ಪದಾಧಿಕಾರಿಗಳ ಪದಗ್ರಹಣ

ಸುಂಟಿಕೊಪ್ಪ: ಇಲ್ಲಿನ ಜೂನಿಯರ್ ಚೇಂಬರ್ ಇಂಡಿಯಾ (ಜೆಸಿಐ) ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ, ಜೆಸಿಐ ಸಂಸ್ಥೆ ನಡೆಸುತ್ತಿರುವ ಸಾಮಾಜಿಕ ಕಾರ್ಯ ಮೆಚ್ಚುವಂತದ್ದು. ಸುಂಟಿಕೊಪ್ಪಕ್ಕೆ ಬಸ್ ನಿಲ್ದಾಣ, ಮಾರುಕಟ್ಟೆ ಹಾಗೂ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಜಾಗದ ಅವಶ್ಯಕತೆಯಿದೆ. ಇವುಗಳಿಗೆ ಜಾಗ ಗುರುತಿಸಿದ ನಂತರ ಸಂಘ-ಸಂಸ್ಥೆಗಳ ಸಮುದಾಯ ಭವನಕ್ಕೆ ಜಾಗ ಕಲ್ಪಿಸಿಕೊಡಲಾಗುವುದು ಎಂದರು.

ವಲಯ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ, ಸುಂಟಿಕೊಪ್ಪ ಜೆಸಿಐ ಸಂಸ್ಥೆ ರಾಷ್ಟ್ರ ಮಟ್ಟದಲ್ಲಿ ಛಾಪು ಮೂಡಿಸಿದ್ದು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಂತೆ ಅಧ್ಯಕ್ಷರಿಗೆ ಕಿವಿಮಾತು ಹೇಳಿದರು.

ವಲಯ ಅಧ್ಯಕ್ಷ ಜೆಫಿನ್ ಜಾಯ್ ಪ್ರಮಾಣವಚನ ಬೋಧಿಸಿದರು. ನಿರ್ಗಮಿತ ಅಧ್ಯಕ್ಷ ಅರುಣ್ ಕುಮಾರ್ ನೂತನ ಅಧ್ಯಕ್ಷ ಅಶೋಕ್ ನಿಡ್ಯಮಲೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು.