ಪೆಟ್ರೋಲ್, ಡೀಸೆಲ್ ದರ ಇಳಿಕೆ

ನವದೆಹಲಿ: ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಾಲ್ಕನೇ ದಿನವೂ ಇಳಿಕೆ ಮಾಡಿವೆ.

ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್​ಗೆ ರೂ. 71.73 ಆಗಿದ್ದರೆ, ಕೋಲ್ಕತದಲ್ಲಿ ರೂ. 73.79, ಮುಂಬೈನಲ್ಲಿ ರೂ. 77.34, ಚೆನ್ನೈನಲ್ಲಿ ರೂ. 74.46 ಆಗಿದೆ.

ದೆಹಲಿ ಮತ್ತು ಕೋಲ್ಕತದಲ್ಲಿ ಪೆಟ್ರೋಲ್ ದರ 42 ಪೈಸೆ ಇಳಿಕೆಯಾಗಿದ್ದರೆ, ಮುಂಬೈ ಮತ್ತು ಚೆನ್ನೈನಲ್ಲಿ ಕ್ರಮವಾಗಿ 41 ಮತ್ತು 44 ಪೈಸೆ ಇಳಿಕೆ ಕಂಡಿದೆ.

ಡೀಸೆಲ್ ದರ ನವದೆಹಲಿಯಲ್ಲಿ ಲೀಟರ್​ಗೆ ರೂ. 66.11 ಆಗಿದ್ದರೆ, ಕೋಲ್ಕತದಲ್ಲಿ ರೂ. 67.86, ಮುಂಬೈನಲ್ಲಿ ರೂ.69.27 ಮತ್ತು ಚೆನ್ನೈನಲ್ಲಿ ರೂ. 69.88 ಆಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಪೆಟ್ರೋಲ್ ದರ ರೂ. 74.07 ರೂ. ಡೀಸೆಲ್ ಬೆಲೆ ರೂ. 68.26 ಇದೆ.

Leave a Reply

Your email address will not be published. Required fields are marked *