ಮೋದಿ ‘ನೀರೋ’ ಚಕ್ರವರ್ತಿ, ನೋಟುರದ್ದತಿ ಮೂರ್ಖ ನಿರ್ಧಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ರೋಮ್ ಹೊತ್ತಿಕೊಂಡು ಉರಿಯುತ್ತಿದ್ದಾಗ ಪಿಟೀಲು ಬಾರಿಸುತ್ತಿದ್ದ ರೋಮ್ ಚಕ್ರವರ್ತಿ ನೀರೋಗೆ ಹೋಲಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ‘ಅವರು ಕೈಗೊಂಡಿರುವ 500, 1000 ರೂಪಾಯಿ ಮುಖಬೆಲೆಯ ನೋಟು ನಿಷೇಧ ನಿರ್ಧಾರ ಮೂರ್ಖ ನಿರ್ಧಾರ’ ಎಂದು ಟೀಕಿಸಿದ್ದಾರೆ.

ಮೋದಿಯವರು ಪೇಟಿಎಂನಂತಹ ಇ-ವ್ಯಾಲೆಟ್ ಕಂಪೆನಿಗಳ ಹಿಡಿಯಷ್ಟು ಜನರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ನೋಟು ರದ್ದು ನಿರ್ಧಾರ ಕೈಗೊಂಡಿದ್ದಾರೆ. ಪೇಟಿಎಂ ಅಂದರೆ ಬೇರೇನೂ ‘ಪೇ ಟು ಮೋದಿ’ ಎಂದು ಅರ್ಥ ಎಂದು ಎಂದೂ ಅವರು ಹೇಳಿದ್ದಾರೆ. ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರೂಪಾಯಿಗಳ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ ಇ-ವ್ಯಾಲೆಟ್ ಕಂಪೆನಿಗಳು ವಿಶೇಷವಾಗಿ ಪೇಟಿಎಂಗೆ ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಒತ್ತು ಲಭಿಸಿದೆ.

‘ನಗದು ರಹಿತ (ಕ್ಯಾಶ್ಲೆಸ್) ಆರ್ಥಿಕತೆಯ ಐಡಿಯಾ ಹಿಂದೆ ಈ ವರ್ಗಾವಣೆಗಳ ಮೂಲಕ ಕೆಲವೇ ಕೆಲವು ವ್ಯಕ್ತಿಗಳು ಗರಿಷ್ಠ ಲಾಭ ಮಾಡಿಕೊಂಡಿದ್ದಾರೆ. ಇದು ದೇಶಕ್ಕೆ ಹಾನಿ ಉಂಟು ಮಾಡಿದೆ’ ಎಂದು ರಾಹುಲ್ ಗಾಂಧಿ ಅವರು ಸಂಸತ್ ಭವನದ ಆವರಣದಲ್ಲಿ ನೋಟು ನಿಷೇಧ ವಿರುದ್ಧ ನಡೆದ ವಿಪಕ್ಷ ಪ್ರತಿಭಟನೆಯಲ್ಲಿ ಮಾತನಾಡುತ್ತಾ ಹೇಳಿದರು.

‘ಅವರು ನನಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟರೆ ಪೇಟಿಎಂ ಎಂದರೆ ಪೇ ಟು ಮೋದಿ ಎಂದು ಹೇಗಾಗುತ್ತದೆ. ಇವರೊಳಗಿನ ಹೊಂದಾಣಿಕೆ ಏನು ಎಂಬುದನ್ನು ನಾನು ಬಯಲು ಮಾಡುವೆ’ ಎಂದು ರಾಹುಲ್ ಗುಡುಗಿದರು.

ಏಜೆನ್ಸೀಸ್.

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *