More

  ವಾಹನ ವಿಮೆ ಮೊತ್ತ ನೀಡುವಂತೆ ಸೂಚನೆ

  ಶಿವಮೊಗ್ಗ: ಖಾಸಗಿ ವಿಮಾ ಕಂಪನಿಯೊಂದರ ಸೇವಾ ನ್ಯೂನತೆ ವಿರುದ್ಧ ಡಿ.ಮುರಳಿ ಎಂಬುವವರು ದಾಖಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅರ್ಜಿದಾರರಿಗೆ ವಾಹನ ವಿಮಾ ಪಾಲಿಸಿಯ ಪರಿಹಾರ ಪಾವತಿಸುವಂತೆ ವಿಮಾ ಕಂಪನಿಗೆ ಆದೇಶಿಸಿದೆ.

  ಅರ್ಜಿದಾರರು 2017ರಲ್ಲಿ ಕಾರು ಖರೀದಿಸಿದ್ದು, 2021ರಲ್ಲಿ ಕಾರಿನ ಬಾನೆಟ್‌ನಲ್ಲಿ ಅನೀರಿಕ್ಷಿತವಾಗಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣ ಸುಟ್ಟುಹೋಗಿತ್ತು. ಈ ಹಿನ್ನೆಲೆಯಲ್ಲಿ ವಿಮಾ ಪರಿಹಾರ ನೀಡುವಂತೆ ಕಂಪನಿಯನ್ನು ಕೋರಿದ್ದರು. ಆಕ್ಷೇಪ ವ್ಯಕ್ತಪಡಿಸಿದ್ದ ಕಂಪನಿ ಸರಿಯಾದ ಸಮಯಕ್ಕೆ ಕಾರಿನ ಸರ್ವೀಸ್ ಮಾಡಿಸಿಲ್ಲ. ಸ್ಥಳೀಯ ಗ್ಯಾರೇಜ್‌ಗಳಲ್ಲಿ ಆಯಿಲ್ ಬದಲಾಯಿಸಲಾಗಿದೆ. ಹೀಗಾಗಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.
  ಈ ಹಿನ್ನೆಲೆಯಲ್ಲಿ ಮುರಳಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಬಳಿಕ ಅರ್ಜಿದಾರರಿಗೆ 13.50 ಲಕ್ಷ ರೂ. ವಿಮಾ ಮೊತ್ತವನ್ನು ಶೇ. 9ರ ವಾರ್ಷಿಕ ಬಡ್ಡಿಯೊಂದಿಗೆ ಪಾವತಿಸಬೇಕು. ಸೇವಾ ನ್ಯೂನತೆಯಿಂದ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗೆ ಸಂಬಂಧಿಸಿ ಒಂದು ಲಕ್ಷ ರೂ. ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 10 ಸಾವಿರ ರೂ. ನೀಡುವಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

  See also  ಟ್ರಕ್​ ಅಪಘಾತದ ಬಳಿಕ ಸ್ಥಳದಲ್ಲಿ ಜಮಾಯಿಸಿದ ಜನರತ್ತ ನುಗ್ಗಿದ ಜಾಗ್ವಾರ್​ ಕಾರು: 9 ಮಂದಿ ದುರ್ಮರಣ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts