ಮಂಗಳೂರು ಕರಾವಳಿಯಲ್ಲಿ ಮುಂದುವರಿದ ಓಖ್ಹಿ ಆರ್ಭಟ

<< ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 16ಕ್ಕೆ ಏರಿಕೆ: ಜಲಸಮಾಧಿಯಾದ 4 ಬೋಟ್​ಗಳು>>

ಮಂಗಳೂರು: ಕರಾವಳಿಯಲ್ಲಿ ಓಖ್ಹಿ ಚಂಡಮಾರುತದ ಅಬ್ಬರ ಮುಂದುವರಿದಿದೆ. ರಾಜ್ಯದಲ್ಲಿ ಇಂದು ಕೂಡ ಮಳೆಯಾಗೋ ಸಾಧ್ಯತೆಗಳಿವೆ. ಮುಂದಿನ 24 ಗಂಟೆಗಳಲ್ಲಿ ಗಂಟೆಗೆ 45 ರಿಂದ 65 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.

ತಮಿಳುನಾಡು, ಕೇರಳದಲ್ಲಿ ಓಖ್ಹಿಗೆ ಬಲಿಯಾದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈ ನಡುವೆ ಕೇರಳದ ಕಡಲಿನಲ್ಲಿ ಮೀನುಗಾರಿಕೆಗೆ ತೆರಳಿದ್ದ 14 ಮಂದಿ ಮೀನುಗಾರರು ಸಾವಿನ ದವಡೆಯಿಂದ ಪಾರಾಗಿದ್ದಾರೆ.

ಇನ್ನು ಲಕ್ಷದ್ವೀಪದಲ್ಲಿ ಅಪಾಯದಲ್ಲಿ ಸಿಲುಕಿರೋ ಬೋಟ್​​ಗಳ ರಕ್ಷಣಾ ಕಾರ್ಯಾ ಮುಂದುವರಿದಿದೆ. ಲಕ್ಷದ್ವೀಪದ ಕೌರತಿ ಮತ್ತು ಕಡಮತಿಯ ಸಮುದ್ರಭಾಗದಲ್ಲಿ ಓಖ್ಹಿ ಚಂಡಮಾರುತಕ್ಕೆ ಸಿಲುಕ್ಕಿದ್ದ 4 ಬೋಟ್​ಗಳು ಜಲಸಮಾಧಿಯಾಗಿವೆ. ಸಮುದ್ರ ಮಧ್ಯೆ ಮುಳುಗುತ್ತಿದ್ದ ಮೀನುಗಾರರ ಬೋಟ್​ನ್ನು ಹೆಲಿಕ್ಯಾಪ್ಟರ್ ಮೂಲಕ ನೌಕಾಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ತಮಿಳುನಾಡು, ಲಕ್ಷದ್ವೀಪ, ಕೇರಳ ರಾಜ್ಯದ ಜನರಿಗೆ ತೀವ್ರ ಕಟ್ಟೆಚ್ಚರದಿಂದಿರುವಂತೆ ಮುನ್ಸೂಚನೆ ನೀಡಲಾಗಿದೆ. ಕೇರಳದಲ್ಲಿ ಅಪಾಯಕ್ಕೀಡಾಗಿದ್ದ 218 ಜನ ಮೀನುಗಾರರನ್ನು ರಕ್ಷಿಸಲಾಗಿದೆ. ತಿರುವನಂತಪುರಂ, ಕೊಲ್ಲಮ್, ಯರ್ನಾಕುಲಂನಲ್ಲಿ ಚಂಡ ಮಾರುತದ ಹಾವಳಿ ಜನರಲ್ಲಿ ಭೀತಿ ಸೃಷ್ಟಿಸಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *