More

    ನುಗ್ಗಿ ಮಲ್ಲಾಪುರದಲ್ಲಿ ವಿಷ ಸೇವಿಸಿ ತಂದೆ-ಮಗ ಸಾವು, ತಾಯಿ ಸ್ಥಿತಿ ಗಂಭೀರ

    ಶಿವಮೊಗ್ಗ: ತಾಲೂಕಿನ ನುಗ್ಗಿ ಮಲ್ಲಾಪುರದ ಬಳಿ ಬುಧವಾರ ರಾತ್ರಿ ಮಂಡ್ಯ ಮೂಲದ ಒಂದೇ ಕುಟುಂಬದ ಮೂವರು ವಿಷ ಸೇವಿಸಿದ್ದು, ತಂದೆ ಮತ್ತು ಮಗ ಸಾವನ್ನಪ್ಪಿದ್ದಾರೆ. ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
    ಮಂಡ್ಯ ಜಿಲ್ಲೆ ಬೆಳಗೊಳದ ಜ್ಞಾನಮೂರ್ತಿ(55), ಚನ್ನೇಶ್ (35) ಮೃತಪಟ್ಟಿದ್ದು, ರತ್ನಮ್ಮ (50) ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
    ಮೂಲತಃ ನುಗ್ಗಿ ಮಲ್ಲಾಪುರದ ಜ್ಞಾನೇಶ್ವರ್ ಮತ್ತು ರತ್ನಮ್ಮ 20 ವರ್ಷಗಳಿಂದ ಹಿಂದೆ ಹೋಗಿ ಬೆಳಗೊಳದಲ್ಲಿ ನೆಲೆಸಿ ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡಿದ್ದರು. ಅವರ ಜತೆ ಚನ್ನೇಶ್ ಮತ್ತು ಆತನ ಸಹೋದರಿ ಕೂಡ ವಾಸವಾಗಿದ್ದರು.
    ಇಬ್ಬರಿಗೂ ಎರಡನೇ ಸಂಬಂಧ: ಜ್ಞಾನೇಶ್ವರ್ ಮತ್ತ ರತ್ನಮ್ಮ ಇಬ್ಬರಿಗೂ ಇದು ಎರಡನೇ ಸಂಬಂಧವಾಗಿದ್ದು, ಪ್ರೀತಿಸಿ ಮದುವೆಯಾಗಿದ್ದರು. ರತ್ನಮ್ಮ ಅವರ ಮೊದಲ ಪತಿ ಸುರೇಶ್ ಈಗಾಗಲೇ ಮೃತಪಟ್ಟಿದ್ದು, ಜ್ಞಾನೇಶ್ವರ್ ಅವರ ಮೊದಲ ಪತ್ನಿ ಶಂಕ್ರಮ್ಮ ಮತ್ತು ಮೂವರು ಪುತ್ರರು ನುಗ್ಗಿ ಮಲ್ಲಾಪುರದಲ್ಲೇ ವಾಸವಾಗಿದ್ದಾರೆ.
    ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡಿದ್ದ ಇವರು ಒಳ್ಳೆಯ ಆದಾಯ ಗಳಿಸಿದ್ದರು. ಆಸ್ತಿ ಕೂಡ ಖರೀದಿಸಿದ್ದಾರೆ. ನುಗ್ಗಿ ಮಲ್ಲಾಪುರಕ್ಕೆ ಕುಟುಂಬ ಸಮೇತರಾಗಿ ಆಗಾಗ ಬಂದು ಹೋಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವ್ಯಾಪಾರದಲ್ಲಿ ನಷ್ಟ ಸಂಭವಿಸಿ 2 ಕೋಟಿ ರೂ. ನಷ್ಟು ಸಾಲ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
    ಒಟ್ಟಿಗೆ ವಾಸವಿದ್ದ ಕುಟುಂಬ: ಜ್ಞಾನೇಶ್ವರ್ ಮೊದಲ ಪತ್ನಿ ಶಂಕ್ರಮ್ಮ, ಮೂವರು ಮಕ್ಕಳು ಹಾಗೂ ರತ್ನಮ್ಮ ಮತ್ತು ಅವರಿಬ್ಬರ ಮಕ್ಕಳು ಒಟ್ಟಿಗೆ ಬೆಳಗೊಳದಲ್ಲಿ ವಾಸವಾಗಿದ್ದರು. ಜ್ಞಾನೇಶ್ವರ್-ಶಂಕ್ರಮ್ಮ ದಂಪತಿ ಮೂವರು ಮಕ್ಕಳು ಅಲ್ಲಿಯೇ ಶಿಕ್ಷಣ ಪೂರ್ಣಗೊಳಿಸಿ ವಾಪಸ್ ನುಗ್ಗಿ ಮಲ್ಲಾಪುರಕ್ಕೆ ಬಂದಿದ್ದರು.
    ಕಾರಿನಲ್ಲೇ ವಿಷ ಸೇವನೆ: ಜ್ಞಾನೇಶ್ವರ್, ರತ್ನಮ್ಮ ಮತ್ತು ಚನ್ನೇಶ್ ಬೆಳಗೊಳದಿಂದ ಕಾರಿನಲ್ಲಿ ಬಂದಿದ್ದು, ನುಗ್ಗಿ ಮಲ್ಲಾಪುರದ ಸಮೀಪ ನಿಲ್ಲಿಸಿ ವಿಷ ಸೇವಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ಜ್ಞಾನೇಶ್ವರ್ ಸ್ಥಳದಲ್ಲೇ ಮೃತಪಟ್ಟಿದ್ದು, ಚನ್ನೇಶ್ ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ರತ್ಮಮ್ಮ ಅವರು ಚೇತರಿಸಿಕೊಳ್ಳುತ್ತಿದ್ದಾರೆ.  
    ಸುಳಿವು ಕೊಟ್ಟ ಫೋನ್ ಕಾಲ್: ಬುಧವಾರ ಮಧ್ಯಾಹ್ನ ಹೊರಟ ಜ್ಞಾನೇಶ್ವರ್ ಕುಟುಂಬವರು ಸಂಜೆಯಾದರೂ ಯಾರ ಪೋನ್ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಬೆಳಗೊಳದ ಕೆಲ ವ್ಯಾಪಾರಸ್ಥರು ಮೊಬೈಲ್ ನಂಬರ್ ಆಧರಿಸಿ ಜ್ಞಾನೇಶ್ವರ್ ಕುಟುಂಬ ಇದ್ದ ಸ್ಥಳಕ್ಕೆ ಬಂದಾಗ ವಿಷ ಸೇವಿಸಿದ್ದು ಬೆಳಕಿಗೆ ಬಂದಿದೆ. ತಕ್ಷಣವೇ ಗ್ರಾಮಸ್ಥರ ಜತೆ ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts