ಸಿನಿಮಾ ರಂಗಕ್ಕೂ ಮಹಾಕಾವ್ಯ ರಾಮಯಾಣಕ್ಕೂ ಅವಿನಾಭಾವ ಸಂಬಂಧ. ರಾಮಾಯಣದ ಹಲವಾರು ಕಥೆ, ಉಪಕಥೆಗಳನ್ನು ಆಧರಿಸಿ ಈಗಾಗಲೇ ಹಲವು ಸಿನಿಮಾ, ಧಾರಾವಾಹಿಗಳನ್ನು ಮಾಡಲಾಗಿದೆ. ಇತ್ತೀಚೆಗೆಷ್ಟೇ ತೆಲುಗಿನಲ್ಲಿ ‘ಆದಿಪುರುಷ್’ ತೆರೆಕಂಡಿತ್ತು. ಇನ್ನು, ಬಾಲಿವುಡ್‌ನಲ್ಲಿ ರಣಬೀರ್ ಕಪೂರ್- ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ರಾಮಾಯಣ ಕುರಿತ ಸಿನಿಮಾ ಸಿದ್ಧವಾಗುತ್ತಿದೆ. ಈ ಮಧ್ಯೆಯೇ, ರಾಮಾಯಣದ ಕುರಿತು ಮತ್ತೊಂದು ಸಂಗತಿ ಹೊರಬಿದ್ದಿದೆ. ಅದು ಏನೆಂದರೆ, 1993ರಲ್ಲಿ ಸಿದ್ಧವಾಗಿದ್ದ ‘ರಾಮಾಯಣ: ದ ಲೆಜೆಂಡ್ ಆ್ ಪ್ರಿನ್ಸ್ ರಾಮ’ ಆ್ಯನಿಮೇಟೆಡ್ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಹಿಂದಿ, ತೆಲುಗು, ತಮಿಳು ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಈ ಸಿನಿಮಾ ಮೂಡಿಬರಲಿದ್ದು, ದೇಶಾದ್ಯಂತ ಅ. 18ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. 1993ರಲ್ಲಿ ಜಪಾನ್‌ನ ಕೊಯಿಚಿ ಸಸಾಕಿ ಹಾಗೂ ಭಾರತದ ರಾಮ್ ಮೋಹನ್ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿತ್ತು. ಜಪಾನ್‌ನ ಯುಗೋ ಸಾಕೋ ಎಂಬುವವರು ನಿರ್ಮಿಸಿದ್ದರು. ಆದರೆ, 1993ರಲ್ಲಿ ಎದುರಾಗಿದ್ದ ರಾಜಕೀಯ ಪರಿಸ್ಥಿತಿಗಳಿಂದಾಗಿ ಭಾರತದಲ್ಲಿ ಆ್ಯನಿಮೇಟೆಡ್ ರಾಮಾಯಣವನ್ನು ಬ್ಯಾನ್ ಮಾಡಲಾಗಿತ್ತು. ಇದೀಗ 31 ವರ್ಷಗಳ ಬಳಿಕ ಈ ಸಿನಿಮಾ ದೇಶಾದ್ಯಂತ ತೆರೆಗೆ ಬರುತ್ತಿದೆ. ‘ಬಾಹುಬಲಿ’ ಸರಣಿ, ‘ಆರ್‌ಆರ್‌ಆರ್’ ಕಥೆ ಬರೆದಿದ್ದ ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಈ ಆ್ಯನಿಮೇಟೆಡ್ ಚಿತ್ರಕ್ಕೆ ಹೊಸ ರೂಪ ನೀಡಿದ್ದಾರೆ. -ಏಜೆನ್ಸೀಸ್
ಮತ್ತೆ ಬಂತು ‘ರಾಮಾಯಣ’!: ಅ.18ರಂದು ಬಿಡುಗಡೆಯಾಗಲಿದೆ ಆ್ಯನಿಮೇಟೆಡ್ ಚಿತ್ರ
You Might Also Like
Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…
ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…
ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…
ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach ) ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…
Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..
ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan) ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…