ಬೆಂಗಳೂರು: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಇನ್ನೇನು ಕೆಲ ವಾರಗಳಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಪೆಟ್ರೋಲ್ ಬೆಲೆ ಗಗನಕ್ಕೇರಿರುವ ಈ ಸಮಯದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ತೆಗೆದುಕೊಂಡು ಅರಾಮಾಗಿ ಇರೋಣ ಎಂದು ಎಲ್ಲರ ಮನಸ್ಸು ಹೇಳುವುದು ಸಾಮಾನ್ಯ. ಆದರೆ ಆ ಗಾಡಿ ತೆಗೆದುಕೊಂಡರೆ ಅದರೆ ಸರ್ವಿಸ್ ಮಾಡಿಸೋದು ಎಲ್ಲಿ? ಗಾಡಿ ನಿರ್ವಹಣೆ ಹೇಗೆ ಎನ್ನುವ ಸಾವಿರ ಪ್ರಶ್ನೆಗಳು ನಿಮ್ಮ ತಲೆಯಲ್ಲಿರಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಸಾಮಾನ್ಯವಾಗಿ ಯಾರು ಯಾವುದೇ ಗಾಡಿ ತೆಗೆದುಕೊಳ್ಳಬೇಕೆಂದರೂ ಮೊದಲು ಅದರ ಸರ್ವಿಸ್ ಸ್ಟೇಷನ್ ತಮಗೆ ಹತ್ತಿರದಲ್ಲಿದೆಯೇ ಎಂದು ಪರಿಶೀಲಿಸಿಕೊಳ್ಳುತ್ತಾರೆ. ಅದೇ ರೀತಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಮಾಡಿರುವವರು ಮತ್ತು ಮಾಡಲು ಬಯಸುವವರ ಯೋಚನೆ ಮಾಡಿರುತ್ತಾರೆ. ಅದನ್ನರಿತ ಓಲಾ ಸಂಸ್ಥೆ ಅದಕ್ಕೊಂದು ಪರ್ಯಾಯ ವ್ಯವಸ್ಥೆಯನ್ನೂ ಮಾಡಿಕೊಡುವುದಾಗಿ ಹೇಳಿದೆ. ನೀವು ಗಾಡಿಯನ್ನು ಸರ್ವಿಸ್ ಮಾಡಿಸಲು ಎಲ್ಲೂ ಹೋಗುವುದು ಬೇಕಾಗಿಲ್ಲ, ಬದಲಾಗಿ ಮನೆಯಲ್ಲೇ ಕುಳಿತು ಒಂದು ಕರೆ ಮಾಡಿದರೆ, ಸರ್ವಿಸ್ ಮಾಡುವವರೇ ನಿಮ್ಮ ಮನೆಗೆ ಬಂದು ಗಾಡಿ ಸರ್ವಿಸ್ ಮಾಡಿಕೊಟ್ಟು ತೆರಳುತ್ತಾರೆ.
ಇಂತದ್ದೊಂದು ವಿಶೇಷ ಸೌಲಭ್ಯವನ್ನು ನೀಡುವುದಾಗಿ ಸಂಸ್ಥೆ ತಿಳಿಸಿದೆ. ಗಾಡಿ ಬುಕ್ಕಿಂಗ್ ಮಾಡಿದವರಿಗೆ ಮನೆ ಬಾಗಿಲಿಗೇ ಗಾಡಿ ತಲುಪಿಸುವುದಾಗಿಯೂ ಹೇಳಲಾಗಿದೆ. ಅಲ್ಲಲ್ಲಿ ಎಕ್ಸ್ಪೀರಿಯೆನ್ಸ್ ಸೆಂಟರ್ ತೆರೆಯಲಾಗುವುದು. ಅಲ್ಲಿ ನೀವು ಗಾಡಿಯನ್ನು ಟೆಸ್ಟ್ ಡ್ರೈವ್ ಮಾಡಿ, ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬಹುದು. ನಿಮಗೆ ಗಾಡಿ ಇಷ್ಟವಾಗಿ ಅದನ್ನು ಕೊಂಡುಕೊಳ್ಳುವ ಮನಸ್ಸು ಮಾಡಿದರೆ ಸಂಸ್ಥೆ ಮನೆ ಬಾಗಿಲಿಗೇ ಗಾಡಿಯನ್ನು ತಂದುಇಳಿಸುತ್ತದೆ. ಅದ್ಧೂರಿ ಕಾರು ಸಂಸ್ಥೆಗಳಲ್ಲಿ ಮಾತ್ರ ಇರುವ ಈ ಸೌಲಭ್ಯವನ್ನು ಎಲೆಕ್ಟ್ರಿಕ್ ಸ್ಕೂಟರ್ಗೆ ಇದೇ ಮೊದಲನೇ ಬಾರಿಗೆ ಅಳವಡಿಸಿಕೊಳ್ಳಲಾಗುತ್ತಿದೆ. (ಏಜೆನ್ಸೀಸ್)
ನಾವು ಸನ್ಯಾಸಿಗಳಲ್ಲ… ಬೊಮ್ಮಾಯಿ ಆಯ್ಕೆ ಶ್ರೀಕೃಷ್ಣನ ತಂತ್ರಗಾರಿಕೆ: ಈಶ್ವರಪ್ಪ