21 C
Bengaluru
Thursday, January 23, 2020

ಸಹಿ ಮಾಡಿದರೆ ಅವರು ಆಸ್ತಿಯ ಹಕ್ಕನ್ನು ಕಳೆದುಕೊಳ್ಳುತ್ತಾರೆಯೇ?

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
  • ನನ್ನ ಅಣ್ಣನಿಗೆ 31 ವರ್ಷ. ನನ್ನ ಅತ್ತಿಗೆಗೆ 42 ವರ್ಷ ಅವರ ಮದುವೆಯಾಗಿ ಹತ್ತು ವರ್ಷಕ್ಕೂ ಮೇಲಾಗಿದೆ. ಅವರಿಗೆ ಇಬ್ಬರು ಮಕ್ಕಳು. ಅವರ ಮದುವೆ ದೇವಸ್ಥಾನದಲ್ಲಿ ಆಗಿತ್ತು. ನಮ್ಮ ಅಣ್ಣನ ಹೆಂಡತಿಗೆ ಬೇರೆ ವ್ಯಕ್ತಿಯ ಜತೆ ಸಂಬಂಧ ಇರುವುದು ತಿಳಿದು ಬಂದಾಗ ನಮ್ಮ ಅಣ್ಣ ವಿಚಾರಿಸಿದಾಗ, ಆಕೆಗೆ ಮೊದಲೇ ಬೇರೆಯವರ ಜತೆ ಮದುವೆ ಆಗಿದ್ದು ಅದನ್ನು ಮುಚ್ಚಿಟ್ಟು ನನ್ನ ಅಣ್ಣನನ್ನು ಮದುವೆಯಾಗಿದ್ದು ತಿಳಿದು ಬಂದಿರುತ್ತದೆ. ಆಕೆಯ ಮೊದಲ ಮದುವೆ ರಿಜಿಸ್ಟರ್ ಸಹ ಆಗಿರುತ್ತದೆ. ಆಕೆ ತನ್ನ ಮೊದಲ ಪತಿಯಿಂದ ವಿಚ್ಛೇದನವನ್ನೂ ಪಡೆದಿಲ್ಲ. ಈಗ ನನ್ನ ಅಣ್ಣ ಮತ್ತು ಆಕೆ ಒಂದು ವರ್ಷದಿಂದ ಬೇರೆಯಾಗಿ ವಾಸಿಸುತ್ತಿದ್ದಾರೆ. ಆಕೆಗೆ ತನ್ನ ಮೊದಲ ಪತಿಯ ಜೊತೆ ಈಗಲೂ ಸಂಬಂಧವಿದೆ. ಈಗ ನನ್ನ ಅಣ್ಣ ವಿಚ್ಛೇದನ ಪಡೆಯಲು ಏನು ಮಾಡಬೇಕು? ನನ್ನ ಅಣ್ಣನ ಹೆಂಡತಿ ಕೆಲಸಕ್ಕೆ ಹೋಗುತ್ತಿರುವುದರಿಂದ ಆಕೆಗೆ ಜೀವನಾಂಶ ಕೊಡಬೇಕೇ? ನನ್ನ ಅಣ್ಣನಿಗೆ ವಿಚ್ಛೇದನ ಸಿಗುತ್ತದೆಯೇ?

