
ವಿಟ್ಲ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಸಮಿತಿ ವತಿಯಿಂದ ಶ್ರೀಗಳ ಜನ್ಮದಿನೋತ್ಸವ ಗ್ರಾಮೋತ್ಸವ ೨೦೨೫ ಸೇವಾ ಸಂಭ್ರಮ ಪ್ರಯುಕ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂನ್ ೨೨ರಂದು ಶ್ರೀ ಗುರುದೇವ ವಿದ್ಯಾಪೀಠದ ಆಟದ ಮೈದಾನದಲ್ಲಿ ಹೊರಾಂಗಣ ಸ್ಪರ್ಧೆ, ೨೯ರಂದು ಶ್ರೀ ಸಂಸ್ಥಾನದ ಸಾಗುವಳಿ ಭೂಮಿ ಬನಾರಿಯಲ್ಲಿ ಕೆಸರ್‍ದ ಕಂಡೊಡೊಂಜಿ ದಿನ, ಜುಲೈ ೬ರಂದು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಒಳಾಂಗಣ ಸ್ಪರ್ಧೆಗಳು ನಡೆಯಲಿವೆ.