More

    30ರಂದು ಒಕ್ಕಲಿಗ ವಧು-ವರರ ಸಮಾವೇಶ

    ಪಾಂಡವಪುರ: ಗ್ರಾಮೀಣ ಪ್ರದೇಶದ ರೈತ ವಧು-ವರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಪಾಂಡವಪುರ ಶಾಖೆ ವತಿಯಿಂದ ಜೂ.30ರಂದು ಪಟ್ಟಣದ ವಿಜಯ ಶಿಕ್ಷಣ ಸಂಸ್ಥೆಯ ಡಾ.ಎಂ.ಎಸ್.ಕೃಷ್ಣಕುಮಾರ್ ಸಭಾಂಗಣದಲ್ಲಿ ಒಕ್ಕಲಿಗ ವಧು-ವರರ ಸಮಾವೇಶ ಆಯೋಜಿಸಲಾಗಿದೆ ಎಂದು ಟ್ರಸ್ಟಿನ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನೇಗೌಡ ತಿಳಿಸಿದರು.


    ಇಡೀ ರಾಜ್ಯದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ವಧು-ವರಾನ್ವೇಷಣೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಸಲುವಾಗಿ ಪಾಂಡವಪುರದಲ್ಲಿ ಪ್ರಥಮವಾಗಿ ವಧು-ವರರ ಸಮಾವೇಶ ಆಯೋಜಿಸಲಾಗಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿರುವವರು, ಅನಕ್ಷರಸ್ಥರು, ಕಡಿಮೆ ವಿದ್ಯಾಭ್ಯಾಸ ಮಾಡಿರುವವರು, ಕೂಲಿ ಕಾರ್ಮಿಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಉದ್ಯಮಿಗಳು ಮತ್ತು ವೃತ್ತಿಪರರೂ ಭಾಗವಹಿಸಬಹುದಾಗಿದೆ. ಯಾವುದೇ ಜಿಲ್ಲೆ, ತಾಲೂಕಿನ ಒಕ್ಕಲಿಗ ಜನಾಂಗದವರು ಈ ಸಮಾವೇಶದಲ್ಲಿ ಭಾಗವಹಿಸಿ ನೋಂದಣಿ ಮಾಡಿಸಬಹುದು.
    ಸಮಾವೇಶದಲ್ಲಿ ಭಾಗವಹಿಸುವ ವಧು-ವರರು ಇತ್ತೀಚಿನ ಎರಡು ಪೋಸ್ಟ್ ಕಾರ್ಡ್ ಸೈಜ್ ಭಾವಚಿತ್ರ ಹಾಗೂ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ತರಬೇಕು. ವಧು ಮತ್ತು ವರನ ಕಡೆಯ ಒಬ್ಬರಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.


    ವಧು-ವರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲು ಪ್ರತಿ ಗ್ರಾಪಂಗೂ ಒಬ್ಬೊಬ್ಬ ಒಕ್ಕಲಿಗೆ ಮುಖಂಡರನ್ನು ನೇಮಿಸಲಾಗಿದೆ. ಜತೆಗೆ ಪಟ್ಟಣ ವ್ಯಾಪ್ತಿಗೆ ಪುರಸಭಾ ಸದಸ್ಯರಿಗೆ ಜವಾಬ್ದಾರಿ ನೀಡಲಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಧು-ವರರು ಬರುತ್ತಾರೆ ಎಂಬ ನಿರೀಕ್ಷೆ ಇದೆ.
    ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿದ್ದು, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಟ್ರಸ್ಟ್ ಕೇಂದ್ರ ಸಂಘದ ಅಧ್ಯಕ್ಷ ರವಿಕುಮಾರ್ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

    See also  ಜೈಲಿನಿಂದ ಬಿಡುಗಡೆ ಕೂಡಲೇ ದೇವೇಗೌಡರ ಮನೆಗೆ ರೇವಣ್ಣ; ತಬ್ಬಿಕೊಂಡು ಬರ ಮಾಡಿಕೊಂಡ ಕುಮಾರಸ್ವಾಮಿ


    ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಕಾರ್ಯದರ್ಶಿ ಕೆ.ಕುಬೇರ, ಕೋಶಾಧ್ಯಕ್ಷ ರೈಟರ್ ಸ್ವಾಮಿಗೌಡ, ಸಂಘಟನಾ ಕಾರ್ಯದರ್ಶಿ ಕೋ.ಪು.ಗುಣಶೇಖರ್, ಉಪಾಧ್ಯಕ್ಷ ಬಿ.ಎಸ್.ಜಯರಾಮು, ಸಾಹಿತಿ ಚಂದ್ರಶೇಖರಯ್ಯ, ನಿರ್ದೇಶಕರಾದ ಅನಿತಾ ಲೋಕೇಶ್, ಮಂಜುಳಾ ಶಂಕರ್‌ನಾಗ್, ಬಿ.ಜೆ.ಸ್ವಾಮಿ, ಶ್ರೀನಿವಾಸ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts