blank

ಜಾಲತಾಣದಲ್ಲಿ ನಗ್ನ ವಿಡಿಯೋ ಮೋಸದ ಜಾಲ

blank

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತೆಯರ ಸೋಗಿನಲ್ಲಿ ಆತ್ಮೀಯತೆ ಬೆಳಸಿ ವಿಡಿಯೋ ಕಾಲ್ ಮಾಡಿ, ನಗ್ನ ಮಾಡಿಸಿ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುವ ಗ್ಯಾಂಗ್ ಮತ್ತೆ ಸಕ್ರಿಯವಾಗಿದೆ. ಈ ಬಗೆಯ ಕೃತ್ಯದಿಂದ ಸ್‌ಟಾವೇರ್ ಇಂಜಿನಿಯರ್‌ಗೆ ಬೆದರಿಸಿ 6.69 ಲಕ್ಷ ರೂ. ಸುಲಿಗೆ ಮಾಡಿದ್ದರೆ, ಮತ್ತೊಬ್ಬ ಟೆಕ್ಕಿಯಿಂದ 50 ಸಾವಿರ ರೂ. ಪೀಕಿರುವ ಪ್ರಕರಣ ಬೆಳಕಿಗೆ ಬಂದಿವೆ.

ವರ್ತೂರು ಬೆಲೆಗೆರೆ ರಸ್ತೆಯಲ್ಲಿ ನೆಲೆಸಿರುವ 39 ವರ್ಷದ ಸ್‌ಟಾವೇರ್ ಇಂಜಿನಿಯರ್‌ಗೆ ಮಾ. 3ಕ್ಕೆ ೇಸ್‌ಬುಕ್‌ನಲ್ಲಿ ಐಶ್ವರ್ಯಾ ಎಂಬಾಕೆ ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು. ಅದನ್ನು ಸ್ವೀಕರಿಸಿದ ಟೆಕ್ಕಿ, ಆಕೆಯೊಂದಿಗೆ ಚಾಟ್ ಶುರು ಮಾಡಿದ್ದು, ಪರಸ್ಪರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ವಾಟ್ಸ್‌ಆ್ಯಪ್‌ನಲ್ಲಿಯೂ ಚಾಟಿಂಗ್ ಆರಂಭಿಸಿ ಆತ್ಮೀಯತೆ ಬೆಳೆಸಿದ್ದಳು. ಏ. 2ರಂದು ಆಕೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕರೆ ಮಾಡಿ ತನ್ನ ನಗ್ನ ವಿಡಿಯೋ ತೋರಿಸಿದ್ದಳು. ಇದನ್ನು ವೀಕ್ಷಿಸಿದ ಟೆಕ್ಕಿ, ಕೆಲವೇ ನಿಮಿಷದಲ್ಲಿ ಕರೆ ಕಟ್ ಮಾಡಿದ್ದ. ಅಷ್ಟರಲ್ಲಿ ಕೆಲ ಸೆಕೆಂಡ್‌ನ ವಿಡಿಯೋ ಇಟ್ಟುಕೊಂಡು ಅದಕ್ಕೆ ಟೆಕ್ಕಿಯ ಪೋಟೋವನ್ನು ಎಡಿಟ್ ಮಾಡಿ ಅದನ್ನು ವಾಟ್ಸ್‌ಆ್ಯಪ್ ಮಾಡಿದ್ದಳು.

‘ನೀನು ನನ್ನ ಜತೆಗೆ ನಗ್ನ ವಿಡಿಯೋ ಚಾಟ್ ಮಾಡಿದ್ದೀಯ. ಇದನ್ನು ನಿಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ಕಳುಹಿಸುತ್ತೇನೆ. ಜತೆಗೆ ೇಸ್‌ಬುಕ್, ಯುಟ್ಯೂಬ್‌ನಲ್ಲಿ ಹರಿಬಿಡುತ್ತೇನೆ. ಸುಮ್ಮನೆ ಇರಬೇಕಾದರೆ ಮತ್ತು ವಿಡಿಯೋ ಡಿಲೀಟ್ ಮಾಡಬೇಕಾದರೆ ಹಣ ಕಳುಹಿಸು’ ಎಂದು ಧಮ್ಕಿಹಾಕಿದ್ದಳು.

