ಶಿರಸಿ: ತಾಲೂಕಿನ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ದೀಪಾವಳಿ ನರಕ ಚತುರ್ದಶಿ ಹಿನ್ನೆಲೆಯಲ್ಲಿ ಗುರುವಾರ ಎಣ್ಣೆ ಬಳಿಯುವ ಶಾಸ್ತ್ರ ನಡೆಸಲಾಯಿತು.
ಸಾಮೂಹಿಕ ಎಣ್ಣೆ ಅಭ್ಯಂಜನಕ್ಕೂ ಮೊದಲು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಕಿರಿಯ ಶ್ರೀಗಳಾದ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿಗಳಿಗೆ ಈ ಶಾಸ್ತ್ರ ನಡೆಸಿದರು.
ಬಳಿಕ ಉಭಯ ಯತಿಗಳು ಮಠದ ಗೋ ಶಾಲೆಗೆ ತೆರಳಿ ಜಾನುವಾರುಗಳಿಗೆ ಎಣ್ಣೆ ಅಭ್ಯಂಜನ ನಡೆಸಿದರು.