More

    ವಿಶೇಷವಾಗಿ ಪರಿಸರ ದಿನ ಆಚರಿಸಿದ ಎನ್‌ಎಸ್‌ಎಸ್ ಅಲುಮಿನಿ ಅಸೋಸಿಯೇಷನ್

    ಮೈಸೂರು ವಿವಿ ಎನ್‌ಎಸ್‌ಎಸ್ ಅಲುಮಿನಿ ಅಸೋಸಿಯೇಷನ್ ವತಿಯಿಂದ ವಿಶೇಷವಾಗಿ ಪರಿಸರ ದಿನವನ್ನು ಆಚರಿಸಲಾಯಿತು.

    ಮಾನಸ ಗಂಗೋತ್ರಿಯ ಜಯಲಕ್ಷ್ಮಿವಿಲಾಸ ಅರಮನೆಯ ಮುಂಭಾಗದಲ್ಲಿ ಸೋಮವಾರ ವಿಶೇಷ ಉಪನ್ಯಾಸ, ಜಾಗೃತಿ ಜಾಥಾ, ಸಾರ್ವಜನಿಕರಿಗೆ ಗಿಡಗಳ ವಿತರಣೆ ಮಾಡುವ ಮೂಲಕ ಪರಿಸರ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.

    ಕ್ರಿಯಾ ಸಮಾಜದೆಡೆಗೆ ಸಂಸ್ಥೆಯ ಮುಖ್ಯ ಸಂಯೋಜಕ ಮಂದಾರ ಎಸ್.ಉಡುಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪರಿಸರ ದಿನದ ಆಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪರಿಸರ ಸಂರಕ್ಷಣೆಯು ನಮ್ಮ ಜೀವನದ ಒಂದು ಭಾಗವಾಗಿರಬೇಕು. ಈ ಕಾರ್ಯದಲ್ಲಿ ಯುವ ಸಮುದಾಯದ ಪಾತ್ರ ಮಹತ್ವದ್ದಾಗಿರಬೇಕು. ಇಂದು ಪರಿಸರವು ಮಾನವನ ನಿರ್ಲಕ್ಷ್ಯ, ದುರಾಸೆ, ಮೂಢನಂಬಿಕೆ ಮುಂತಾದವುಗಳಿಂದ ಹಾನಿಗೊಂಡು ನಾಶವಾಗುತ್ತಿದೆ ಎಂದರು.

    ವಿಶೇಷವಾಗಿ ಪರಿಸರ ದಿನ ಆಚರಿಸಿದ ಎನ್‌ಎಸ್‌ಎಸ್ ಅಲುಮಿನಿ ಅಸೋಸಿಯೇಷನ್

    ಶ್ರೀರಂಗಪಟ್ಟಣ ಸಮೀಪದ ಕರಿಘಟ್ಟ ಪ್ರದೇಶವು ಜನರ ಮೌಢ್ಯತೆಯಿಂದಾಗಿ ಸಂಪೂರ್ಣ ನಾಶವಾಗಿದೆ. ಇದೇ ರೀತಿ ಭಾರತದ ಬಹುತೇಕ ಸೂಕ್ಷ್ಮ ಪರಿಸರ ವಲಯಗಳು ಈ ಎಲ್ಲಾ ಕಾರಣಗಳಿಂದ ಹಾನಿಯಾಗುತ್ತಿದೆ. ಮಿತಿಮೀರಿದ ಅವೈಜ್ಞಾನಿಕ ಪ್ಲಾಸ್ಟಿಕ್ ಬಳಕೆಯು ಪರಿಸರ ಹಾನಿಗೆ ಬಹುಮುಖ್ಯ ಕಾರಣವಾಗಿದೆ ಎಂದರು.

    ಅಸೋಸಿಯೇಷನ್‌ನ ಸಂಚಾಲಕ ಜಿ.ಎಸ್.ಕಿರಣ್ ಮಾತನಾಡಿ, ಸ್ವಚ್ಛ ಮಾನಸ ಸುರಕ್ಷಿತ ಪರಿಸರ ಎಂಬ ಧ್ಯೇಯದೊಂದಿಗೆ ನಮ್ಮ ಅಸೋಸಿಯೇಷನ್ ವಿಶ್ವ ಪರಿಸರ ದಿನವನ್ನು ಆಚರಿಸುತ್ತಿದೆ. ಪರಿಸರ ಸಂರಕ್ಷಣೆ ಹಾಗೂ ಪರಿಸರದ ಮಹತ್ವದ ಕುರಿತು ಅರಿವು ಮೂಡಿಸುವುದು ಅಸೋಸಿಯೇಷನ್‌ನ ಮುಖ್ಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಅಸೋಸಿಯೇಷನ್‌ನ ಮೂಲಕ ನಿರಂತರವಾಗಿ ಪರಿಸರ ಸಂಬಂಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.

    ಅಸೋಸಿಯೇಷನ್ ಪದಾಧಿಕಾರಿಗಳಾದ ಚೇತನ್ ಹಾದನೂರು, ಕಿರಣ್, ಸಂಜೀವ, ಮನು, ನವೀನ ಇಟ್ಣಾ,ಮಹೇಂದ್ರ, ನವೀನ ಕೋಳೂರು, ವೀರೇಂದ್ರ ಬೇಲೂರು, ಗಿರೀಶ್ ಕೊಪ್ಪ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts