ಹುಕ್ಕೇರಿ: ಇನ್ನೂ ಸಿಕ್ಕಿಲ್ಲ ನಾಪತ್ತೆಯಾದವರು

ಹುಕ್ಕೇರಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಣೆಯಾದವರ ಪತ್ತೆಗೆ ಸ್ಥಳೀಯ ಪೊಲೀಸರು ಸಹಕಾರ ಕೋರಿದ್ದಾರೆ. 2016 ಡಿಸೆಂಬರ್ 8 ರಂದು ತಾಲೂಕಿನ ಯಾದಗೂಡ ಗ್ರಾಮದ ತನುಜಾ ಗೋವಿಂದ ರಾವಣ (21) ಪರೀಕ್ಷೆಗೆ ತೆರಳಿದವಳು ಇಲ್ಲಿವರೆಗೆ ಪತ್ತೆಯಾಗಿಲ್ಲ ಎಂದು ಯುವತಿಯ ಚಿಕ್ಕಪ್ಪ ದೂರು ದಾಖಲಿಸಿದ್ದಾರೆ.

ತಾಲೂಕಿನ ಸಾರಾಪುರ ಗ್ರಾಮದ ಪದ್ಮಶ್ರೀ ಆದಿನಾಥ ಹರಾರಿ(24) 2017ರ ಅ.28ರಂದು ಮನೆ ಬಿಟ್ಟು ಹೋಗಿದ್ದಾಳೆ.ಇಲ್ಲಿಯವರೆಗೆ ಅವಳ ಪತ್ತೆಯಾಗಿಲ್ಲ ಎಂದು ಅವಳ ಪತಿ ಆದಿನಾಥ ದೂರು ದಾಖಲಿಸಿದ್ದಾರೆ. ತಾಲೂಕಿನ ಶಿರಗಾಂವ ಗ್ರಾಮದ ಮಾನಸಿಕ ಅಸ್ವಸ್ಥೆ ಲಗಮವ್ವ ಮಹಾದೇವ ಮಾದರ (65)2017ರ ನ. 17ರಂದು ಶಿರಗಾಂವ ಪ್ಲಾಟ್‌ನಿಂದ ಗ್ರಾಮಕ್ಕೆ ಹೋದವಳು ಮರಳಿ ಬಂದಿಲ್ಲ ಎಂದು ಪುತ್ರಿ ದೂರು ನೀಡಿದ್ದಾರೆ.

ನಾಪತ್ತೆಯಾದವರ ಪತ್ತೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಹುಕ್ಕೇರಿ ಪೊಲೀಸರು ಕೋರಿದ್ದಾರೆ. ಮಾಹಿತಿ ಸಿಕ್ಕಲ್ಲಿ ಹುಕ್ಕೇರಿ ಪೊಲೀಸ್ ಠಾಣೆ ದೂ.ಸಂ. 08333-266033 ಅಥವಾ ಪಿಎಸ್‌ಐ ಮೊ. 9480804071 ಸಂಪರ್ಕಿಸಲು ಮನವಿ ಮಾಡಿದ್ದಾರೆ.