ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಶೀಘ್ರ ನೀಲಿನಕ್ಷೆ ಸಿದ್ಧಪಡಿಸಿ

ಚಿಕ್ಕಮಗಳೂರು: ಜಿಲ್ಲಾಸ್ಪತ್ರೆ ಉನ್ನತೀಕರಣದ ಹಿನ್ನೆಲೆಯಲ್ಲಿ ಅತ್ಯವಶ್ಯಕ ವಿಭಾಗಗಳ ನಿರ್ವಣದ ಬಗ್ಗೆ ನೀಲಿನಕ್ಷೆ ಸಿದ್ಧಪಡಿಸಲು ಜಿಲ್ಲಾ ಸರ್ಜನ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಶಾಸಕ ರವಿ ಸೂಚಿಸಿದರು.

ಶಾಸಕರೊಂದಿಗೆ ಶುಕ್ರವಾರ ಜಿಲ್ಲಾ ಸರ್ಜನ್ ಡಾ. ಕುಮಾರ್ ನಾಯಕ್ ಹಾಗೂ ಲೋಕೋಪಯೋಗಿ ಇಲಾಖೆ ತಂತ್ರಜ್ಞರು ಆಸ್ಪತ್ರೆ ವಿಸ್ತರಣೆ ಬಗ್ಗೆ ರ್ಚಚಿಸಿದರು. ರಾಜ್ಯ ಸರ್ಕಾರ ಬಜೆಟ್​ನಲ್ಲಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು 50 ಕೋಟಿ ರೂ. ಮೀಸಲಿಟ್ಟಿದೆ. ಈ ಅನುದಾನದಿಂದ ಆಸ್ಪತ್ರೆಯಲ್ಲಿ ಅವಶ್ಯಕ ಘಟಕವನ್ನು ಮೊದಲ ಹಂತದಲ್ಲಿ ನಿರ್ವಿುಸಬೇಕು. ಮುಂದಿನ ದಿನಗಳಲ್ಲಿ ಆಸ್ಪತ್ರೆ ಆವರಣದಲ್ಲಿ ಎಲ್ಲೆಲ್ಲಿ ವಿಸ್ತರಣೆ ಮಾಡಬಹುದೆಂದು ಈಗಲೇ ಸ್ಥಳ ಗುರುತಿಸಿಕೊಂಡರೆ ಒಳ್ಳೆಯದು ಎಂದು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆ ಒಟ್ಟು 10 ಎಕರೆ ಸ್ಥಳಾವಕಾಶ ಹೊಂದಿದೆ. ಈಗಾಗಲೇ ಅಲ್ಲಿ ಯೋಜನಾಬದ್ಧ ಕಟ್ಟಡ ನಿರ್ವಿುಸದೆ ಇರುವುದರಿಂದ ಹೊಸದಾಗಿ ಕಟ್ಟಡ ನಿರ್ವಣಕ್ಕೆ ಖಾಲಿ ಜಾಗವಿಲ್ಲ. ಹಾಗಾಗಿ ದಾನಿಗಳ ನೆರವಿನಿಂದ ನಿರ್ವಿುಸಿರುವ ಮುಂಭಾಗದ ಕಟ್ಟಡವನ್ನು ಹಾಗೆಯೇ ಉಳಿಸಿಕೊಂಡು ಉಳಿದೆಡೆ ಹಳೆಯ ಕಟ್ಟಡ ಕೆಡವಿ ಬಹುಮಹಡಿ ಕಟ್ಟಡ ನಿರ್ವಿುಸುವ ಮೂಲಕ ಕನಿಷ್ಠ 600ರಿಂದ 1000 ಹಾಸಿಗೆಗಳ ಆಸ್ಪತ್ರೆಯನ್ನಾಗಿ ನಿರ್ವಿುಸಬೇಕು ಎಂದು ಹೇಳಿದರು.

ಹಳೇ ಕಟ್ಟಡಗಳು, ಉಪಯೋಗಿಸದೆ ಇರುವ ವೈದ್ಯರ ವಸತಿ ಗೃಹ, ಹೆರಿಗೆ ಆಸ್ಪತ್ರೆ ಆವರಣದಲ್ಲಿರುವ ವಸತಿ ಗೃಹಗಳ ಜಾಗದಲ್ಲಿ ಆಸ್ಪತ್ರೆ ವಿಸ್ತರಣಾ ಕಾರ್ಯ ಕೈಗೊಳ್ಳಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ನೀಲಿ ನಕ್ಷೆ ಸಿದ್ಧಪಡಿಸಿದರೆ ಈ ಬಗ್ಗೆ ರ್ಚಚಿಸಿ ಉನ್ನತೀಕರಣದ ಬಗ್ಗೆ ಯೋಚಿಸಬಹು ಎಂದರು.

ಹೊರ ರೋಗಿಗಳ ವಿಭಾಗ ಕಿಷ್ಕಿಂಧೆಯಾಗಿದೆ. ರೋಗಿಗಳಿಗೆ ನಿಲ್ಲಲೂ ಜಾಗವಿಲ್ಲ. ಈ ವಿಭಾಗವನ್ನು ವಿಶಾಲವಾಗಿ ನಿರ್ಮಾಣ ಮಾಡಬೇಕಾಗಿದೆ. ಒಂದೇ ಕಡೆ ವಿವಿಧ ತಜ್ಞ ವೈದ್ಯರು ಹೊರರೋಗಿಗಳನ್ನು ನೋಡುವಂತೆ ನಿರ್ವಿುಸಬೇಕಿದೆ. ಇದೇ ರೀತಿ ಹೆರಿಗೆ ವಿಭಾಗ, ಮೂಳೆ ತಜ್ಞ ವೈದ್ಯರ, ಒಳರೋಗಿಗಳ ವಿಭಾಗವನ್ನು ಯಾವ ರೀತಿ ನವೀಕರಿಸಬಹುದು ಅಥವಾ ಹೊಸದಾಗಿ ಪ್ರತ್ಯೇಕ ಕೊಠಡಿ ನಿರ್ವಿುಸಬಹುದು ಎಂಬುದನ್ನು ಆಲೋಚಿಸಬೇಕು ಎಂದು ಸೂಚಿಸಿದರು.

ನಾನು ಮತ್ತು ಜಿಲ್ಲಾಧಿಕಾರಿ ಭಾನುವಾರ ಆಸ್ಪತ್ರೆ ಆವರಣಕ್ಕೆ ಭೇಟಿ ನೀಡಿ ಪೂರ್ಣವಾಗಿ ಪರಿಶೀಲಿಸುತ್ತೇವೆ. ಆ ವೇಳೆಗೆ ವಿಸ್ತರಣೆ ಬಗ್ಗೆ ವರದಿ ತಯಾರಿಸಿ ಇಟ್ಟುಕೊಂಡಿದ್ದರೆ ಒಳ್ಳೆಯದು ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಇತ್ತೀಚೆಗೆ ಈ ಬಗ್ಗೆ ಬೆಂಗಳೂರಲ್ಲಿ ಸಂಬಂಧಿಸಿದ ಕಾರ್ಯದರ್ಶಿಗಳೊಡನೆ ರ್ಚಚಿಸಿದ್ದು, ಅವರೂ ಸದ್ಯದಲ್ಲೇ ಕಟ್ಟಡ ನಿರ್ವಣಕ್ಕೆ ಟೆಂಡರ್ ಪ್ರಕ್ರಿಯೆ ಆರಂಭಿಸುವ ಭರವಸೆ ನೀಡಿರುವುದಾಗಿ ತಿಳಿಸಿದರು.