ನಾಪೋಕ್ಲು: ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವರ ಎಡಮ್ಯಾರು ವಾರ್ಷಿಕ ಉತ್ಸವ ಮೇ 2 ರಿಂದ 4ರವರೆಗೆ ನೆರವೇರಲಿದೆ. 2 ರಂದು ರಾತ್ರಿ 9ಕ್ಕೆ ದೇವರನ್ನು ಕೊಟ್ಟಿ ಹಾಡುವುದು, 3ರಂದು ಎತ್ತು ಪೋರಾಟ, ರಾತ್ರಿ 9ಕ್ಕೆ ಶಾಸ್ತಾವು ದೇವರ ದೀಪಾರಾಧನೆ (ಅಂದಿ ಬೊಳಕು) ನಡೆಯಲಿದೆ. 4 ರ ಬೆಳಗ್ಗೆ 9.30ಕ್ಕೆ ಕಲ್ಯಾಟ ಅಜ್ಜಪ್ಪ ದೇವರ ಕೋಲ ಜರುಗಲಿದೆ .ಅಪರಾಹ್ನ 12.30ಕ್ಕೆ ಭಕ್ತರಿಗೆ ಅನ್ನದಾನ, ನಂತರ ವಿಷ್ಣುಮೂರ್ತಿದೇವರ ಕೋಲ ನಡೆಯಲಿದೆ. ಈ ಸಂದರ್ಭ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ದೇವಾಲಯದ ತಕ್ಕ ಮುಖ್ಯಸ್ಥರು ಕೋರಿದ್ದಾರೆ.

TAGGED:Utsava