25 C
Bangalore
Thursday, November 14, 2019

ಪೈಪ್ ತೆರವುಗೊಳಿಸಲು ಕನವಳ್ಳಿ ರೈತರಿಗೆ ನೋಟಿಸ್

Latest News

ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರ ಮಕ್ಕಳಿಗೆ ವಿಷ ನೀಡಿ ತಾನು ವಿಷ ಸೇವಿಸಿದ ತಾಯಿ: ಓರ್ವ ಮಗು ಸಾವು, ಇಬ್ಬರ ಸ್ಥಿತಿ ಗಂಭೀರ

ಮಂಡ್ಯ: ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿ ತನ್ನ ಇಬ್ಬರು ಮಕ್ಕಳಿಗೆ ವಿಷ ನೀಡಿ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಳವಾಯಿಕೋಡಿಹಳ್ಳಿಯಲ್ಲಿ...

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಟೊಮ್ಯಾಟೊಗೆ ಬೆಲೆ ಎಷ್ಟಿರಬಹುದು? ಎಂದು ಊಹಿಸಬಲ್ಲಿರಾ?

ಇಸ್ಲಮಾಬಾದ್​: ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಪಾಕಿಸ್ತಾನದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ...

ಬೇಷರತ್ ಕ್ಷಮೆಯಾಚಿಸಿದ್ದ ರಾಹುಲ್ ಗಾಂಧಿ: ನ್ಯಾಯಾಂಗ ನಿಂದನೆ ಮೊಕದ್ದಮೆ ಕೈ ಬಿಟ್ಟ ಸುಪ್ರೀಂ ಕೋರ್ಟ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸಿ ಚೌಕೀದಾರ್​ ಚೋರ್ ಹೈ ಎಂದಿದ್ದ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಯವರ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆ...

ಕಂಠೀರವ ಸ್ಟುಡಿಯೋದಲ್ಲಿ ರೆಬಲ್ ಸ್ಟಾರ್ ದಿ. ಅಂಬರೀಷ್ ಅವರ ಮೊದಲ ಪುಣ್ಯ ತಿಥಿ: ಅರಮನೆ ಮೈದಾನದಲ್ಲಿ ಬೃಹತ್​ ಕಾರ್ಯಕ್ರಮ

ಬೆಂಗಳೂರು: ಖ್ಯಾತ ನಟ ಹಾಗೂ ಮಾಜಿ ಸಚಿವ ದಿ. ಅಂಬರೀಷ್ ಅವರ ಮೊದಲ ವರ್ಷದ ಪುಣ್ಯ ತಿಥಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಕಂಠೀರವ...

ದೇಶದ ಕಾರು ಮಾರುಕಟ್ಟೆಯ ಟಾಪ್ 10 ಕಾರುಗಳ ಪಟ್ಟಿಗೆ ಕೊರಿಯನ್​ ಕಂಪನಿ ಕಾರು!: ಉಳಿದಂತೆ ಮಾರುತಿಯದ್ದೇ ಕಾರುಬಾರು..

ಮುಂಬೈ: ದೇಶದ ಕಾರು ಮಾರುಕಟ್ಟೆಯ ಕಳೆದ ತಿಂಗಳ ಕಾರು ಮಾರಾಟ ದತ್ತಾಂಶ ಪ್ರಕಾರ, ಟಾಪ್​ 10 ಕಾರುಗಳ ಪಟ್ಟಿಯಲ್ಲಿ ಮಾರುತಿ ಕಾರುಗಳದ್ದೇ ಕಾರುಬಾರು....

