ರಟ್ಟಿಹಳ್ಳಿ: ತಾಲೂಕಿನ ಬುಳ್ಳಾಪುರ ಗ್ರಾಮದ ದುರ್ಗಾದೇವಿ ದಸರಾ ಮಹೋತ್ಸವದಲ್ಲಿ 2 ವರ್ಷದ ಮಗುವನ್ನು ಕೈಯಲ್ಲಿ ಹಿಡಿದು ಕಿಚ್ಚು ಹಾಯ್ದಿದ್ದ ಅರ್ಚಕ ಬಸವರಾಜ ಮುಡಬಾಗಿಲು ಅವರಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ನೋಟಿಸ್ ಜಾರಿ ಮಾಡಿದೆ. ಅ. 25ರಂದು ಆಯೋಜಿಸಿದ್ದ ದಸರಾ ಮಹೋತ್ಸವದಲ್ಲಿ ಅರ್ಚಕ ಬಸವರಾಜ ಮುಡಬಾಗಿಲು ಕಿಚ್ಚು ಹಾಯುವ ಸಂದರ್ಭದಲ್ಲಿ ಕೈಯಲ್ಲಿ ಮಗವನ್ನು ಹಿಡಿದುಕೊಂಡಿದ್ದರು. ಇದು ಮಕ್ಕಳ ಹಕ್ಕುಗಳ ಕಾಯ್ದೆ ಉಲ್ಲಂಘನೆಯಾಗಿದೆ. ಈ ಕುರಿತು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ. ಈ ಘಟನೆಗೆ ಕಾರಣವೇನು? ಇದಕ್ಕೆ ಸಂಬಂಧಿಸಿದಂತೆ ನ. 2ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸಭೆಗೆ ಅರ್ಚಕರು ಮತ್ತು ಮಗುವಿನ ಪಾಲಕರು ಹಾಜರಾಗಿ ಸ್ಪಷ್ಟನೆ ನೀಡಬೇಕು ಎಂದು ಮಕ್ಕಳ ಕಲ್ಯಾಣ ಸಮಿತಿ ನೋಟಿಸ್ನಲ್ಲಿ ತಿಳಿಸಿದೆ.
VIDEO| ಅಗ್ನಿ ಕೊಂಡದಲ್ಲಿ ಮಗು ಹೊತ್ತೊಯ್ದ ಸ್ವಾಮೀಜಿ ನಡೆಗೆ ವ್ಯಾಪಕ ಆಕ್ರೋಶ..!