ನಿಮ್ಮ ಅಣ್ಣನ ಪರಿಸ್ಥಿತಿ ಹಲವಾರು ಕಾನುನು ತೊಡಕುಗಳಿಂದ ಕೂಡಿದೆ. ನಿಮ್ಮ ಅಣ್ಣನ ಹೆಂಡತಿ ತನ್ನ ಮೊದಲ ಪತಿಯಿಂದ ವಿಚ್ಛೇದನ ಪಡೆಯದೆ ನಿಮ್ಮ ಅಣ್ಣನನ್ನು ಮದುವೆ ಆಗಿರುವುದರಿಂದ ಆ ವಿವಾಹ ಕಾನೂನು ರೀತ್ಯಾ ಸಿಂಧುವಾದ ವಿವಾಹವಲ್ಲ. ಹೀಗಾಗಿ ವಿಚ್ಛೇದನ ಪಡೆಯಲು ಕ್ರಮ ತೆಗೆದುಕೊಳ್ಳುವುದು ಅಷ್ಟು ಅರ್ಥ ಪೂರ್ಣವಾಗಲಾರದು. ಬದಲಿಗೆ, ನಿಮ್ಮ ಅಣ್ಣ ತನ್ನ ಮತ್ತು ಆಕೆಯ ಮದುವೆ ಸಿಂಧುವಾದುದಲ್ಲ ಎನ್ನುವ ಹಕ್ಕು ಘೊಷಣೆಯ ದಾವೆಯನ್ನು ಸಲ್ಲಿಸುವುದು ಉತ್ತಮ. ದಾವೆ ಸಲ್ಲಿಸುವುದಕ್ಕೆ ಮೊದಲಿಗೆ ವಕೀಲರನ್ನು ಭೇಟಿ ಮಾಡಿ ಎಲ್ಲ ವಿವರಗಳನ್ನೂ ಕೊಟ್ಟು ತಮಗೆ ಆಗಿರುವ ಮೋಸದ ಅರಿವಾದಾಗಿನಿಂದ ತಾವು ಸಲ್ಲಿಸುತ್ತಿರುವ ದಾವೆ ಕಾಲಮಿತಿಯ ಒಳಗೆ ಬರುತ್ತದೆ ಎನ್ನುವುದನ್ನು ಖಾತ್ರಿಪಡಿಸಿಕೊಂಡು ನಂತರ ದಾವೆ ಸಲ್ಲಿಸುವುದು ಒಳ್ಳೆಯದು. ನಿಮ್ಮ ಅಣ್ಣನ ಪತ್ನಿಗೆ ತನ್ನನ್ನು ತಾನು ಪೋಷಿಸಿಕೊಳ್ಳುವ ಚೈತನ್ಯ ಇರುವುದರಿಂದ ಮತ್ತು ಆಕೆಗೆ ಬೇರೆಯ ಪತಿ ಇರುವುದರಿಂದ, ನಿಮ್ಮ ಅಣ್ಣ ಆಕೆಗೆ ಜೀವನಾಂಶ ಕೊಡುವ ಸಂಭವ ಉಂಟಾಗುವುದಿಲ್ಲ. ಆದರೆ ಎಂದಿಗೇ ಆಗಲೀ, ನಿಮ್ಮ ಅಣ್ಣನ ಮಕ್ಕಳ ಪಾಲನೆ ಪೋಷಣೆಯ ಜವಾಬ್ದಾರಿ ನಿಮ್ಮ ಅಣ್ಣನ ಮೇಲೆ ಇದ್ದೇ ಇರುತ್ತದೆ.

  • ನಮ್ಮ ಅಜ್ಜ ಎರಡು ವರ್ಷಗಳ ಹಿಂದೆ ತೀರಿಕೊಂಡರು. ಅವರಿಗೆ ಮೂವರು ಗಂಡು ಮಕ್ಕಳು ಮತ್ತು ನಮ್ಮ ತಾಯಿ ಒಬ್ಬಳು ಮಗಳು. ನಮ್ಮ ಅಜ್ಜ ಅವರ ಚರ ಆಸ್ತಿಗೆ, ಅಜ್ಜನ ಮೊದಲನೇ ಮಗನನ್ನು ನಾಮಿನಿ ಮಾಡಿದ್ದರು. ಈಗ ಆ ಮಗನೂ ತೀರಿಕೊಂಡಿದ್ದಾರೆ. ಈಗ ನಮ್ಮ ತಾಯಿಯ ಉಳಿದ ಇಬ್ಬರು ಅಣ್ಣಂದಿರು ನಮ್ಮ ತಾಯಿಯನ್ನು ಒಂದು ಹಕ್ಕು ಬಿಟ್ಟ ಪತ್ರ ಎನ್ನುವ ಪತ್ರಕ್ಕೆ ಸಹಿ ಮಾಡಲು ಕೇಳುತ್ತಿದ್ದಾರೆ. ಅಜ್ಜಿಯ ಹೆಸರಿಗೆ ಖಾತೆ ಮಾಡಲು ಮಾತ್ರ ಇದು ಬೇಕು .ಮೊದಲಿಗೆ ಎಲ್ಲ ಆಸ್ತಿಯೂ ಅಜ್ಜಿಯ ಹೆಸರಿಗೇ ಹೋಗಲಿ ಎನ್ನುತ್ತಿದ್ದಾರೆ. ನಮ್ಮ ತಾಯಿ ಇನ್ನೂ ಸಹಿ ಮಾಡಿಲ್ಲ. ಒಂದು ವೇಳೆ ಸಹಿ ಮಾಡಿದರೆ ಅವರು ಆಸ್ತಿಯ ಹಕ್ಕನ್ನು ಕಳೆದುಕೊಳ್ಳುತ್ತಾರೆಯೇ?

