25.9 C
Bengaluru
Wednesday, January 22, 2020

5 ತಿಂಗಳಿಂದ ಸಿಗದ ಗೌರವಧನ

Latest News

ಆರೋಪಿ ಆದಿತ್ಯರಾವ್​ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿದ್ದ ಆರೋಪಿ ಆದಿತ್ಯರಾವ್​ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ...

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ಸಂದೀಪ್ ಸಾಲ್ಯಾನ್ ಬಂಟ್ವಾಳ
ಶೈಕ್ಷಣಿಕ ವರ್ಷ ಮುಗಿಯುತ್ತ ಬಂತು. ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಇನ್ನೂ ಗೌರವಧನ ಬಿಡುಗಡೆಯಾಗಿಲ್ಲ. ಹೀಗೆ 5 ತಿಂಗಳ ಸಂಭಾವನೆಗಾಗಿ ಕಾಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಖ್ಯೆ ಬರೋಬ್ಬರಿ 175!
ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕೃತ ವೆಬ್‌ಸೈಟ್‌ನಲ್ಲಿ ವೇತನ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಟಗೊಂಡು 16 ದಿನ ಕಳೆದಿವೆ! ಆದರೆ, ಇನ್ನೂ ಉಪನ್ಯಾಸಕರ ಕೈ ಸೇರಿಲ್ಲ. ಇದಕ್ಕೆ ಇಲಾಖಾಧಿಕಾರಿಗಳ ನಿರ್ಲಕ್ಷೃ ಕಾರಣ ಎಂಬ ಆರೋಪ ಕೇಳಿಬಂದಿದೆ.

ಉಪನ್ಯಾಸ ವೃತ್ತಿಯೊಂದಿಗೆ ಇಲಾಖೆ ವಹಿಸಿಕೊಡುವ ಹೆಚ್ಚುವರಿ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೂ, ಶ್ರಮಕ್ಕೆ ತಕ್ಕ ಗೌರವಧನ ಪಡೆಯಲು ಅತಿಥಿ ಉಪನ್ಯಾಸಕರು ಪ್ರತಿ ಬಾರಿ ಇಲಾಖೆ ಮುಂದೆ ಅಂಗಲಾಚಬೇಕು. ಇದು ಹೊಸ ಬೆಳವಣಿಯಂತೂ ಅಲ್ಲ, ವರ್ಷಂಪ್ರತಿ ಇದೇ ಪರಿಸ್ಥಿತಿ. ಅಕ್ಟೋಬರ್‌ನಿಂದ ಫೆಬ್ರವರಿ ತಿಂಗಳವೆರೆಗೆ ವೇತನ ಪಾವತಿಯಾಗದೆ, ಅತಿಥಿ ಉಪನ್ಯಾಸಕರು ಸಮಸ್ಯೆ ಸುಳಿಗೆ ಸಿಲುಕಿದ್ದಾರೆ. ಗೌರವಧನ ಪಾವತಿ ಮಾಡಬೇಕಿರುವ ಮೇಲಧಿಕಾರಿಗಳು ಪಿಯುಸಿ ಪರೀಕ್ಷೆ, ಚುನಾವಣೆ, ಕೆಲಸದ ಒತ್ತಡ ಎಂದೆಲ್ಲಾ ಓಡಾಡಿಕೊಂಡಿದ್ದಾರೆ. ಅತಿಥಿ ಉಪನ್ಯಾಕರ ಗೋಳು ಕೇಳುವವರಿಲ್ಲ.

ಇಲಾಖೆಯಿಂದ ವೇತನ ಬಿಡುಗಡೆ!: ರಾಜ್ಯಾದ್ಯಂತ ಹಲವು ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 2,782 ಅತಿಥಿ ಉಪನ್ಯಾಸಕರಿಗೆ ಪ್ರಸ್ತುತ 10,68,66,000 ರೂ. ಗೌರವಧನ ಬಿಡುಗಡೆ ಮಾಡಲಾಗಿದೆ. ಈ ಪೈಕಿ, ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಅಧಿಕಾರಿಗಳು ನೇಮಕ ಮಾಡಿಕೊಂಡಿರುವ 175 ಅತಿಥಿ ಉಪನ್ಯಾಸಕರಿಗೆ ನೀಡಲು 59,53,500 ರೂ. ಬಿಡುಗಡೆಯಾಗಿದೆ ಎಂಬ ಮಾಹಿತಿ ಇಲಾಖೆ ವೆಬ್‌ಸೈಟ್‌ನಲ್ಲಿದೆ. ಫೆ.23ರಂದೇ ಜಿಲ್ಲಾವಾರು ವೇತನ ಹಂಚಿಕೆಯ ಪಟ್ಟಿ ಪ್ರಕಟವಾಗಿದ್ದರೂ, ಕೈಸೇರಿಲ್ಲ.

