More

  ತಾಯಿ ಮಗುವಿನ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅವಶ್ಯಕ

  ಕರಜಗಿ: ಗರ್ಭಿಣಿ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು, ತಾಯಿ ಮಗುವಿನ ಜೀವ ರಕ್ಷಿಸಲು ಪೌಷ್ಠಿಕ ಆಹಾರದ ಅಗತ್ಯವಿದೆ ಎಂದು ಅಂಗನವಾಡಿ ಮೇಲ್ವಿಚಾರಕಿ ಮಲಕಮ್ಮ ನಿಂಬಾಳ ಹೇಳಿದರು.

  ಮಣ್ಣೂರ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಂಕಲ್ಪ ಸಪ್ತಾಹ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಅಪೌಷ್ಠಿಕ ಮಕ್ಕಳ ಕಂಡು ಬರುತ್ತಿದ್ದು, ತಾಯಿ-ಮಗುವಿನ ಸಾವು ನಿಯಂತ್ರಿಸಲು ಸರ್ಕಾರ ಅಪೌಷ್ಠಿಕತೆ ನಿವಾರಣೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರಲ್ಲಿ  ಪೋಷಣಾ ಅಭಿಯಾನ ಒಂದಾಗಿದೆ. ತಾಯಿ ಮಕ್ಕಳ ಆರೋಗ್ಯ ಕಾಪಾಡುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸರ್ಕಾರದಿಂದ ಗರ್ಭಿಣಿಯರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. 

  ಗ್ರಾ ಪಂ ಸದಸ್ಯ ಹಣಮಂತ ನಾವಾಡಿ ಮುಖಂಡ ಅಪ್ಪಾಸಾಬ ಹೊಸೂರಕರ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಗರ್ಭಿಣಿ ತಾಯಂದಿರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

  ಅಂಗನವಾಡಿ ಕಾರ್ಯಕರ್ತೆಯರಾದ ವನಮಲಾ ಯಡಸೆ ಜಗದೇವಿ ಹುಂಡೇಕಾರ ಆಶಾಬಿ ಮೇಸ್ತ್ರಿ ಮುತ್ತವ್ವ ಹತ್ತರಕಿ ಶಾಕೇರಾ ಮುಲ್ಲಾ ಅಶ್ವಿನಿದೇವಿ ಬಸ್ಸಿನಕರ ಗೌರಾಬಾಯಿ ಡೊಂಬರ ಅನಿತಾ ಚಿಕ್ಕಮಣೂರ  ಸೇರಿದಂತೆ ಸಹಾಯಕಿಯರು ಹಾಗೂ ಗರ್ಭಿಣಿ ಮಹಿಳೆಯರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts