ಹುಕ್ಕೇರಿ: ಪಂಚಮಸಾಲಿ ಸಮುದಾಯದವರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿರುವುದನ್ನು ಖಂಡಿಸಿ ಪಟ್ಟಣದ ಕೋರ್ಟ್ ವೃತ್ತದಲ್ಲಿ ಪಂಚಮಸಾಲಿ ಸಮುದಾಯದವರು, ಸಮುದಾಯದ ವಕೀಲರು ರಸ್ತೆ ಸಂಚಾರ ತಡೆ ನಡೆಸಿ ಗುರುವಾರ ಪ್ರತಿಭಟಿಸಿದರು.
ವಕೀಲ ರಾಮಚಂದ್ರ ಜೋಶಿ, ಎಸ್.ಜಿ.ನದಾಫ್, ರಾಜೇಂದ್ರ ಮೋಶಿ ಮಾತನಾಡಿ, ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಹತ್ತಿಕ್ಕಲು ಸರ್ಕಾರ ಪೊಲೀಸರನ್ನು ಬಳಸಿಕೊಂಡಿದ್ದು ಖಂಡನೀಯ ಎಂದರು.
ಸಮುದಾಯದ ಮುಖಂಡರಾದ ಚಂದ್ರಶೇಖರ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ವಿಜಯ ರವದಿ, ತಮ್ಮಣಗೌಡ ಪಾಟೀಲ ಮಾತನಾಡಿ, ಪಂಚಮಸಾಲಿ ಸಮುದಾಯದ ಜನಪ್ರತಿನಿಧಿಗಳು ಮೀಸಲಾತಿ ಬೇಡಿಕೆಗೆ ಸ್ಪಂದಿಸದಿರುವುದು ವಿಷಾದಕರ ಎಂದು ಹೇಳಿದರು.
ಬಳಿಕ ತಹಸೀಲ್ದಾರ್ ಪ್ರಕಾಶ ಕಲ್ಲೋಳಿ ಅವರಿಗೆ ಮನವಿ ಸಲ್ಲಿಸಲಾಯಿತು. ಪಂಚಮಸಾಲಿ ಸಮುದಾಯದ ತಾಲೂಕಾಧ್ಯಕ್ಷ ಭೀಮಪ್ಪ ಚೌಗಲಾ, ಕೆ.ಬಿ.ಕುರಬೇಟ, ಮುಖಂಡರಾದ ಸೋಮಶೇಖರ ಪರಕನಟ್ಟಿ, ಜಯಗೌಡ ಪಾಟೀಲ, ಬಿ.ಎಸ್.ಮುನ್ನೋಳಿ, ರಾಜು ಮುನ್ನೋಳಿ, ಪರಗೌಡ ಪಾಟೀಲ, ವಿರೂಪಾಕ್ಷ ಮರೆನ್ನವರ, ಚನ್ನಪ್ಪ ಗಜಬರ, ಬಸವರಾಜ ನಂದಿಕೋಲಮಠ, ಬಸಗೌಡ ಪಾಟೀಲ, ರವಿ ಪರಕನಟ್ಟಿ, ಭೀಮಪ್ಪ ಮುದಕನ್ನವರ, ಇತರರಿದ್ದರು.