ಬೆಂಗಳೂರು: ನಂದಕುಮಾರ್ ಸಿಎಂ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ, ಹೊಸ ಪ್ರತಿಭೆಗಳಾದ ಅರುಣ್ ಹಾಗೂ ರಾಣಿ ವರದ್ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ‘1990’ಖ’. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ, ಚಿತ್ರದ ‘ತಾಂಡವ’ ಎಂಬ ಹಾಡನ್ನು ರಿಲೀಸ್ ಮಾಡಲಾಗಿದೆ. ‘ಸೇಡಿನ ಸರ್ಪದ ಎಡೆಯನು ಮೆಟ್ಟಿ..’ ಎಂದು ಸಾಗುವ ಗೀತೆಯನ್ನು ನಂದಕುಮಾರ್ ರಚಿಸಿದ್ದು, ಇ.ಸಿ. ಮಹಾರಾಜ ಸಂಗೀತ ನೀಡಿ, ಗಾಯಕ ವಲ್ಲಭ್ ಜತೆಗೆ ಧ್ವನಿಗೂಡಿಸಿದ್ದಾರೆ. ಚಿತ್ರದ ಬಗ್ಗೆ ನಂದಕುಮಾರ್, ‘ಇದು 1990ರಲ್ಲಿ ನಡೆಯುವ ಪ್ರೇಮಕಥೆ. ಇದೇ ಕಾಲಘಟ್ಟದಲ್ಲಿ ಕಥೆ ಸಾಗುತ್ತಾದರೂ ನಾಯಕನ ಕಲ್ಪನೆ 35 ವರ್ಷಗಳ ಹಿಂದಿನ್ನದ್ದಾಗಿರುತ್ತದೆ. ಚಿತ್ರ ಮೊದಲು ಆರಂಭವಾಗಿದ್ದು ಕನ್ನಡದಲ್ಲಿ. ಎಲ್ಲ ಭಾಷೆಗಳಿಗೆ ಸಲ್ಲುವ ಕಥೆ ಎಂಬ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಇದೀಗ ಪ್ಯಾನ್ ಇಂಡಿಯಾ ರೂಪದಲ್ಲಿ ತರಲು ಮುಂದಾಗಿದ್ದೇವೆ’ ಎಂದರು. ನಾಯಕ ಅರುಣ್, ‘ರಂಗಭೂಮಿ ಕಲಾವಿದನಾಗಿ ಅನುಭವವಿರುವ ನನಗೆ ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ನಂದಕುಮಾರ್ ಎಲ್ಲರಿಗೂ ಹಿಡಿಸುವ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನಾನಿಲ್ಲಿ ಮುಗ್ಧ ಪ್ರೇಮಿಯಾಗಿ ಕಾಣಿಸಿಕೊಳ್ಳಲಿದ್ದೇನೆ’ ಎಂದರು. ರಾಣಿ ವರದ್, ‘ಈ ಚಿತ್ರದ ಟೀಸರ್ ಬಿಡುಗಡೆಯಾದಾಗ ಗರ್ಭಿಣಿಯಾಗಿದ್ದೆ. ಈಗ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದೇನೆ. ನನ್ನ ಪಾತ್ರ ತುಂಬಾ ಚೆನ್ನಾಗಿದೆ’ ಎಂದು ಖುಷಿ ಹಂಚಿಕೊಂಡರು. ಹಾಲೇಶ್ ಛಾಯಾಗ್ರಹಣ, ಕೃಷ್ಣ ಸಂಕಲನ ಚಿತ್ರಕ್ಕಿದೆ.
1990ರ ಪ್ಯಾನ್ ಇಂಡಿಯಾ ಪ್ರೇಮಕಥೆ: ಅರುಣ್, ರಾಣಿ ವರದ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ

You Might Also Like
ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti
ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…
ಬೊಜ್ಜು ಕರಗಿಸಿ ಫಿಟ್ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…
ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips
ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…