ನವದೆಹಲಿ: ಕ್ರಿಕೆಟ್ ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಅವರ ಪ್ರದರ್ಶನ ಕಂಡು ಮೆಚ್ಚಿಕೊಳ್ಳದಿರುವವರೇ ಇಲ್ಲ. ಎದುರಾಳಿ ತಂಡದ ವಿಕೆಟ್ ಉರುಳಿಸಬೇಕೆಂದಾಗ ನಾಯಕ ವಿರಾಟ್ ಕೊಹ್ಲಿಗೆ ನೆನಪಾಗುತ್ತಿದ್ದುದ್ದೇ ಈ ಬುಮ್ರಾ. ಇದೀಗ ವಿಶ್ವಕಪ್ನಲ್ಲಿನ ಇವರ ಪ್ರದರ್ಶನಕ್ಕೆ ಮನಸೋತಿರುವ ಹಿರಿಯ ಜೀವವೊಂದು, ಬುಮ್ರಾ ಬೌಲಿಂಗ್ ಶೈಲಿನನ್ನೇ ಅನುಕರಿಸಿ ಬೌಲಿಂಗ್ ಮಾಡುತ್ತಿರುವ ವಿಡಿಯೋ ಸ್ವತಃ ಜಸ್ಪ್ರೀತ್ ಬುಮ್ರಾ ಅವರನ್ನು ಒಳಗೊಂಡಂತೆ ಸಾಮಾಜಿಕ ಜಾಲತಾಣಿಗರೆಲ್ಲರನ್ನೂ ಕ್ಲೀನ್ ಬೌಲ್ಡ್ ಮಾಡಿದೆ!
ನನ್ನ ಬೌಲಿಂಗ್ ಶೈಲಿಯನ್ನು ಅನುಕರಿಸಿ ಅಜ್ಜಿ ಬೌಲಿಂಗ್ ಮಾಡುತ್ತಿರುವ ವಿಡಿಯೋ ನೋಡಿ, ನನ್ನ ಬದುಕು ಸಾರ್ಥಕವಾಯಿತು ಎನಿಸಿತು. ನನ್ನ ಈ ದಿನವನ್ನು ಉಲ್ಲಾಸಮಯಗೊಳಿಸಿತು ಎಂದು ಬುಮ್ರಾ ಉದ್ಗರಿಸಿದ್ದಾರೆ.
ಶಾಂತಾ ಸಕ್ಕೂಬಾಯಿ ಎಂಬುವವರು ಮೊದಲಿಗೆ ಬುಮ್ರಾ ರೀತಿಯಲ್ಲಿ ಬೌಲಿಂಗ್ ಮಾಡುತ್ತಿರುವ ವೃದ್ಧೆಯ ವಿಡಿಯೋವನ್ನು ಟ್ವಿಟರ್ನಲ್ಲಿ ಅಳವಡಿಸಿ, ನಮ್ಮೆಲ್ಲರಂತೆ ನಮ್ಮ ತಾಯಿ ಕೂಡ ಕ್ರಿಕೆಟ್ ವಿಶ್ವಕಪ್ನಲ್ಲಿನ ಬುಮ್ರಾ ಅವರ ಪ್ರದರ್ಶನ ಕಂಡು ಅವರಿಗೆ ಫಿದಾ ಆಗಿದ್ದಾರೆ. ಹಾಗಾಗಿ, ಬುಮ್ರಾ ಅವರ ಬೌಲಿಂಗ್ ಶೈಲಿಯನ್ನೇ ಅನುಕರಿಸಲು ನಿರ್ಧರಿಸಿ, ಆ ನಿಟ್ಟಿನಲ್ಲಿ ಪ್ರಯತ್ನಿಸಿದ್ದಾರೆ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. (ಏಜೆನ್ಸೀಸ್)