ಚಿಕ್ಕೋಡಿ: ಗರ್ಭಕಂಠದ ಕ್ಯಾನ್ಸರ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಇನ್ನರ್‌ವೀಲ್ ಕ್ಲಬ್ ಆಫ್ ಚಿಕ್ಕೋಡಿ ನಿರ್ಧರಿಸಲಾಗಿದೆ ಎಂದು ಅಧ್ಯಕ್ಷೆ ಭಾಗ್ಯಶ್ರೀ ತೊಗ್ಗಿ ಹೇಳಿದರು.
ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಇನ್ನರ್‌ವೀಲ್ ಕ್ಲಬ್ ಆಫ್ ಚಿಕ್ಕೋಡಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಅನಾಥರಿಗೆ ಹಾಗೂ ವೃದ್ಧರ ಸೇವೆ, ಹೆಣ್ಣು ಮಕ್ಕಳಿಗೆ ಋತುಸ್ರಾವದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಮುಂದೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಕೊಲ್ಲಾಪುರದ ಜಿಲ್ಲಾ ಉಪಾಧ್ಯಕ್ಷ ಉತ್ಕರ್ಷಾ ಪಾಟೀಲ ಮಾತನಾಡಿ, ಮಹಿಳೆಯರು ಇನ್ನರ್‌ವೀಲ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದುಡಿಯುತ್ತಿದ್ದಾರೆ ಎಂದರು. ಇನ್ನರ್‌ವೀಲ್ ಕ್ಲಬ್ ನಿಪ್ಪಾಣಿ ಮಾಜಿ ಅಧ್ಯಕ್ಷೆ ವರ್ಷಾ ನಂದರಗಿ, ನಿಕಟಪೂರ್ವ ಇನ್ನರ್‌ವೀಲ್ ಅಧ್ಯಕ್ಷೆ ಸೀಮಾ ಟಿಕ್ಕೆ, ಕಾರ್ಯಾಧ್ಯಕ್ಷೆಯರಾದ ಪ್ರತಿಮಾ ಮಹಾಜನ, ಸುವರ್ಣ ಬಬಲೇಶ್ವರ, ಖಜಾಂಚಿ ಸುಜಾತಾ ಪಾಟೀಲ, ಸುವರ್ಣ ಹಂಪನ್ನವರ, ಉಪಾಧ್ಯಕ್ಷೆ ಗೀತಾ ಪಡಲಾಳೆ, ಕಾರ್ಯನಿರ್ವಹಣಾಧಿಕಾರಿ ರಾಜಶ್ರೀ ಕುಲಕರ್ಣಿ ಅವರನ್ನು ಪದಾಧಿಕಾರಿಗಳಾಗಿ ನೇಮಿಸಲಾಯಿತು. ರೋಹಿಣಿ ಕುಲಕರ್ಣಿ, ಡಾ.ಪ್ರಿಯಾಂಕಾ ಚೌಗುಲೆ, ಡಾ.ಸೀಮಾ ಟಿಕ್ಕೆ, ಡಾ.ಸಂಗೀತಾ ಜೋಶಿ, ಡಾ.ರಾಜಶ್ರೀ ಪಾಟೀಲ, ಡಾ.ಸ್ನೇಹಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.