ಹೆದರಿದ ಟೆಕ್ಕಿ, ಆರೋಪಿ ನೀಡಿದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 6.69 ಲಕ್ಷ ರೂ. ವರ್ಗಾವಣೆ ಮಾಡಿದ್ದ. ಆದರೂ ಮತ್ತಷ್ಟು ಹಣಕ್ಕೆ ಬೆದರಿಕೆಯೊಡ್ಡಿದ ಕಾರಣಕ್ಕೆ ನೊಂದ ಟೆಕ್ಕಿ, ವೈಟ್‌ಫೀಲ್ಡ್ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡೇಟಿಂಗ್ ಆ್ಯಪ್‌ನಲ್ಲಿ ಗಾಳ
ಮಾರತ್ತಹಳ್ಳಿಯ ಮುನ್ನೇಕೊಳಲು ಗ್ರಾಮದಲ್ಲಿ ನೆಲೆಸಿರುವ 24 ವರ್ಷದ ಸ್‌ಟಾವೇರ್ ಇಂಜಿನಿಯರ್ ಸಹ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿ 50 ಸಾವಿರ ರೂ. ಕಳೆದುಕೊಂಡಿದ್ದಾರೆ.
ಮಾ. 30ರಂದು ಟೆಕ್ಕಿಗೆ ಡೇಟಿಂಗ್ ಆ್ಯಪ್‌ನಲ್ಲಿ ಶ್ರದ್ಧಾ ಎಂಬಾಕೆ ಪರಿಚಯವಾಗಿದ್ದು, ಮೊಬೈಲ್ ನಂಬರ್ ಶೇರ್ ಮಾಡಿಕೊಂಡು ಚಾಟಿಂಗ್ ಮಾಡುತ್ತಿದ್ದರು. ಸ್ವಲ್ಪ ಹೊತ್ತಿಗೆ ಅಶ್ಲೀಲವಾಗಿ ಚಾಟ್ ಶುರು ಮಾಡಿದ ಆಕೆ, ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕರೆ ಮಾಡಿ ನಗ್ನ ವಿಡಿಯೋ ತೋರಿಸಿ ಟೆಕ್ಕಿಗೂ ನಗ್ನವಾಗುವಂತೆ ಒತ್ತಾಯಿಸಿದ್ದಳು. ಅರೆ ನಗ್ನವಾಗುತ್ತಿದ್ದಂತೆ ಸ್ಕ್ರೀನ್ ರೆಕಾಡಿಂಗ್ ಮಾಡಿಕೊಂಡ ವಂಚಕಿ, ಮತ್ತೆ ಆ ನಗ್ನ ವಿಡಿಯೋವನ್ನು ಕಳುಹಿಸಿ ಬ್ಲ್ಯಾಕ್‌ಮೇಲ್ ಶುರು ಮಾಡಿದ್ದಳು.

ಟೆಲಿಗ್ರಾಮ್‌ನಲ್ಲಿ ಲಿಂಕ್ ಕಳುಹಿಸಿದ್ದು, ಅದರ ಮೇಲೆ ಕ್ಲಿಕ್ ಮಾಡಿದಾಗ ಟೆಕ್ಕಿಯ ಎಲ್ಲ ಸ್ನೇಹಿತರ ಮೊಬೈಲ್ ನಂಬರ್ ಪತ್ತೆಯಾಗಿದ್ದವು. ಅಷ್ಟು ಜನರಿಗೆ ನಗ್ನ ವಿಡಿಯೋ ಕಳುಹಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಒಡ್ಡಿದ್ದಳು. ಮೊದಲು 5- 10 ಸಾವಿರ ರೂ. ಕೊಟ್ಟ ಟೆಕ್ಕಿ ಕಡೆಯಿಂದ 50 ಸಾವಿರ ರೂ. ವರೆಗೂ ಸುಲಿಗೆ ಮಾಡಿದ್ದಳು. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಸ್‌ಟಾವೇರ್ ಇಂಜಿನಿಯರ್, ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾನೆ.

Share This Article

ಸ್ನಾನ ಮಾಡುವಾಗ ಮೂತ್ರ ವಿಸರ್ಜಿಸುವುದು ಅಪಾಯಕಾರಿಯೇ? ಇಲ್ಲಿದೆ ಉಪಯುಕ್ತ ಮಾಹಿತಿ… Urinating

Urinating : ನಮ್ಮ ದೇಹದಿಂದ ತ್ಯಾಜ್ಯವನ್ನು ಹೊರಹಾಕುವಲ್ಲಿ ಮೂತ್ರವು ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ನಮ್ಮ…

ಈ ರೀತಿ ನಿಮ್ಮ ಕಿವಿಗಳು ಸ್ವಚ್ಛಗೊಳಿಸಿ: ಇಲ್ಲಿದೆ ಸುರಕ್ಷಿತವಾದ ಸುಲಭ ಮಾರ್ಗ.. | Clean Ears

Clean Ears : ಸಾಮಾನ್ಯವಾಗಿ ಕಿವಿಯಲ್ಲಿನ ಏನಾದರೂ ಬಿದ್ದಾಗ ಅಥವಾ ತುರಿಕೆ ಬಂದಾಗ ಒಂದಲ್ಲ ಒಂದು…

ಈ ಕಾಯಿಲೆ ಇರುವವರು ಮಜ್ಜಿಗೆ ಕುಡಿಯಲೇ ಬಾರದು.. ಕುಡಿದರೆ ಅಪಾಯ ಖಂಡಿತ! Buttermilk

Buttermilk: ಬೇಸಿಗೆಯ ಬಿಸಿಲಿನಲ್ಲಿ ಎಲ್ಲರೂ ಹೆಚ್ಚಾಗಿ ತಂಪಾದ ಪಾನೀಯಗಳನ್ನು ಕುಡಿಯಲು ಬಯಸುತ್ತಾರೆ. ಹೀಗಾಗಿ ಮನೆಯಲ್ಲಿಯೇ ವಿವಿಧ…