ದೇವಾಲಯಗಳಲ್ಲಿ ಸಿಗುವಷ್ಟು ನೆಮ್ಮದಿ ಬೇರೆಲ್ಲೂ ಲಭಿಸದು

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ ಗೋರಘಟ್ಟದಲ್ಲಿ ಆಂಜನೇಯಸ್ವಾಮಿ ದೇಗುಲ ಉದ್ಘಾಟನೆ



ತ್ಯಾಮಗೊಂಡ್ಲು : ಎಷ್ಟೇ ಒತ್ತಡವಿದ್ದರೂ ಒಮ್ಮೆ ದೇವಾಲಯಕ್ಕೆ ಹೋಗಿ ಕೆಲ ನಿಮಿಷಗಳನ್ನು ಅಲ್ಲಿ ಕಳೆದರೆ ಸಿಗುವ ನೆಮ್ಮದಿ, ಶಾಂತಿ ಬೇರೆಲ್ಲೂ ಸಿಗುವುದಿಲ್ಲ. ಸಮಾಜದಲ್ಲಿ ಧರ್ಮ ಉಳಿಯುತ್ತದೆ. ಅಧರ್ಮ ಕೇವಲ ತಾತ್ಕಾಲಿಕವಾಗಿ ದೊರೆಯುವ ಅಲ್ಪಶಾಂತಿಯಾಗಿರುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನೆಲಮಂಗಲ ತಾಲೂಕು ಗೋರಘಟ್ಟದಲ್ಲಿ ಜೀರ್ಣೋದ್ಧಾರಗೊಂಡ ಆಂಜನೇಯಸ್ವಾಮಿ ದೇವಾಲಯವನ್ನು ಗುರುವಾರ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, 9ನೇ ಶತಮಾನದ ದೇವಸ್ಥಾನದ ಜೀರ್ಣೋದ್ಧಾರ ಮಾಡಿರುವ ಗ್ರಾಮಸ್ಥರ ಇಚ್ಛಾಶಕ್ತಿ ಅಭಿನಂದನೀಯ, ಹಳ್ಳಿಗಳ ದೇವಸ್ಥಾನ ಚೆನ್ನಾಗಿದ್ದರೆ ಊರು ಸುಂದರವಾಗಿರುತ್ತದೆ. ಆಂಜನೇಯನ ಸ್ಮರಣೆಯಿಂದ ದೊಡ್ಡಶಕ್ತಿ ದೊರಕುತ್ತದೆ ಎಂದರು.
ವಿಶ್ವದ ದೊಡ್ಡಣ್ಣ ಎನ್ನುವ ಅಮೆರಿಕ ಅಧ್ಯಕ್ಷರಾಗಿದ್ದ ಒಬಮಾ ಆಂಜನೇಯನ ಪದಕ ಧರಿಸುತ್ತಿದ್ದರು, ಅವರ ಶಕ್ತಿಗೆ ಕಾರಣ ಕೇಳಿದರೆ ಅವರು ಆಂಜನೇಯನ ಡಾಲರ್ ತೋರಿಸುತ್ತಿದ್ದರು. ಪಾಶ್ಚಾತ್ಯರೇ ನಮ್ಮ ದೇವತೆಗಳ ಶಕ್ತಿ ಅರಿತಿದ್ದಾರೆ, ಹಳೆಯ ಕಾಲದಲ್ಲಿ ಪೂಜೆ ಮಾಡುತ್ತಿದದ್ದು ಭಕ್ತಿಗೋಸ್ಕರ. ಈಗ ಮಾಡುವುದು ಅಧಿಕಾರ, ಸಂಪತ್ತಿಗಾಗಿ. ಆಂಜನೇಯನ ಸ್ಮರಣೆಯಿಂದ ಬುದ್ಧಿ, ಯಶಸ್ಸು, ಧೈರ್ಯ,ಆರೋಗ್ಯ, ಕಷ್ಟಗಳ ನಿವಾರಣೆ ಆಗುತ್ತದೆ. ಮಾತೃ ಸೇವೆ ಮಾಡುವವರಿಗೆ ಆಂಜನೇಯನ ಮತ್ತು ದೇವತೆಗಳ ಆಶೀರ್ವಾದ ಸಿಗುತ್ತದೆ ಎಂದು ಹೇಳಿದರು. ಭಕ್ತರ ಅನುಕೂಲಕ್ಕಾಗಿ ಗ್ರಾಪಂ ಮಾಜಿ ಸದಸ್ಯ ದಿವಂಗತ ಗೋವಿಂದಪ್ಪ ಸ್ಮರಣಾರ್ಥ ಸ್ನಾನಗೃಹ ಉದ್ಘಾಟಿಸಲಾಯಿತು.
ಗ್ರಾಪಂ ಸದಸ್ಯೆ ಕಮಲಮ್ಮ ಹನುಮಂತರಾಯಪ್ಪ, ನೆಲಮಂಗಲ ತಾಲ್ಲೂಕು ರಾಜ್ಯ ಸಕಾರಿ ನೌಕರರ ಸಂಘದ ನಿರ್ದೇಶಕ ಜಿ.ಕೃಷ್ಣಮೂರ್ತಿ, ಜಿ.ನಂದಗೋಪಾಲ್, ಜಿ.ವೆಂಕಟರಾಮಯ್ಯ, ಜಿ.ಎಸ್.ಕೇಶವಮೂರ್ತಿ, ವೆಂಕಟಗಿರಿಯಪ್ಪ, ವೆಂಕಟಪ್ಪ, ಮಂಗಮ್ಮ, ರಾಜಣ್ಣ, ವಕೀಲ ನವೀನ್, ಮೈಲಾರಣ್ಣ, ಪರಮೇಶ್, ಲೆಂಕಪ್ಪ, ಎಂ.ಎಲ್.ನಾಗೇಶ್, ಬುಲ್ಟಯ್ಯ, ಗ್ರಾಪಂ ಮಾಜಿ ಸದಸ್ಯ ರಾಯಣ್ಣ ಇದ್ದರು.

