ನರ್ಸಿಂಗ್ ವಿವಿ ಸ್ಥಾಪನೆ ಮಾಡುವುದಾದರೆ ಬೆಳಗಾವಿಯಲ್ಲೇ ಮಾಡಿ: ಡಾ.ಪ್ರಭಾಕರ ಕೋರೆ

ಬೆಳಗಾವಿ: ಸರ್ಕಾರದಿಂದ ನರ್ಸಿಂಗ್ ವಿಶ್ವವಿದ್ಯಾಲಯದ ಸ್ಥಾಪನೆ ಮಾಡುವುದಾದರೆ ಬೆಳಗಾವಿಯಲ್ಲೇ ಸ್ಥಾಪನೆ ಮಾಡಿ ಎಂದು ಕೆ.ಎಲ್.ಇ. ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಸರ್ಕಾರಕ್ಕೆ ಮನವಿ ಮಾಡಿದರು.

ಗುರುವಾರ ನಡೆದ ಅಂತಾರಾಷ್ಟ್ರೀಯ ನರ್ಸಿಂಗ್​ ಸಮಾವೇಶದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್​ ಬಳಿ ಪ್ರಭಾಕರ್​ ಕೋರೆ ಅವರು ಮನವಿ ಮಾಡಿಕೊಂಡರು.

ನರ್ಸಿಂಗ್ ವಿವಿ ಸ್ಥಾಪನೆಗೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳಾದ ನಿವೇಶನ, ಮಾನವ ಸಂಪನ್ಮೂಲ ಸೇರಿದಂತೆ ಅಗತ್ಯ ಸೌಕರ್ಯ ನೀಡುವುದಾಗಿ ಡಾ.ಕೋರೆ ಅವರು ಇದೇ ವೇಳೆ ಭರವಸೆ ನೀಡಿದರು. (ದಿಗ್ವಿಜಯ ನ್ಯೂಸ್​)