Friday, 16th November 2018  

Vijayavani

Breaking News

ಸಚಿನ್ ತೆಂಡುಲ್ಕರ್ ವಿರುದ್ಧ ನಟಿ ಶ್ರೀರೆಡ್ಡಿ ಆರೋಪ!

Thursday, 13.09.2018, 2:03 AM       No Comments

ಮುಂಬೈ: ಟಾಲಿವುಡ್ ನಟ ನಾನಿ ಹಾಗೂ ಪವನ್ ಕಲ್ಯಾಣ್​ರ ವಿರುದ್ಧ ಆಧಾರರಹಿತ ಆರೋಪ ಮಾಡಿ ಸುದ್ದಿಯಾಗಿದ್ದ ವಿವಾದಾತ್ಮಕ ನಟಿ ಶ್ರೀರೆಡ್ಡಿ ಈಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ವಿರುದ್ಧ ಇಂಥದ್ದೇ ಆರೋಪ ಮಾಡಿದ್ದಾರೆ. ಕ್ರಿಕೆಟ್ ಜೆಂಟಲ್​ವ್ಯಾನ್ ಸಚಿನ್​ಗೆ ನಟಿಯೊಬ್ಬರ ಜತೆ ಸಂಬಂಧವಿತ್ತು ಎನ್ನುವ ಅರ್ಥದಲ್ಲಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಶ್ರೀರೆಡ್ಡಿ ಕ್ರಿಕೆಟ್ ಅಭಿಮಾನಿಗಳಿಂದ ದೊಡ್ಡ ಮಟ್ಟದ ಟೀಕೆಗೆ ಗುರಿಯಾಗಿದ್ದಾರೆ.

ತಮ್ಮ ಪೋಸ್ಟ್​ನಲ್ಲಿ ನೇರವಾಗಿ ಯಾರ ಮೇಲೂ ಆರೋಪ ಮಾಡದ ಶ್ರೀರೆಡ್ಡಿ, ‘ಸಚಿನ್ ತೆಂಡುಲ್ಕರನ್ ಎನ್ನುವ ರೊಮಾಂಟಿಕ್ ವ್ಯಕ್ತಿ, ಹೈದರಾಬಾದ್​ಗೆ ಬಂದಾಗಲೆಲ್ಲ, ‘ಚಾರ್ವಿು’ಂಗ್ ಗರ್ಲ್ ಜತೆ ರೊಮಾನ್ಸ್ ಮಾಡುತ್ತಿದ್ದರು. ಗಣ್ಯ ವ್ಯಕ್ತಿ ಚಾಮುಂಡೇಶ್ವರ ಸ್ವಾಮಿ ಇದಕ್ಕೆ ಮಧ್ಯವರ್ತಿಯಾಗಿದ್ದ. ಶ್ರೇಷ್ಠ ವ್ಯಕ್ತಿಗಳು ಅತ್ಯುತ್ತಮವಾಗಿ ಆಡುತ್ತಾರೆ, ಅದರರ್ಥ ಅತ್ಯುತ್ತಮವಾಗಿ ರೊಮಾನ್ಸ್ ಕೂಡ ಮಾಡುತ್ತಾರೆ???’ ಎಂದು ತಮ್ಮಫೇಸ್​ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್ ಆಗಲಿ, ನಟಿ ಚಾರ್ವಿು ಆಗಲಿ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ನಟ ಪವನ್ ಕಲ್ಯಾಣ್ ವಿರುದ್ಧ ಶ್ರೀರೆಡ್ಡಿ ಅವಾಚ್ಯ ಶಬ್ದಗಳನ್ನು ಬಳಸಿದ್ದರು. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top