ನ್ಯಾಮತಿ: ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ 509 ಗ್ರಾಹಕರ 17 ಕೆಜಿ, 705 ಗ್ರಾಂ ತೂಕದ 12.95 ಕೋಟಿ ಮೌಲ್ಯದ ಚಿನ್ನಾಭರಣ ಕಳವಾಗಿದೆ ಎಂದು ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಸುನೀಲ್‌ಕುಮಾರ್ ಯಾದವ್ ಮಾಹಿತಿ ನೀಡಿದರು.
ತಾಲೂಕಿನ ಸುರಹೊನ್ನೆ ಗ್ರಾಮದ ಬನಶಂಕರಿ ಸಮುದಾಯ ಭವನದಲ್ಲಿ ಗುರುವಾರ ಭಾರತೀಯ ಸ್ಟೇಟ್ ಬ್ಯಾಂಕ್ ಆಯೋಜಿಸಿದ್ದ ಗ್ರಾಹಕರ ಸಭೆಯಲ್ಲಿ ಮಾತನಾಡಿದರು.
ಭಾರತೀಯ ಸ್ಟೇಟ್ ಬ್ಯಾಂಕ್‌ನ ನ್ಯಾಮತಿ ಶಾಖೆಯಲ್ಲಿ ಗ್ರಾಹಕರು ಚಿನ್ನದ ಮೇಲೆ ಸಾಲ ಪಡೆದಿದ್ದರು. ಚಿನ್ನಾಭರಣ ಕಳವಾಗಿರುವುದರಿಂದ ಬ್ಯಾಂಕ್ ನಿಯಮಗಳ ಪ್ರಕಾರ ಗ್ರಾಹಕರಿಗೆ ಪರಿಹಾರ ಕೊಡಲಾಗುವುದು ಎಂದು ಹೇಳಿದರು.
- ಅಡವಿಟ್ಟ 17.7 ಕೆಜಿ ಚಿನ್ನಾಭರಣ ಕಳವು ಪ್ರಕರಣ
- ಪರಿಹಾರ ಕೊಡುವುದಾಗಿ ಹೇಳಿದ ಅಧಿಕಾರಿಗಳು ಸಭೆ ಮುಂದೂಡಿಕೆ
ಆದರೆ, ಬ್ಯಾಂಕ್ ಅಧಿಕಾರಿಗಳ ಮಾತಿಗೆ ಒಪ್ಪದ ಗ್ರಾಹಕರು ಅಡವಿಟ್ಟ ಸಂಪೂರ್ಣ ಚಿನ್ನಾಭರಣ ವಾಪಸ್ ಕೊಡುವಂತೆ ಪಟ್ಟು ಹಿಡಿದರು. ಬ್ಯಾಂಕ್‌ನ ಅಧಿಕಾರಿಗಳು ಗ್ರಾಹಕರ ಮನವೊಲಿಕೆಗೆ ಯತ್ನಿಸಿದರು.
ಗ್ರಾಹಕರು ಪಟ್ಟು ಸಡಿಲಿಸದ ಕಾರಣ ಬ್ಯಾಂಕ್ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಮುಂದೆ ನಿಮ್ಮ ಬೇಡಿಕೆಗಳನ್ನು ಮುಂದಿಟ್ಟು ಚರ್ಚಿಸಿ, ಮತ್ತೊಮ್ಮೆ ಸಭೆ ಕರೆಯುವುದಾಗಿ ಹೇಳಿ ಸಭೆಯನ್ನು ಮುಂದೂಡಿದರು.
ಸಭೆಯಲ್ಲಿ ದಾವಣಗೆರೆ ಮಾಧವ್‌ಕುಮಾರ್, ಕೆ.ಸುರೇಶ್, ಬಳ್ಳಾರಿ ರವಿ ರಾಮಮೂರ್ತಿ, ನ್ಯಾಮತಿ ಠಾಣೆಯ ಪಿಎಸ್‌ಐ ಜಯಪ್ಪ ನಾಯ್ಕ ಇತರರಿದ್ದರು.