ಹಾವೇರಿ: ತಾಲೂಕಿನ ಕನವಳ್ಳಿ ಗ್ರಾಮದ ಕೆರೆಗೆ ನೀರು ತುಂಬಿಸಲು ಇಲ್ಲಿಯ ಗ್ರಾಮೀಣ ಕುಡಿಯುವ ನೀರು ವಿಭಾಗದಲ್ಲಿದ್ದ ಪೈಪ್​ಗಳನ್ನು ಒಯ್ದಿರುವ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ರಾಜಕೀಯ ಜಿದ್ದಾಜಿದ್ದಿಗೆ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಇದೀಗ ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ನಿಮ್ಮ ಜಮೀನಿನಲ್ಲಿ ಅನಧಿಕೃತವಾಗಿ ಕೊಳವೆ ಮಾರ್ಗ ನಿರ್ವಿುಸಿದ್ದೀರಿ ಎಂದು ನೋಟಿಸ್ ನೀಡಿದ್ದು, ಕೂಡಲೆ ಪೈಪ್​ಗಳನ್ನು ತೆರವುಗೊಳಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಶಾಸಕ ನೆಹರು ಓಲೇಕಾರ ಮತ್ತು ಜಿಪಂ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ ಅವರು ಈ ವಿಷಯವನ್ನು ಪ್ರತಿಷ್ಠೆಗೆ ತೆಗೆದುಕೊಂಡಿದ್ದು, ಪ್ರಕರಣ ದಿನಕ್ಕೊಂದು ತಿರುವು ಪಡೆದು ಗ್ರಾಮಸ್ಥರು ಸಮಸ್ಯೆಯ ಸುಳಿಗೆ ಸಿಲುಕುವಂತಾಗಿದೆ.

ನೋಟಿಸ್​ನಲ್ಲೇನಿದೆ: ಯುಟಿಪಿ ಮುಖ್ಯಕಾಲುವೆ ಮಾರ್ಗದಲ್ಲಿ ಕಾಲುವೆ ನೀರೆತ್ತುವ ಉದ್ದೇಶದಿಂದಲೇ ತಮ್ಮ ಜಮೀನಿನಲ್ಲಿ ಅನಧಿಕೃತವಾಗಿ ಕೊಳವೆ ಮಾರ್ಗ ಅಳವಡಿಸಿರುವುದು ಕಂಡುಬರುತ್ತದೆ. ಇದು ಕಾನೂನು ಉಲ್ಲಂಘನೆಯಾಗಿದ್ದು, ನೋಟಿಸ್ ಸಿಕ್ಕ ತಕ್ಷಣ ಪೈಪ್​ಲೈನ್ ತೆರವುಗೊಳಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುವುದು ಎಂದು ಮಾಚೇನಹಳ್ಳಿಯ ಹನುಮನಗೌಡ್ರ ಬಸವನಗೌಡ್ರು ಎಂಬುವರಿಗೆ ತುಂಗಾ ಮೇಲ್ದಂಡೆ ಯೋಜನೆ ಹಾವೇರಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೋಟಿಸ್ ನೀಡಿದ್ದಾರೆ.

ಕನವಳ್ಳಿ ಗ್ರಾಮದ ಜನರು ಯಾವ ನೋಟಿಸ್, ಪೊಲೀಸ್ ಕಂಪ್ಲೇಟ್ ಕುರಿತು ಹೆದರುವ ಅವಶ್ಯಕತೆಯಿಲ್ಲ. ನಿಮ್ಮೊಂದಿಗೆ ನಾನಿದ್ದೇನೆ. ಯುಟಿಪಿಯವರು ನೋಟಿಸ್ ಕೊಟ್ಟರೆ, ಪೊಲೀಸರು ಶಿಬಾರ ಕ್ರಾಸ್​ನಲ್ಲಿ ಪ್ರತಿಭಟನೆ ನಡೆಸಿದ 14 ರೈತರ ಮೇಲೆ ದೂರು ದಾಖಲಿಸಿದ್ದಾರೆ. ಇದಕ್ಕೆಲ್ಲ ಕಾರಣ ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ. ಅವರದೇ ಸರ್ಕಾರವಿದೆ ಎಂದು ಅಧಿಕಾರಿಗಳು ಅವರ ಮಾತು ಕೇಳಿ ಈ ರೀತಿ ಮಾಡುತ್ತಿದ್ದಾರೆ. ಗ್ರಾಮದ ರೈತರಿಗೆ ಯಾವುದೇ ಸಮಸ್ಯೆ ಎದುರಾದರೂ ಗ್ರಾಮಸ್ಥರ ಜತೆಗಿರುತ್ತೇನೆ.
| ನೆಹರು ಓಲೇಕಾರ, ಶಾಸಕ ಹಾವೇರಿ

ರೈತರ ಹಿತಕ್ಕೆ ನೀರು ತಂದರೆ ತಪ್ಪೇನು?

