ಸಿನಿಮಾ

ಟಿಕೆಟ್ ರಹಿತ ಪ್ರಯಾಣ; 13.95ಲಕ್ಷ ರೂ.‌ದಂಡ‌ ವಸೂಲಿ


ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ತನಿಖಾ  ತಂಡಗಳು ಜನೆವರಿ ಯಿಂದ ಏಪ್ರಿಲ್ ಅವಧಿಯಲ್ಲಿ   ಸಾರಿಗೆ ಬಸ್ಸುಗಳಲ್ಲಿ 13,956 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಮಾಡಿದ್ದು ಅವರಿಂದ 13.24 ಲಕ್ಷ  ರೂ.ದಂಡ ವಸೂಲಿ ಮಾಡಿದೆ.
ವಾಕರಸಾ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬಾಗಲಕೋಟೆ, ಬೆಳಗಾವಿ,ಗದಗ,ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಗಳ 55 ಡಿಪೊಗಳಿಂದ 4445 ಬಸ್ಸುಗಳು ಸಂಚರಿಸುತ್ತಿದ್ದು ನಿತ್ಯ 16 ರಿಂದ 17ಲಕ್ಷ ಜನರು ಪ್ರಯಾಣ ಮಾಡುತ್ತಾರೆ. ಈ ಹಿನ್ನೆಯಲ್ಲಿ ಸಾರಿಗೆ ಆದಾಯ ಸೋರಿಕೆ ತಡೆಯಲು ಕೇಂದ್ರ ಕಚೇರಿ ಹಾಗೂ ಆಯಾ ವಿಭಾಗಗಳ ಮಟ್ಟದಲ್ಲಿ ತನಿಖಾ ತಂಡಗಳ ಕಾರ್ಯ ಚಟುವಟಿಕೆ ಚುರುಕುಗೊಳಿಸಲಾಗಿದೆ.ಈ ತಂಡಗಳು  ಜನೆವರಿಯಿಂದ ಏಪ್ರಿಲ್ ಅವಧಿಯಲ್ಲಿ ತನಿಖಾ ತಂಡಗಳು 71,021 ತನಿಖೆಗಳನ್ನು ಮಾಡಿದ್ದು ಅಧಿಕೃತ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದ 13,956 ಪ್ರಯಾಣಿರನ್ನು ಪತ್ತೆ ಮಾಡಿದ್ದಾರೆ.
1,41,391ಆದಾಯ ಸೋರಿಕೆ ಹಣ ಪತ್ತೆ ಮಾಡಲಾಗಿದೆ.ಟಿಕೆಟ್ ರಹಿತ ಪ್ರಯಾಣಿಕರಿಂದ ರೂ. 13,24,245 ದಂಡ ವಸೂಲು ಮಾಡಿದೆ‌ಎಂದು ವಾಕರಸಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

Latest Posts

ಲೈಫ್‌ಸ್ಟೈಲ್