ್ತಿದ್ದೇವೆ.

ಆಲಿವ್ ಎಣ್ಣೆಯನ್ನು ಬಿಸಿ ಮಾಡಿದ ತಕ್ಷಣದಲ್ಲಿ ಇದು ಬಹು ಬೇಗನೆ ಆಕ್ಸಿಡೇಶನ್ ಆಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲದು. ಆದ್ದರಿಂದ ಯಾವುದೇ ಕಾರಣಕ್ಕೂ ಬಿಸಿ ಮಾಡಿದ ಆಲಿವ್ ಎಣ್ಣೆಯನ್ನು ಉಪಯೋಗಿಸಬಾರದು. ಎಕ್ಟ್ರಾ ವರ್ಜಿನ್ ಕೋಕೋನಟ್ ಆಯಿಲ್​ನ್ನು ಬಳಸುವುದು ಉತ್ತಮ ಆಯ್ಕೆ. ಸಲಾಡ್​ಗಳಲ್ಲಿ, ಪಲ್ಯ ಮಾಡಿದ ನಂತರದಲ್ಲಿ ಮೇಲಿನಿಂದ ಆಲಿವ್ ಆಯಿಲ್ ಸೇರಿಸಿ ಸೇವಿಸುವುದು ಒಳ್ಳೆಯ ಮಾರ್ಗ. ಅಧ್ಯಯನಗಳ ಪ್ರಕಾರ ಇದರಲ್ಲಿರುವ ಓಲಿಯೋಕ್ಯಾಂಥಾಲ್ ಎಂಬ ಆಂಟಿ ಆಕ್ಸಿಡೆಂಟ್ ಆಂಟಿ ಇನ್​ಫ್ಲಮೇಟರಿ ಅಂಶವು ಇಬುಪ್ರೊಫೆನ್ ಎಂಬ ಔಷಧಿಯ ಆಂಟಿ ಆಕ್ಸಿಡೆಂಟ್​ನಂತೆ ಕೆಲಸ ಮಾಡುತ್ತದೆ. ಆದ್ದರಿಂದ ಇದು ಉರಿಯೂತವನ್ನು ಕಡಿಮೆ ಮಾಡುವಲ್ಲಿ ಬಹಳ ಸಹಕಾರಿಯಾಗಬಲ್ಲದು.

ಮಿದುಳಿಗೆ ರಕ್ತಸಂಚಾರವನ್ನು ಸರಿಯಾಗಿ ಆಗುವಂತೆ ಮಾಡಲು ಇದು ಸಹಕಾರಿಯಾಗಿರುವುದರಿಂದ ಪಾರ್ಶ್ವವಾಯು ಬರುವಂತಹ ಸಂಭವವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಅಂತೆಯೇ ಹೃದಯಕ್ಕೂ ಸರಾಗ ರಕ್ತಸಂಚಾರ ಆಗುವುದರಿಂದ ಹೃದಯಾಘಾತದ ಸಂಭವವೂ ಕಡಿಮೆಯಾಗುತ್ತದೆ. ಆಲಿವ್ ಎಣ್ಣೆಯ ಸೇವನೆಯಿಂದ ತೂಕ ಹೆಚ್ಚಾಗುತ್ತದೆಂಬುದು ತಪ್ಪು ಕಲ್ಪನೆ. ಎಲ್ಲರೂ ಇದನ್ನು ಯಾವುದೇ ಆತಂಕ ಇಲ್ಲದೆ ಸೇವಿಸಬಹುದು. ಆಂಟಿ ಬ್ಯಾಕ್ಟೀರಿಯಲ್ ಗುಣವನ್ನು ಸಹ ಇದು ಹೊಂದಿದೆ. ಆದ್ದರಿಂದ ಆಲಿವ್ ಎಣ್ಣೆಯನ್ನು ಬಳಸಿ ಆದರೆ ಬಿಸಿ ಮಾಡಿ ಬಳಕೆ ಮಾಡುವ ಅಭ್ಯಾಸ ಬೇಡ.

Leave a Reply

Your email address will not be published. Required fields are marked *