ಮೃತ ಹಿಂದೂ ಪುರುಷನ ಎಲ್ಲ ಸ್ವಯಾರ್ಜಿತ ಆಸ್ತಿಗಳೂ ಹಿಂದೂ ವಾರಸಾ ಕಾಯ್ದೆಯ ಕಲಂ 8ರಂತೆ ಆತನ ಪತ್ನಿ ಮತ್ತು ಗಂಡು ಹಾಗೂ ಹೆಣ್ಣುಮಕ್ಕಳಿಗೆ ಸಮವಾಗಿ ಪಾಲಾಗುತ್ತದೆ. ಮೃತ ಪುರುಷನ ಮಕ್ಕಳು ತೀರಿಕೊಂಡರೆ, ಅವರ ಮಕ್ಕಳಿಗೆ ಆ ಹಕ್ಕು ಹೋಗುತ್ತದೆ. ಹೀಗಾಗಿ ನಿಮ್ಮ ಅಜ್ಜನ ಆಸ್ತಿ ಐದು ಭಾಗ ಆಗುತ್ತದೆ. ನಿಮ್ಮ ತೀರಿಕೊಂಡ ಸೋದರ ಮಾವನ ಐದನೇ ಒಂದು ಭಾಗ ಅವರ ಹೆಂಡತಿ ಮತ್ತು ಮಕ್ಕಳಿಗೆ ಹೋಗುತ್ತದೆ. ಇನ್ನು ಖಾತೆ ಬದಲಾಯಿಸುವ ವಿಷಯ:- ಪರಸ್ಪರ ಒಪ್ಪಿಗೆಯಿಂದ ಖಾತೆಯನ್ನು ಯಾರ ಹೆಸರಿಗಾದರೂ ಬದಲಾಯಿಸಬಹುದು. ಆದರೆ ಖಾತೆ ಒಬ್ಬರ ಹೆಸರಿಗೆ ಮಾಡಿಸಿದ ಮಾತ್ರಕ್ಕೇ ಅವರೇ ಪೂರ್ತಿ ಆಸ್ತಿಯ ಮಾಲಿಕರು ಆಗುವುದಿಲ್ಲ. ವಾರಸಾ ಕಾಯ್ದೆಯಂತೆ ಅವರವರ ಭಾಗ ಅವರವರಿಗೆ ಇದ್ದೇ ಇರುತ್ತದೆ.

ಹಕ್ಕು ಬಿಟ್ಟ ಪತ್ರ ಬಿಳಿಯ ಕಾಗದದ ಮೇಲೆ ಇದ್ದರೆ ಅದಕ್ಕೆ ಯಾವ ಬೆಲೆಯೂ ಇರುವುದಿಲ್ಲ. ಅದು ಒಮ್ಮೆ ನೋಂದಣಿ ಆದರೆ ನಿಮ್ಮ ತಾಯಿ ಆಸ್ತಿಯಲ್ಲಿಯ ತಮ್ಮ ಐದನೇ ಒಂದು ಭಾಗದ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಯಾವುದಕ್ಕೂ ಹಕ್ಕು ಬಿಟ್ಟ ಪತ್ರದ ಮೇಲೆ ಸಹಿ ಹಾಕದೇ ಇರುವುದೇ ಒಳ್ಳೆಯದು. ಮುಂದೆ ಆಗಬಹುದಾದ ತೊಂದರೆಗಳನ್ನು ತಪ್ಪಿಸಲು ಖಾತೆಗೆ ಕೊಡುವ ಅರ್ಜಿಯಲ್ಲಿ ನಿಮ್ಮ ಅಜಿ ್ಜಹೆಸರನ್ನು ನಮೂದಿಸಿ) ಮತ್ತು ಮಕ್ಕಳು ಹಾಗೂ ಮೃತ ಸೋದರಮಾವನ ಹೆಂಡತಿ ಮತ್ತು ಮಕ್ಕಳು ಎಂದು ಬರೆಯಿಸಿದರೆ ಒಳ್ಳೆಯದು. ಎಲ್ಲರ ಹಕ್ಕಿನ ಬಗ್ಗೆಯೂ ಗಮನವಿಟ್ಟಂತೆ ಆಗುತ್ತದೆ. ಮುಂದೆ ಎಲ್ಲರೂ ಕೂತು ಮಾತಾಡಿ ಯಾರಿಗೆ ಹೇಗೆ ಎಲ್ಲಿ ಎಷ್ಟು ಭಾಗ ಎಂದು ನಿರ್ಧರಿಸಿ ನೋಂದಾಯಿತ ವಿಭಾಗ ಪತ್ರವನ್ನೇ ಮಾಡಿಕೊಳ್ಳಬಹುದು.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...