ಅನಿವಾಸಿ ಕನ್ನಡಿಗರು ಸೇರಿ ನಿರ್ಮಿಸಿರುವ, ಅಮೆರಿಕಾ ಕಥಾ ಹಂದರದ ಚಿತ್ರ ಮೇ 17 ರಂದು ಬಿಡುಗಡೆ

ದಾವಣಗೆರೆ: ವಿದೇಶದಲ್ಲಿರುವ ಅನಿವಾಸಿ ಕನ್ನಡಿಗರು ಸೇರಿ ನಿರ್ಮಿಸಿರುವ ಚಲನಚಿತ್ರವೊಂದು ಇದೇ 17ರಂದು ರಾಜ್ಯದ 80 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಅಮೇರಿಕಾದ ಕೊಲೆ ಪ್ರಕರಣವೊಂದರ ನೈಜ ಘಟನೆಯನ್ನು ವಿಭಿನ್ನ ರೂಪದಲ್ಲಿ ಹೆಣೆಯಲಾರುವ ಚಿತ್ರಕ್ಕೆ ‘ರತ್ನಮಂಜರಿ’ ಶಿರ್ಷಿಕೆಯನ್ನು ಇಡಲಾಗಿದೆ ಎಂದು ನಿದೇರ್ಶಕ ಪ್ರಸಿದ್ಧ್ ತಿಳಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಅವರು ಇದೊಂದು ರಹಸ್ಯ ಮತ್ತು ರೋಮಾಂಚನಕಾರಿ ಚಿತ್ರವಾಗಿದ್ದು, ಅಮೆರಿಕಾ ಮತ್ತು ಕೊಡಗು ಜಿಲ್ಲೆಯಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.

ದೇವರು, ದೆವ್ವ ಮತ್ತು ಇಂಟೆಲಿಜೆನ್ಸ್ ಒಟ್ಟಾಗಿ ‘ಡಿಡಿಐ’ ಎಂದು ಚಿತ್ರಕ್ಕೆ ಹೆಸರಿಡಲು ನಿರ್ಧಾರವಾಗಿತ್ತು. ಆದರೆ, ಕನ್ನಡಿಗರಾಗಿ ಇಂಗ್ಲಿಷ್ ಪದ ಬಳಕೆ ಸರಿಯಲ್ಲ ಎಂಬ ಕಾರಣಕ್ಕೆ ರತ್ನಮಂಜರಿ ಶೀರ್ಷಿಕೆ ಅಂತಿಮವಾಯಿತು. ಹಳೆಯ ರತ್ನಮಂಜರಿ ಸಿನಿಮಾಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್, ವಿಜಯ್‌ಪ್ರಕಾಶ್, ಟಿಪ್ಪು ಮೊದಲಾದವರು ಹಾಡುಗಳನ್ನು ಹಾಡಿದ್ದು, ಹರ್ಷವರ್ಧನರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಎಸ್. ಸಂದೀಪ್‌ಕುಮಾರ್, ನಟರಾಜ್ ಹಳೇಬೀಡು, ಡಾ.ನವೀನ್ ಕೃಷ್ಣ ನಿರ್ಮಾಪಕರಾಗಿದ್ದಾರೆ. ಇನ್ನೂ ನಾಯಕ ನಟನಾಗಿ ರಾಜ್‌ಚರಣ್, ನಾಯಕಿಯರ ಪಾತ್ರದಲ್ಲಿ ಅಖಿಲಾ ಪ್ರಕಾಶ್, ಪಲ್ಲವಿರಾಜು ಹಾಗೂ ಶ್ರದ್ಧಾ ಸಾಲಿಯಾನ ನಟಿಸಿದ್ದಾರೆ.

ಚಿತ್ರದ ಬಗ್ಗೆ ಮಾತನಾಡಿದ ನಾಯಕ ರಾಜ್​​ಚರಣ್​​​​ ನಾನು ಮೆಕ್ಯಾನಿಕಲ್ ಇಂಜಿನಿಯರ್ ವ್ಯಾಸಂಗ ಮಾಡಿದ್ದೇನೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರ ಬಳಿ ನಟನೆ ಕಲಿತಿದ್ದೇನೆ. ರತ್ನಮಂಜರಿ ನನ್ನ ಮೊದಲ ಸಿನಿಮಾವಾಗಿದ್ದು, ಚಿತ್ರದಲ್ಲಿ ಸಸ್ಯವಿಜ್ಞಾನಿ ಪಾತ್ರ ನಿಭಾಯಿಸಿದ್ದೇನೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)