ಕುಂಭಾಭಿಷೇಕ, ಬಲಿಹರಣ
ಮಂಗಳವಾರ ಸಂಜೆ 5ಗಂಟೆಗೆ ಗಂಗಾ ಮತ್ತು ಗೋಪೂಜೆಯೊಂದಿಗೆ ಜೀರ್ಣೋದ್ಧಾರ ಕಾರ್ಯಕ್ರಮ ಶುರುವಾದವು.
ಬುಧವಾರ ಯಾಗಶಾಲಾ ಪ್ರವೇಶ, ಸ್ವಸ್ತಿವಾಚನ, ಪುಣ್ಯಃ, ಪಂಚಗವ್ಯ, ದೇವನಾಂದಿ, ಋತ್ವಿಕ್ ವರ್ಣ, ಅಂಕುರಾರ್ಪಣ, ಧ್ವಜಾರೋಹಣ, ಮೂರ್ತಿಗಳಿಗೆ ಕ್ಷೀರ, ಪುಷ್ಪ, ಧಾನ್ಯ ಹಾಗೂ ಶಯ್ಯಧಿವಾಸ, ಶಿಲಾಬಿಂಬಗಳಿಗೆ ಮಹಾ ಸ್ನಪನ, ಸಂಜೆ ಅಗ್ನಿ ಪ್ರತಿಷ್ಠಾಪನೆ, ಮಹಾಗಣಪತಿ ಹೋಮ, ಬಲಿಹರಣ, ಲಘು ಪೂರ್ಣಾಹುತಿ, ರಾತ್ರಿ ಶಿಲಾಬಿಂಬ ಪ್ರತಿಷ್ಠಾಪನೆ ನಡೆಯಿತು. ಗುರುವಾರ ಬೆಳಗ್ಗೆ 5.30 ರಿಂದ 6.30ರೊಳಗೆ ಪ್ರಾಣ ಪ್ರತಿಷ್ಠಾಪನೆ, ನೇತ್ರೋನ್ಮಿಲನ, ಕಳಾಕರ್ಷಣೆ ಹೋಮ, ಕದಳಿ ಛೇದನ, ದೇನುರ್ದರ್ಶನ, ಧ್ವಜಸ್ಥಂಭ ಪ್ರಾಣ ಪ್ರತಿಷ್ಠಾಪನೆ, ಫಲ ಪಂಚಾಮೃತ ಅಭಿಷೇಕ, ಕುಂಭಾಭಿಷೇಕ, ಬಲಿಹರಣ, ಪೂರ್ಣಾಹುತಿ, ಮಹಾ ಮಂಗಳಾರತಿ ನೆರವೇರಿತು.

ದೇವಾಲಯಗಳು ಮನುಷ್ಯನ ನೆಮ್ಮದಿಯ ಕೇಂದ್ರಗಳಾಗಿವೆ, ಅಧರ್ಮದ ಹಿಂದೆ ಹೋದರೆ ಅಶಾಂತಿ ಜತೆಗೆ ಜೀವನವೇ ಡೋಲಾಯಮಾನವಾಗುತ್ತದೆ. ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಧರ್ಮದ ಕಡೆ ನಡೆದಾಗ ಮನುಕುಲದ ಜೀವನ ಸಾರ್ಥಕವಾಗುತ್ತದೆ.
-ಜಿ.ವಿ.ದಯಾನಂದ್ ಗೋರಘಟ್ಟ ಗ್ರಾಪಂ ಸದಸ್ಯ

Share This Article

ಒಂದು ಬಾರಿ ಇದನ್ನು ಕುಡಿದರೆ ಸಾಕು ನಿಮ್ಮ ಹೊಟ್ಟೆ ಫುಲ್​ ಕ್ಲೀನ್ ಆಗಿಬಿಡುತ್ತೆ! Stomach problems

ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಆ ನೋವು ( Stomach problems ) ಅಥವಾ ಕಿರಿಕಿರಿ…

Health Tips : ಸಕ್ಕರೆ ಕಾಯಿಲೆಯಿಂದ ಬಳಲುತ್ತೀದ್ದೀರಾ? ಬೆಳ್ಳಂಬೆಳಗ್ಗೆ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ ಸಾಕು

ಬೆಂಗಳೂರು: ಕರಿಬೇವು ಕೇವಲ ಬೆಳಗಿನ ತಿಂಡಿಗೆ ರುಚಿ ಕೊಡಲು ಒಗ್ಗರಣೆಗೆ ಮಾತ್ರ ಮೀಸಲಾಗಿಲ್ಲ. ಕರಿಬೇವಿನ ಎಲೆಗಳು…

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…