ಇರಾನ್‌ನ ಮಿರ್ಜಾ ಡಾ.ಪ್ರಭಾಕರ ಕೋರೆ ಕೇಸರಿ

ಮಾಂಜರಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ 77ನೆಯ ಜನ್ಮದಿನದ ನಿಮಿತ್ತ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಟ್ಟದ ಜಂಗೀ ನಿಕಾಲಿ ಕುಸ್ತಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.

ಪ್ರಥಮ ಕುಸ್ತಿ ಇರಾನ್‌ನ ಮಿರ್ಜಾ ಮತ್ತು ಪಂಜಾಬ್‌ನ ಭೂಪೇಂದ್ರ ಅಜ್ನಾಲಾ ಮಧ್ಯೆ ಅರ್ಧ ಗಂಟೆಗೂ ಹೆಚ್ಚು ಕಾಲ ನಡೆಯಿತು. ಸುರಿಯುವ ಮಳೆಯಲ್ಲೂ ಇಬ್ಬರೂ ಕಾದಾಡಿದರು. ಕೊನೆಯ ಕ್ಷಣದಲ್ಲಿ ಇರಾನ್‌ನ ಮಿರ್ಜಾ ಗೆದ್ದು ಡಾ.ಪ್ರಭಾಕರ ಕೋರೆ ಕೇಸರಿ ಗೌರವಕ್ಕೆ ಪಾತ್ರರಾದರು.
ಹಿಂದ ಕೇಸರಿ ಆಶಿಶ್ ಹೂಡಾ ನವದೆಹಲಿ ಮತ್ತು ಮಹಾರಾಷ್ಟ್ರ ಕೇಸರಿ ಪುಣೆಯ ಕುಸ್ತಿಪಟು ಕಿರಣ್ ಭಗತ್ ಎರಡನೇ ಕುಸ್ತಿಯಲ್ಲಿ ಸೆಣಸಾಡಿದರು. ಈ ಕುಸ್ತಿ ಡ್ರಾ ಆಯಿತು. ಭಾರತೀಯ ಸೇನೆಯ ರಾಷ್ಟ್ರೀಯ ಚಾಂಪಿಯನ್ ಮಹಾರಾಷ್ಟ್ರದ ಕೇಸರಿ ಪೃಥ್ವಿರಾಜ್ ಪವಾರ್ ಮತ್ತು ಹಿಮಾಚಲ ಕೇಸರಿ ಉತ್ತರ ಪ್ರದೇಶದ ಪಲಂದರ್ ಮಥುರಾ ನಡುವಿನ ಕುಸ್ತಿಯಲ್ಲಿ ಪೃಥ್ವಿರಾಜ್ ಪವಾರ ವಿಜಯಶಾಲಿಯಾದರು.

ಮಹಾರಾಷ್ಟ್ರ ಕೇಸರಿ ಸಿಕಂದರ್ ಶೇಖ್, ಕರ್ನಾಟಕ ಕೇಸರಿ ರತನ್ ಕುಮಾರ್ ಮಠಪತಿ ಪ್ರಮುಖರಾಗಿ ಕಾರ್ಯನಿರ್ವಹಿಸಿದರು.
ಎಂಎಲ್‌ಸಿ ಪ್ರಕಾಶ ಹುಕ್ಕೇರಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ದುರ್ಯೋಧನ ಐಹೊಳೆ, ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ನಿಗಮದ ನಿರ್ದೇಶಕ ಅಮಿತ್ ಕೋರೆ, ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ನಿರ್ದೇಶಕರಾದ ಭರತೇಶ ಬನವಣೆ, ಬಿ.ಆರ್.ಪಾಟೀಲ, ಡಿ.ಎಸ್.ಕರೋಶಿ ಇತರರಿದ್ದರು.

ಮನರಂಜಿಸಿದ ದೇವ ಥಾಪಾ: ನೇಪಾಳದ ಸ್ಟಾರ್ ಕುಸ್ತಿಪಟು ದೇವ ಥಾಪಾ ಮತ್ತು ಹಿಮಾಚಲ ಪ್ರದೇಶದ ಅಯೋಧ್ಯೆ ಕೇಸರಿ ರವಿಕುಮಾರ್ ನಡುವೆ ಕುತೂಹಲಕಾರಿ ಕುಸ್ತಿ ನಡೆಯಿತು. ನೇಪಾಳದ ದೇವ ಥಾಪಾ ವಿವಿಧ ಪಟ್ಟು ಪ್ರಯೋಜಿಸುವ ಜತೆಗೆ ಮೈದಾನದ ತುಂಬೆಲ್ಲ ಓಡಾಡಿ ಸೆಣೆಸುವ ಮೂಲಕ ರವಿಕುಮಾರ ಅವರನ್ನು ಸೋಲಿಸಿದರು.

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…