ಕೆಲಸದ ಹೊರೆ: ಸ್ನಾತಕೋತ್ತರ ಪದವಿ ಮುಗಿಸಿದವರು, ನೌಕರಿಯ ಅನಿವಾರ್ಯತೆಯಿಂದ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇರುತ್ತಿದ್ದಾರೆ. ಅತಿಥಿ ಉಪನ್ಯಾಸಕರಾದರೂ, ಕಾಯಂ ಉಪನ್ಯಾಸಕರಷ್ಟೇ ಕೆಲಸದ ಹೊರೆ ಇರುತ್ತದೆ. ಎಸ್‌ಎಸ್‌ಎಲ್‌ಸಿ ಮುಗಿಸಿ ಬರುವ ವಿದ್ಯಾರ್ಥಿಗಳನ್ನು ಕಾಲೇಜು ಶಿಕ್ಷಣ ವ್ಯವಸ್ಥೆಗೆ ಸಿದ್ಧಗೊಳಿಸುವ ಜವಾಬ್ದಾರಿಯೂ ಇದೆ. ಗೌರವಧನ ವಿಳಂಬದಿಂದ ಬಹುತೇಕ ಅತಿಥಿ ಉಪನ್ಯಾಸಕರಿಗೆ ತಮ್ಮ ವೃತ್ತಿ ಮೇಲೆ ನಿರಾಸೆ ಮೂಡಿದೆ. ಇಂದಲ್ಲ ನಾಳೆ ವೇತನ ಕೈ ಸೇರುತ್ತದೆ ಎಂಬ ಆಶಾಭಾವದಿಂದ ವೃತ್ತಿ ಮುಂದುವರಿಸುತ್ತಿದ್ದಾರೆ. ಪದವಿ ಕಾಲೇಜು ಅತಿಥಿ ಉಪನ್ಯಾಸಕರಂತೆ ಇವರಿಗೆ ಸಂಘಟನೆ ಇಲ್ಲ. ಹಾಗಾಗಿ ಕೂಗಿಗೆ ಬಲ ಕಡಿಮೆ.

ಉಡುಪಿಯಲ್ಲಿ 102 ಮಂದಿ!: ಉಡುಪಿ ಜಿಲ್ಲೆಯಲ್ಲಿ ಪ.ಪೂ.ಶಿಕ್ಷಣ ಇಲಾಖೆಯಡಿ ಕೆಲಸ ಮಾಡುವ 102 ಅತಿಥಿ ಉಪನ್ಯಾಸಕರಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 3 ತಿಂಗಳ ಗೌರವ ಧನವಷ್ಟೇ ಪಾವತಿ ಆಗಿದೆ. 5 ತಿಂಗಳ ಗೌರವಧನ ಶೀಘ್ರ ಬಿಡುಗಡೆಯಾಗಲಿದೆ ಎಂದು ಇಲಾಖೆ ಉಪನಿರ್ದೇಶಕ ಸುಬ್ರಹ್ಮಣ್ಯ ಜೋಷಿ ತಿಳಿಸಿದ್ದಾರೆ.

ಅತಿಥಿ ಉಪನ್ಯಾಸಕರಿಗೆ ವೇತನ ಬಿಡುಗಡೆಯಾಗಿಲ್ಲ. ಇದು ರಾಜ್ಯಮಟ್ಟದ ಸಮಸ್ಯೆ. ಏನು ಕಾರಣ ಎಂಬ ಬಗ್ಗೆ ಮಾಹಿತಿ ಇಲ್ಲ.
ಎಲ್ವಿರಾ ಫಿಲೋಮಿನಾ, ಉಪನಿರ್ದೇಶಕಿ, ಪದವಿ ಪೂರ್ವ ಶಿಕ್ಷಣ ಇಲಾಖೆ

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...