ಹಾವೇರಿ: ಲೋಕಸಭೆ ಚುನಾವಣೆಯಲ್ಲಿ ಕನವಳ್ಳಿ ಭಾಗದ ಜನರು ಬಿಜೆಪಿ ಬೆಂಬಲಿಸಿದ್ದರಿಂದ ಶಾಕ್ ಆಗಿರುವ ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಅಲ್ಲಿನ ಜನರ ವಿರುದ್ಧ ಸೇಡಿಗೆ ಮುಂದಾಗಿದ್ದಾರೆ ಎಂದು ಶಾಸಕ ನೆಹರು ಓಲೇಕಾರ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಟಿಪಿ ಯೋಜನೆ ಆರಂಭಗೊಂಡಿರುವ ಹಂತದಿಂದಲೂ ರೈತರು ಪಂಪ್​ಸೆಟ್​ಗಳನ್ನು ಹಚ್ಚಿ ನೀರು ಪಡೆಯುತ್ತಿದ್ದಾರೆ. ಸರ್ಕಾರ ಆದೇಶ ಮಾಡಿರುವುದು ಅಚ್ಚುಕಟ್ಟು ಪ್ರದೇಶಕ್ಕೆ ತೊಂದರೆಯಾಗದಂತೆ ನೀರು ಬಳಕೆ ಮಾಡಲು. ಅಲ್ಲದೆ, ಕಾಲುವೆಗೆ ನೀರು ಬಿಡುವುದು ಮಳೆಗಾಲದಲ್ಲಿ. ಆ ಸಮಯದಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿನ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಹೀಗಾಗಿ ಸಾವಿರಾರು ಪಂಪ್​ಸೆಟ್​ಗಳಿಂದ ನೀರೆತ್ತಲಾಗುತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ. ಕನವಳ್ಳಿಗೆ ನೀರು ತುಂಬಿಸಲು ಅಚ್ಚುಕಟ್ಟು ಪ್ರದೇಶದ ರೈತರ ವಿರೋಧವೂ ಇಲ್ಲ. ತೊಂದರೆಯಲ್ಲಿರುವ ಜನರಿಗೆ ನೀರು ಕೊಟ್ಟರೆ ಏಕೆ ಅಡ್ಡಿಪಡಿಸುತ್ತೀರಿ. ರೈತರ ಹಿತಕ್ಕೆ ನೀರು ತಂದರೆ ತಪ್ಪೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಗಡಿ ಕೆರೆ ಹೇಗೆ ತುಂಬಿಸಿದಿರಿ: ನಿಮ್ಮೂರು ಅಗಡಿಯ ಕೆರೆಯನ್ನು ಹೇಗೆ ತುಂಬಿಸಿದ್ದೀರಿ. ಆ ಸಮಯದಲ್ಲಿ ಕಾನೂನು ಕಾಯ್ದೆ ನೆನಪಿಗೆ ಬರಲಿಲ್ಲವೇ. ನಿಮ್ಮ ಅಭ್ಯರ್ಥಿಗೆ ಇಲ್ಲಿನ ಜನ ವೋಟು ಹಾಕಿಲ್ಲವೆಂದು ಸೇಡು ತೀರಿಸಿಕೊಳ್ಳಲು ಮುಂದಾಗಿದ್ದೀರಿ. ಇದಕ್ಕೆ ತಕ್ಕಪಾಠವನ್ನು ಜನ ಕಲಿಸಲಿದ್ದಾರೆ ಎಂದರು.

