ಹುಕ್ಕೇರಿ: ಕೆಲವು ರೈತರು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಬಳಕೆ ಮಾಡುವುದರಿಂದ ಪ್ರಾಮಾಣಿಕ ರೈತರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ರೈತರು ಅಧಿಕೃತ ಸಂಪರ್ಕ ಮಾಡಿಕೊಳ್ಳಬೇಕೆಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ತಾಲೂಕಿನ ವಿವಿಧೆಡೆ ಅಳವಡಿಸಿರುವ ಹೆಚ್ಚುವರಿ ಟಿಸಿ ಕಾರ್ಯಾರಂಭವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ವಿದ್ಯುತ್ ಸರಬರಾಜಿಗೆ ಒತ್ತಾಯಿಸುವ ರೈತರು ಇಂತಹ ಅನಧಿಕೃತ ಸಂಪರ್ಕಗಳ ಕುರಿತು ವಿದ್ಯುತ್ ಸಹಕಾರಿ ಸಂಘಕ್ಕೆ ಮಾಹಿತಿ ನೀಡುವುದರ ಜತೆಗೆ ಅಧಿಕೃತ ಜೋಡಣೆಗೆ ಆಗ್ರಹಿಸಬೇಕು ಎಂದರು.
ಹುಕ್ಕೇರಿ ಹೊರವಲಯದ ಖತಗಲ್ಲಿ, ಗೌಡವಾಡ ಗ್ರಾಮದ ದೇಸಾಯಿ ಹಾಗೂ ಬೋರಗಲ್ಲ ಗ್ರಾಮದ ಚಿಕ್ಕೋಡಿ ರಸ್ತೆಯಲ್ಲಿ ಅಳವಡಿಸಿರುವ ಹೆಚ್ಚುವರಿ ಐ.ಪಿ ಟಿಸಿಗಳನ್ನು ಉದ್ಘಾಟಿಸಿದರು. ಇದೇ ವೇಳೆ ರಮೇಶ ಕತ್ತಿ ಅವರನ್ನು ಸನ್ಮಾನಿಸಲಾಯಿತು.
ಸ್ಥಾನಿಕ ಇಂಜಿನಿಯರ್ ನೇಮಿನಾಥ ಖೇಮಲಾಪುರೆ, ಶಾಖಾಧಿಕಾರಿ ಉದಯ ಮಗದುಮ್ಮ, ಮಲ್ಲಿಕಾರ್ಜುನ ಹೆಬ್ಬಾಳೆ, ಮುಖಂಡರಾದ ಎ.ಕೆ.ಪಾಟೀಲ, ಗುರುರಾಜ ಕುಲಕರ್ಣಿ, ರಾಜು ಮುನ್ನೋಳಿ, ಗಿರೀಶ ಪಾಟೀಲ, ಚನ್ನಪ್ಪ ಗಜಬರ, ಗಿರೀಶ ಕುಲಕರ್ಣಿ, ಬಾಪು ನಾಯಿಕ, ಸುನೀಲ ಭೈರಣ್ಣವರ, ಪ್ರಭುಗೌಡ ಪಾಟೀಲ, ಬಸಗೌಡ ದೇಸಾಯಿ, ಸುರೇಶ ಕೊಟಬಾಗಿ, ಶಂಕರಗೌಡ ಪಾಟೀಲ, ರಾಯಪ್ಪ ಯಶವಂತ, ಪ್ರದೀಪ ಕಾಮಾನಿ, ಅಜಿತ್ ಸಂಕಣ್ಣವರ ಇತರರಿದ್ದರು.