ಜಿಪಂ ಉಪಾಧ್ಯಕ್ಷರಿಗೆ ನೋಟಿಸ್ ನೀಡಿದ ಡಿಸಿ ರೋಹಿಣಿ

ಹಾಸನ: ಸಕಲೇಶಪುರ ತಾಲೂಕು ಅರೆಕೆರೆಯಲ್ಲಿ ಎತ್ತಿನ ಹೊಳೆ ಯೋಜನೆಗಾಗಿ ಅಕ್ರಮವಾಗಿ ಮರಳು ಸಂಗ್ರಹಿಸಿದ ಪ್ರಕರಣ.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುಪ್ರದೀಪ್ತ ಯಜಮಾನ್ ಗೆ ನೋಟಿಸ್ ಜಾರಿ ಮಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ.
ಜ.೧೦ ರಂದು ೨ ಕೋಟಿ ರೂ. ಮೌಲ್ಯದ ಮರಳು ವಶಕ್ಕೆ ಪಡೆದಿದ್ದ ಜಿಲ್ಲಾಧಿಕಾರಿ ನೇತೃತ್ವದ ಮರಳು ಟಾಸ್ಕ್ ಫೋರ್ಸ್‌ ತಂಡ.

ಈ ಸಂಬಂಧ ಓಷಿಯನ್ ಕನ್‌ಸ್ಟ್ರಕ್ಷನ್ ಕಂಪೆನಿ ವಿರುದ್ಧ ದಾಖಲಾಗಿದ್ದ ಪ್ರಕರಣ.
ಮರಳು ಸಂಗ್ರಹಕ್ಕೆ ಶಿಫಾರಸು ಮಾಡಿದ್ದರು ಎಂದು ಗುತ್ತಿಗೆದಾರ ಹೇಳಿಕೆ ನೀಡಿದ ಹಿನ್ನೆಲೆ.
ಸುಪ್ರದೀಪ್ತ ಯಜಮಾನ್ ಗೆ ನೋಟಿಸ್ ನೀಡಿದ ಡಿಸಿ.

ಪಂಚಾಯತ್ ರಾಜ್ ಕಾಯ್ದೆ ಕಲಂ ೧೭೫ರನ್ವಯ ನೀವು ಅಪಕೀರ್ತಿಕರ ನಡತೆ ಹೊಂದಿದ್ದು, ನಿಮ್ಮ ಹುದ್ದೆಗೆ ತರವಲ್ಲದ ರೀತಿ ನಡೆದುಕೊಂಡಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ನಿಮ್ಮ ವಿರುದ್ಧ ಏಕೆ ಕ್ರಮವಹಿಸಬಾರದು ಎಂದು ತಕ್ಷಣ ಸಮಜಾಯಿಷಿ ಕೇಳಿ ನೋಟಿಸ್ ಜಾರಿ ಮಾಡಿದ ಜಿಲ್ಲಾಧಿಕಾರಿ.

ಈ ಮೂಲಕ ಜೆಡಿಎಸ್ ಮುಖಂಡರಿಗೆ ಬಿಸಿ‌ ಮುಟ್ಟಿಸಿದ ಜಿಲ್ಲಾಧಿಕಾರಿ