ಕೃಷ್ಣಾ ನದಿಯಲ್ಲಿ ಮುಳುಗಿ ಶಿಕ್ಷಕ ಸಾವು

ಬೀಳಗಿ : ತಾಲೂಕಿನ ಹಳೇ ರೊಳ್ಳಿ ಗ್ರಾಮದ ಸಮೀಪ ಕೃಷ್ಣಾ ನದಿಯಲ್ಲಿ ಮುಳುಗುತ್ತಿದ್ದ ಸಹೋದರಿ ಮಗಳನ್ನು ಕಾಪಾಡಲು ಹೋಗಿ ಶಿಕ್ಷಕರೊಬ್ಬರು ಮಂಗಳವಾರ ಮುಳುಗಿ ಮೃತಪಟ್ಟಿದ್ದಾರೆ.

ಮೂಲತಃ ಬಾಗಲಕೋಟೆ ನಗರದ ತೆಂಗಿನಮಠ ಗಲ್ಲಿಯ ಸಂತೋಷ ಈರಪ್ಪ ಮಡ್ಡಿಕರ(30) ಮೃತಪಟ್ಟ ಶಿಕ್ಷಕ. ರೊಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿದ್ದ ಸಂತೋಷ, ಸಹೋದರಿಯ ಇಬ್ಬರು ಮಕ್ಕಳು ಹಾಗೂ ಒಬ್ಬ ಹಳೇ ವಿದ್ಯಾರ್ಥಿಯೊಂದಿಗೆ ಕೃಷ್ಣಾ ನದಿಗೆ ಸ್ನಾನ ಮಾಡಲು ಹೋಗಿದ್ದರು. ಈ ಸಂದರ್ಭದಲ್ಲಿ ಸಹೋದರಿ ಮಗಳು ನಿಖಿತಾ ನೀರಿನಲ್ಲಿ ಮುಳುಗುತ್ತಿದ್ದಳು. ಆಕೆಯನ್ನು ಕಾಪಾಡಲು ಹೋಗಿ ಈಜಲು ಬಾರದೆ ಆಳವಾದ ನೀರಿನಲ್ಲಿ ಮುಳುಗಿ ಶಿಕ್ಷಕ ಸಂತೋಷ ಸಾವಿಗೀಡಾಗಿದ್ದಾರೆ. ನಿಖಿತಾ ಅವರನ್ನು ಹಳೇ ವಿದ್ಯಾರ್ಥಿ ರಕ್ಷಣೆ ಮಾಡಿದ್ದಾರೆ.

ನುರಿತ ಈಜುಗಾರರ ಸಹಾಯದಿಂದ ಶಿಕ್ಷಕ ಸಂತೋಷ ಅವರ ಶವ ಹೊರಗೆ ತೆಗೆದಿದ್ದು, ಬೀಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *