ಅಕ್ರಮ ವಲಸಿಗರ ಕಾಟ ಹೆಚ್ಚಾಗಿರೋದ್ರಿಂದ ದೆಹಲಿಗೂ ಬೇಕಂತೆ ಎನ್​ಆರ್​ಸಿ: ಮನೋಜ್​ ತಿವಾರಿ ಒತ್ತಾಯ

ನವದೆಹಲಿ: ಅಕ್ರಮ ವಲಸಿಗರಿಂದಾಗಿ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ತುಂಬಾ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಆದ್ದರಿಂದ ಇಲ್ಲಿ ಕೂಡ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್​ಆರ್​ಸಿ) ಜಾರಿಗೊಳಿಸುವ ಅವಶ್ಯಕತೆ ಇದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್​ ತಿವಾರಿ ಹೇಳಿದ್ದಾರೆ.

ದೆಹಲಿಯಲ್ಲಿ ನೆಲೆಸಿರುವ ಅಕ್ರಮ ವಲಸಿಗರಿಂದಾಗಿ ಇಲ್ಲಿನ ಜನಜೀವನಕ್ಕೆ ಭಾರಿ ಅಪಾಯ ಎದುರಾಗಿದೆ. ಯಾವುದೇ ಕ್ಷಣದಲ್ಲಿ ಏನಾಗುತ್ತದೋ ಎಂಬ ಆತಂಕ ಕಾಡುತ್ತಿದೆ. ಆದ್ದರಿಂದ, ಇಲ್ಲಿ ಕೂಡ ಎನ್​ಆರ್​ಸಿಯನ್ನು ಜಾರಿಗೊಳಿಸಿ, ಅಕ್ರಮ ವಲಸಿಗರನ್ನು ಇಲ್ಲಿಂದ ಹೊರದಬ್ಬುವ ಅವಶ್ಯಕತೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಅಸ್ಸಾಂ ಸರ್ಕಾರ ಶನಿವಾರ ಎನ್​ಆರ್​ಸಿಯ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 3.11 ಕೋಟಿ ಜನರು ಎನ್​ಆರ್​ಸಿಯ ಅಂತಿಮ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದ್ದರೆ, 19 ಲಕ್ಷಕ್ಕೂ ಹೆಚ್ಚು ಜನರನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆ. ಆದರೆ ಇವರನ್ನು ಈಗಲೇ ಅಕ್ರಮ ವಲಸಿಗರು ಎಂದು ಹೇಳಲಾಗದು ಎನ್ನಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *