More

  ವೃದ್ಧ ದಂಪತಿ ಬದುಕಿನಲ್ಲಿ ಮೂಡಿತು ಬೆಳಕಿನ ಕಿರಣ, ಸ್ಥಳದಲ್ಲೇ ಪಿಂಚಣಿ ಮಂಜೂರು

  ಸಿದ್ದಾಪುರ: ಸಿದ್ದಾಪುರ ಗ್ರಾಮ ಜನತಾ ಕಾಲನಿ ನಿವಾಸಿ ಅಣ್ಣಪ್ಪ ಹಾಗೂ ಸರಸ್ವತಿ ಬಿಡಾರಕ್ಕೆ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಹಿರಿಯ ದಂಪತಿಗೆ ಸ್ಥಳದಲ್ಲೇ ಪಿಂಚಣಿ ಅರ್ಜಿ ಪಡೆದು ಮಂಜೂರು ಮಾಡಿರುವುದು ಅವರ ಜೀವನದಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ.

  ಅಣ್ಣಪ್ಪ ಹಾಗೂ ಸರಸ್ವತಿ ಮನೆಗೆ ಸಿದ್ದಾಪಪುರ ಗ್ರಾಪಂ ಸದಸ್ಯರು, ಇತರ ಗ್ರಾಪಂ ಸದಸ್ಯರು ಭೇಟಿ ನೀಡಿ, ಧೈರ್ಯ ಹೇಳಿದ್ದಲ್ಲದೆ, ಆರ್ಥಿಕ ಸಹಕಾರ ನೀಡುವ ಜತೆ ಮನೆ ನಿರ್ಮಿಸಲು ಸಹಕಾರ ನೀಡುವ ಭರವಸೆ ನೀಡಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಭೇಟಿ ನೀಡಿ, ರೋಟರಿ ಹಾಗೂ ಇನ್ನಿತರ ಸಂಘ ಸಂಸ್ಥೆ ಸಹಕಾರದಲ್ಲಿ ಸಹಕಾರ ನೀಡುವ ಭರವಸೆ ನೀಡಿದ್ದಾರೆ.

  ಕುಂದಾಪುರ ಎಸಿ ರಾಜು ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ, ಅಧಿಕಾರಿಗಳ ಜತೆ ನೇರವಾಗಿ ಜನತಾ ಕಾಲನಿಗೆ ಭೇಟಿ ನೀಡಿದರು. ರಜಾ ದಿನವಾದರೂ ಎಸಿ ಬಡವರ ಮನೆ ಬಾಗಿಲಿಗೆ ಬಂದು, ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಮೂಲಕ ಧೈರ್ಯ ತುಂಬಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
  ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ವೃದ್ಧ ದಂಪತಿ ಮುಂದಿನ ವ್ಯವಸ್ಥೆ ಕುರಿತು ಎಸಿ ರಾಜು ಜತೆ ಚೆರ್ಚಿಸಿ, ಮನೆ ನಿರ್ಮಿಸಿಕೊಡುವ ತೀರ್ಮಾನಕ್ಕೆ ಬಂದಿದ್ದಾರೆ. ಸಮಾಜದ ಗಣ್ಯರು ಹಾಗೂ ದಾನಿಗಳ ಸಹಕಾರದಲ್ಲಿ ಮೂಲಸೌಲಭ್ಯ ಸಹಿತ ಮನೆ ನಿರ್ಮಿಸಿಕೊಡಲು ನಿರ್ಧರಿಸಲಾಯಿತು. ಶಾಸಕರು ಹಾಗೂ ಎಸಿ ಜತೆ ವಿವಿಧ ಇಲಾಖೆ ಅಧಿಕಾರಿಗಳು, ವಿಎ ಹಾಗೂ ಮಾಜಿ ತಾಪಂ ಸದಸ್ಯ ದಿವಾಕರ ಹೆಗ್ಡೆ ಗ್ರಾಪಂ ಸದಸ್ಯರು ಇದ್ದರು.

  ಸರ್ಕಾರದಿಂದ ಮನೆ ಪ್ರೊಸೀಜರ್ ಹಿನ್ನೆಲೆಯಲ್ಲಿ ತಡವಾಗುವ ನಿಮಿತ್ತ ಸ್ಥಳೀಯ ಮುಖಂಡರ ಮುಂದಾಳತ್ವದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅಣ್ಣಪ್ಪ ಮತ್ತು ಸರಸ್ವತಿಗೆ ಮನೆ ನಿರ್ಮಿಸಿಕೊಡಲಾಗುತ್ತದೆ. ಸೈಟ್ ಅವರಿಗೆ ಮಂಜೂರಾಗಿದ್ದು, ಮನೆ ಜತೆ ಶೌಚಗೃಹ, ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ವೃದ್ಧಾಪ್ಯ ಪಿಂಚಣಿ ಕೂಡಾ ಮಂಜೂರು ಮಾಡಲಾಗಿದೆ.
  – ಬಿ.ಎಂ.ಸುಕುಮಾರ್ ಶೆಟ್ಟಿ, ಶಾಸಕ, ಬೈಂದೂರು

  ಸಿದ್ದಾಪುರ ಜನತಾ ಕಾಲನಿಗೆ ಭೇಡಿ ನೀಡಿ ವೃದ್ಧ ಜೋಡಿ ಸಮಸ್ಯೆ ಕಣ್ಣಾರೆ ನೋಡಿದ್ದು, ಸ್ಥಳದಲ್ಲೇ ಅವರಿಗೆ ತಿಂಗಳಿಗೆ 600 ರೂ. ವೃದ್ಧಾಪ್ಯ ಪಿಂಚಣಿ ಮಂಜೂರು ಮಾಡಲಾಗಿದೆ. ಸರ್ಕಾರದ ಮನೆ ಮಂಜೂರು ಪ್ರಕ್ರಿಯೆಗೆ ಸಮಯ ತಗುಲುವುದರಿಂದ ರೋಟರಿ, ಸಂಘ ಸಂಸ್ಥೆಗಳು ದಾನಿಗಳ ನೆರವಿನಲ್ಲಿ ಬಾತ್‌ರೂಂ, ಶೌಚಗೃಹ ಸಹಿತ ಶೆಲ್ಟರ್ ನಿರ್ಮಿಸಿಕೊಡಲಾಗುತ್ತದೆ.
  – ಕೆ.ರಾಜು, ಎಸಿ ಕುಂದಾಪುರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts