ಆಸ್ತಿ ವಿಚಾರಕ್ಕೆ ಜಗಳ ತೆಗೆದು ತಾಯಿಗೆ ಬೆಂಕಿಯಿಟ್ಟು ಕೊಂದ ಮಗ

ಒಡಿಶಾ: ಆಸ್ತಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಮಗನೊಬ್ಬ ತಾಯಿಗೆ ಬೆಂಕಿ ಹಚ್ಚಿ ಕೊಂದಿರುವ ಘಟನೆ ಒಡಿಶಾದ ಮಲ್ಕಂಗಿರಿಯಲ್ಲಿ ಶನಿವಾರ ನಡೆದಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗೀತಾ ಮಂಡಲ್​(55) ಮೃತ ದುರ್ದೈವಿ. ಆರೋಪಿ ತಪಾಸ್​ ಮಂಡಲ್​(30) ಆಸ್ತಿ ವಿಚಾರಕ್ಕೆ ಜಗಳ ತೆಗೆದು ಮೊದಲಿಗೆ ಹಲ್ಲೆ ಮಾಡಿ, ನಂತರ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟಿದ್ದಾನೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೋಟು ಪೊಲೀಸ್​ ಠಾಣಾ ವ್ಯಾಪ್ತಿಯ ಎಂಪಿವಿ-55 ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತೆ ಗೀತಾರಿಗೆ ತೀವ್ರತರವಾದ ಸುಟ್ಟು ಗಾಯಗಳಾದ ಹಿನ್ನೆಲೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ಜಾರ್ಖಂಡ್​ನ ಧನಬಾದ್​ನಲ್ಲಿ ವರದಕ್ಷಿಣೆ ವಿಚಾರವಾಗಿ ಮಹಿಳೆಯೊಬ್ಬಳನ್ನು ಜೀವಂತವಾಗಿ ಸುಡಲಾಗಿತ್ತು. ರಾಜಸ್ಥಾನದಲ್ಲಿ ನಡೆದ ಮೊತ್ತೊಂದು ಪ್ರಕರಣದಲ್ಲಿ ಹುಡುಗನೊಂದಿಗೆ ತನ್ನ ಮಗಳು ಸಂಬಂಧ ಹೊಂದಿದ್ದಾಳೆ ಎಂಬ ಕಾರಣಕ್ಕೆ ತಂದೆ-ತಾಯಿ ಸೇರಿಕೊಂಡು ಅಪ್ರಾಪ್ತ ಮಗಳಿಗೆ ಬೆಂಕಿಯಿಟ್ಟು ಕೊಲೆಗೈದಿದ್ದರು. (ಏಜೆನ್ಸೀಸ್​)

One Reply to “ಆಸ್ತಿ ವಿಚಾರಕ್ಕೆ ಜಗಳ ತೆಗೆದು ತಾಯಿಗೆ ಬೆಂಕಿಯಿಟ್ಟು ಕೊಂದ ಮಗ”

  1. ಆಸ್ತಿ ವಿವಾದ ವಿಷಯ ವಿವರಣೆ ಇಲ್ಲ.. ಭಾಗ ಅಥವಾ ಖಾತೆ ಅಥವಾ ಜಮೀನು, ಯಾವರೀತಿ ವಿವಾದ

Comments are closed.