ಬೇವುಕಲ್ಲು ಗ್ರಾಮದಲ್ಲಿ ಒಟ್ಟಿಗೆ ಬಂದು ಮತದಾನ ಮಾಡಿದ ವೃದ್ಧ ಗೆಳತಿಯರು

ಮಂಡ್ಯ: ತಾಲೂಕಿನ ಬೇವುಕಲ್ಲು ಗ್ರಾಮದಲ್ಲಿ ಮೂವರು ವೃದ್ಧೆಯರು ಮೊಮ್ಮಕ್ಕಳ ಜತೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಗ್ರಾಮದ ಶತಾಯುಷಿ ಶಿವಮ್ಮ (102), ನಂಜಮ್ಮ (97) ಹಾಗೂ ನಾಗಮ್ಮ (92) ಅವರನ್ನು ಮೊಮ್ಮಕ್ಕಳು ಎತ್ತಿಕೊಂಡು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಬೆವುಕಲ್ಲು ಮತಗಟ್ಟೆ ಸಂಖ್ಯೆ 40ರಲ್ಲಿ ಮತದಾನ ಮಾಡಿದ ವೃದ್ದೆಯರು ತಮ್ಮ ಹಕ್ಕು ಚಲಾಯಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.