ಕಾನೂನಿಗಿಂತ ಉದ್ದೇಶ ಮುಖ್ಯ: ರುದ್ರಪ್ಪ ಲಮಾಣಿಯವರು ಕಾನೂನು ರೀತಿ ಕೆಲಸ ಮಾಡಿ ಎನ್ನುತ್ತಾರೆ. ಆದರೆ, ಕಾನೂನಿಗಿಂತ ಅಲ್ಲಿನ ಉದ್ದೇಶ ಮುಖ್ಯವಾಗಬೇಕು. ರೈತರ ಅನುಕೂಲಕ್ಕಾಗಿ ಈಗಿರುವ ಕಾಯ್ದೆ ಬದಲಾಯಿಸಲು ವಿಧಾನಸಭೆಯಲ್ಲಿ ಒತ್ತಡ ತರುತ್ತೇನೆ. ಕಾಯ್ದೆ ಮೂಲಕವೇ ನೀರು ಹರಿಸುತ್ತೇನೆ ಎಂದರು.

ಬಿಜೆಪಿ ಮುಖಂಡರಾದ ಅಶೋಕ ಬಣಕಾರ, ನಾಗಪ್ಪಜ್ಜ ಬಸೇಗಣ್ಣಿ, ಸಂಗಮೇಶ ಸುಳ್ಳಳ್ಳಿ, ನಾಗರಾಜ ಬಸೇಗಣ್ಣಿ, ಬಸವರಾಜ ಕಳಸೂರ, ಅಶೋಕ ಯಲಿಗಾರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಅಧಿಕಾರಿಗಳಿಗೆ ಹೆದರಿಸಿಲ್ಲ: ಜಿಪಂ ಸಿಇಒ ಅವರು ಕೊಟ್ರೇಶಪ್ಪ ಬಸೇಗಣ್ಣಿ ಅವರ ಚಾವಿ ಗೊಂಬೆಯಾಗಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ನಾನು ಅಧಿಕಾರಿಗಳನ್ನು ದಬಾಯಿಸಿದ್ದೇನೆ ಎಂದು ಸೇರಿಸಿದ್ದಾರೆ. ನಾನೆಲ್ಲಿಯೂ ಯಾವ ಅಧಿಕಾರಿಯನ್ನೂ ದಬಾಯಿಸಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ಕೆಲ ಅಧಿಕಾರಿಗಳು ಒಳ್ಳೆಯವರಿದ್ದಾರೆ. ಅವರಿಂದ ಜನರ ಕೆಲಸ ಮಾಡಿಸುತ್ತಿದ್ದೇನೆ. ಇದನ್ನು ಸಹಿಸಲು ಇವರಿಂದ ಆಗುತ್ತಿಲ್ಲ ಎಂದು ಓಲೇಕಾರ ಹರಿಹಾಯ್ದರು.

- Advertisement -

Stay connected

278,453FansLike
561FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...

VIDEO| ಈ​ ವಿಡಿಯೋ...

ಬೀಜಿಂಗ್​: ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ ಎಂಬುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ. ಚೀನಾದ ಯಾಂಗ್ಜೆ ನದಿಯಲ್ಲಿ ನಿಗೂಢವಾಗಿ ಹಾಗೂ ವಿಚಿತ್ರವಾಗಿ ಗೋಚರವಾದ ಕಪ್ಪುಬಣ್ಣದ ಜೀವಿಯನ್ನು ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ...

VIDEO: ದುರ್ಗಾಪೂಜಾ ಥೀಮ್​...

ಕೋಲ್ಕತ: ತೃಣಮೂಲ ಕಾಂಗ್ರೆಸ್​ನಿಂದ ನೂತನವಾಗಿ ಆಯ್ಕೆಯಾದ ಸಂಸದೆಯರಾದ ನುಸ್ರತ್ ಜಹಾನ್​ ಹಾಗೂ ಮಿಮಿ ಚಕ್ರಬರ್ತಿ ದುರ್ಗಾಪೂಜಾ ಹಾಡಿಗೆ ಮನಮೋಹಕವಾಗಿ ನೃತ್ಯ ಮಾಡಿದ್ದು ವಿಡಿಯೋ ಭರ್ಜರಿ ವೈರಲ್​ ಆಗಿದೆ. ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿರುವ ಈ...